Bigg Boss Kannada 8: ಬಿಗ್ ಬಾಸ್ನಲ್ಲಿರುವ ಶುಭಾ ಪೂಂಜಾಗೆ ಅಶ್ಲೀಲ ಕಮೆಂಟ್; ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ವೇ? ನಟಿ ಪ್ರಶ್ನೆ!
ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗೆ ಒಂದು ಚರ್ಚೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲ ಟ್ರೋಲ್ ಪೇಜ್ಗಳು ಮನೆಯ ಒಳಗೆ ಹೋದವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ಉದಾಹರಣೆ ಕೂಡ ಇದೆ.
ನಟಿ ಶುಭಾ ಪೂಂಜಾ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದರು. ಇತ್ತೀಚೆಗೆ ಅವರಿಗೆ ಬೇಡಿಕೆ ಕಡಿಮೆ ಆಗಿದೆ ಎಂಬುದು ಗುಟ್ಟಿನ ವಿಚಾರವೇನಲ್ಲ. ಹೀಗಿರುವಾಗಲೇ ಅವರು ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ಮೊದಲ ದಿನವೇ ಕಣ್ಣೀರು ಕೂಡ ಹಾಕಿದ್ದಾರೆ. ಹೀಗಿರುವಾಗಲೇ ಅವರ ಬಗ್ಗೆ ಕೆಟ್ಟ ಕಮೆಂಟ್ ಒಂದು ಬಂದಿದೆ! ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ. ನಿಮಗೆ ಅಕ್ಕ ತಂಗಿ ಇದ್ದಾರೆ ಅಲ್ಲವೇ ಎಂದು ಕೂಡ ಕೇಳಿದ್ದಾರೆ! ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳ ಬಗ್ಗೆ ಹೊರಗೆ ಒಂದು ಚರ್ಚೆ ಇದ್ದೇ ಇರುತ್ತದೆ. ಸಾಮಾಜಿಕ ಜಾಲತಾಣದಲ್ಲಿರುವ ಕೆಲ ಟ್ರೋಲ್ ಪೇಜ್ಗಳು ಮನೆಯ ಒಳಗೆ ಹೋದವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ ಉದಾಹರಣೆ ಕೂಡ ಇದೆ. ಇದರ ಜತೆಗೆ ಬಿಗ್ ಬಾಸ್ ಮನೆಗೆ ತೆರಳಿದವರ ಆಪ್ತರು ಅಥವಾ ಕುಟುಂಬದವರು ಅವರ ಸೋಶಿಯಲ್ ಮೀಡಿಯಾವನ್ನು ಹ್ಯಾಂಡಲ್ ಮಾಡುತ್ತಾರೆ. ಈಗ ಬಿಗ್ ಬಾಸ್ ಮನೆಗೆ ತೆರಳಿದ ರಘು ಗೌಡ, ಶುಭಾ ಪೂಂಜಾ ಸೇರಿ ಅನೇಕರ ಸಾಮಾಜಿಕ ಖಾತೆಯನ್ನು ಅವರ ಕುಟುಂಬದವರೇ ನೋಡಿಕೊಳ್ಳುತ್ತಿದ್ದಾರೆ.
ಅದೇ ರೀತಿ ಶುಭಾ ಪೂಂಜಾ ಅವರ ಫೇಸ್ಬುಕ್ ಹ್ಯಾಂಡಲ್ ಮಾಡುತ್ತಿರುವವರು ಬಿಗ್ ಬಾಸ್ ಮನೆ ಒಳಗೆ ಅವರು ಇರುವ ಫೋಟೋ ಒಂದನ್ನು ಹಾಕಿದ್ದರು. ಈ ಫೋಟೋ ನೋಡಿದ ಕೆಲ ಅಭಿಮಾನಿಗಳು ಆಲ್ ದಿ ಬೆಸ್ಟ್ ಎಂದು ಕಮೆಂಟ್ ಹಾಕಿದ್ದರು. ಆದರೆ, ಕೆಲವರು ಮಾತ್ರ ಕೆಟ್ಟದಾಗಿ ಕಮೆಂಟ್ ಹಾಕಿದ್ದರು.
ಇದಕ್ಕೆ ಶುಭಾ ಪೂಂಜಾ ಫೇಸ್ಬುಕ್ ಖಾತೆಯಿಂದ ಉತ್ತರ ಸಿಕ್ಕಿದೆ. ನಿಮಗೂ ಅಕ್ಕ-ತಂಗಿ ಇದ್ದಾರೆ ಅಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಕೆಟ್ಟದಾಗಿ ಪ್ರಶ್ನೆ ಮಾಡಿದವರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನೂ ಓದಿ: ‘ಸುದೀಪ್ ಅಂಕಲ್.. ದಯವಿಟ್ಟು ಮನಸ್ಸು ಮಾಡಿ ನನಗೆ ಬಿಗ್ ಬಾಸ್ ಮನೆಗೆ ಹೋಗೋಕೆ ಅವಕಾಶ ಮಾಡಿಕೊಡಿ, ಪ್ಲೀಸ್!’
Published On - 5:54 pm, Tue, 2 March 21