ಪೊಲೀಸರ ಬಲೆಗೆ ಎಟಿಎಂ ವಂಚಕ, ಮನೆಗಳ್ಳರು

ಎಟಿಎಂ​ ಸೆಂಟರ್​ಗಳಲ್ಲಿ ದೀಪಕ್ ಮೋಸದಿಂದ ಹಣ ಡ್ರಾ ಮಾಡುತ್ತಿದ್ದ. ಪೊಲೀಸರ ತನಿಖೆಯ ವೇಳೆ ಈವರೆಗೆ 4ರಿಂದ 5 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ಪೊಲೀಸರ ಬಲೆಗೆ ಎಟಿಎಂ ವಂಚಕ, ಮನೆಗಳ್ಳರು
ಆರೋಪಿ ದೀಪಕ್(20)
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Mar 02, 2021 | 7:12 PM

ಬೆಂಗಳೂರು: ಎಟಿಎಂನಲ್ಲಿ ಮೋಸದಿಂದ ಹಣ ಡ್ರಾ ಮಾಡಿ ವಂಚನೆ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ವ್ಯಕ್ತಿಯನ್ನು ಬೆಂಗಳೂರಿನ ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ. ಸೆರೆ ಸಿಕ್ಕ ದೀಪಕ್​ನಿಂದ 52,000 ರೂಪಾಯಿ ನಗದು, 48 ಎಟಿಎಮ್​ ಕಾರ್ಡ್ ವಶಕ್ಕೆ ಪಡೆದುಕೊಳ್ಳಾಗಿದ್ದು, ಸದ್ಯ ಬಂಧಿತ ಆರೋಪಿ ಪೊಲೀಸರ ವಶದಲ್ಲಿದ್ದಾನೆ.

ಈತ ಹಣ ಡ್ರಾ ಮಾಡಲು ತನ್ನದೇ ಆದ ಒಂದು ಯೋಜನೆ ಹೂಡಿಕೊಂಡಿದ್ದ, ಅದರಂತೆ ಎಟಿಎಂ ಸೆಂಟರ್​ಗಳಲ್ಲಿ ದೀಪಕ್ ಮೋಸದಿಂದ ಹಣ ಡ್ರಾ ಮಾಡುತ್ತಿದ್ದು,ಇನ್ನು ಪೊಲೀಸರ ತನಿಖೆಯ ವೇಳೆ ಈವರೆಗೆ 4ರಿಂದ 5 ಲಕ್ಷ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ.

ದೀಪಕ್ ಊರಿಂದ ಬರುವಾಗ ಪರಿಚಯಸ್ಥರ ಎಟಿಎಂ​ ಕಾರ್ಡ್ ಪಡೆದು ಬರುತ್ತಿದ್ದ. ಬರುವ ವೇಳೆಯೇ ಕಮಿಷನ್ ಹಣ ನೀಡುವುದಾಗಿ ಹೇಳಿ ಎಟಿಎಂ​ ಕಾರ್ಡ್ ತೆಗೆದುಕೊಳ್ಳುತ್ತಿದ್ದ. ಊರಿಂದ ತಂದ ಇತರರ ಎಟಿಎಮ್ ಕಾರ್ಡ್​ಗಳನ್ನು ಹಾಕಿ ಪಿನ್ ಒತ್ತಿ ಹಣ ಡ್ರಾ ಮಾಡುತ್ತಿದ್ದ. ಬಳಿಕ ಎಟಿಎಂ​ ಮಿಷನ್ ಒಳಗಿಂದ ಹಣ ಬರುವ ಜಾಗದಲ್ಲಿ ಕೈ ಬೆರಳು ಅಡ್ಡ ಇಡುತ್ತಿದ್ದ.

ಈ ತಂತ್ರದ ಮೂಲಕ ಎಟಿಎಂ​ ಅನ್ನು ಕೆಲ ಕಾಲ ಫ್ರೀಜ್ ಆಗುವಂತೆ ಮಾಡುತ್ತಿದ್ದ. ಅದರಂತೆ ಎಟಿಎಂ​ ಕೆಲ ಕಾಲ ಸದ್ದು ಮಾಡದೆ ಹಾಗೆಯೇ ಇರುತ್ತಿತ್ತು. ನಂತರ ಹಣ ಪಡೆದುಕೊಂಡಾಗ ಸರ್ವರ್ ಹ್ಯಾಂಗ್ ಆಗುತ್ತಿತ್ತು. ಬಳಿಕ ದೀಪಕ್ ಸಂಬಂಧಪಟ್ಟ ಬ್ಯಾಂಕ್​ಗೆ ಹಣ ಬಂದಿಲ್ಲ ಎಂದು ಆನ್ ಲೈನ್​ ಮೂಲಕ ದೂರು ನೀಡುತ್ತಿದ್ದ. ದೂರನ್ನು ಗಂಭೀರವಾಗಿ ಪರಿಗಣಿಸಿದ ಬ್ಯಾಂಕ್ ಹಣವನ್ನು ಪಾವತಿ ಮಾಡುತ್ತಿತ್ತು. ಆ ಮೂಲಕ ದೀಪಕ್ ಬ್ಯಾಂಕಿನ ಖಾತೆಗೆ ಹಣವನ್ನು ಜಮೆ ಮಾಡಿಸಿಕೊಳ್ಳುತ್ತಿದ್ದ.

ಬೆಂಗಳೂರಿನಲ್ಲಿ ಮೂವರು ಕುಖ್ಯಾತ ಮನೆಗಳ್ಳರ ಬಂಧನ: ಮನೆ ಕಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ರೀಗನ್ (20), ಸಂಜಯ್ (18), ಜೋಸೆಫ್ (19) ಬಂಧಿತರು. ಈಗಾಗಲೇ ಕಳ್ಳತನ ಕೇಸ್‌ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಹೊರಬಂದರೂ ಕದಿಯುವುದನ್ನು ಮಾತ್ರ ಬಿಟ್ಟಿರಲಿಲ್ಲ. ಆರೋಪಿಗಳ ಬಂಧನದಿಂದ ಬೆಂಗಳೂರು, ಕೆಜಿಎಫ್ ವ್ಯಾಪ್ತಿಯ 6 ಪ್ರಕರಣಗಳು ಪತ್ತೆಯಾಗಿದ್ದು, ಬಂಧಿತರಿಂದ ಪೊಲೀಸರು 30 ಲಕ್ಷ ಮೌಲ್ಯದ 600 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ATM Theft | ಎಟಿಎಂಗೆ ತುಂಬಬೇಕಿದ್ದ ಹಣ ಎಗರಿಸಿ ಅತ್ತೆ ಮಗಳ ಜತೆ ಎಸ್ಕೇಪ್ ಆಗಿದ್ದ ಖದೀಮ ಅರೆಸ್ಟ್