Flipkart Apple Days sale: iPhoneಗಳಿಗೆ ಭರ್ಜರಿ ರಿಯಾಯಿತಿ; ತಿಂಗಳಿಗೆ ಕೇವಲ 899 ರೂ ಕಟ್ಟಿ iPhone 6 ಖರೀದಿಸಿ
Flipkart Apple Days sale 2021: ಆಪಲ್ ಡೇಸ್ನಲ್ಲಿ ಆಪಲ್ ಐಫೋನ್ಗಳು, ಆಪಲ್ ಮ್ಯಾಕ್ಬುಕ್ಗಳು ಹಾಗೂ ಆಪಲ್ ಐಪಾಡ್ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷ EMI ಸೌಲಭ್ಯಗಳ ಮೂಲಕವೂ ಆಪಲ್ ಉತ್ಪನ್ನಗಳನ್ನು ಕೊಳ್ಳಬಹುದಾಗಿದೆ.
ಪ್ರಸಿದ್ಧ ಇ-ಕಾಮರ್ಸ್ ವೆಬ್ಸೈಟ್ಗಳಾದ ಆಮೆಜಾನ್, ಫ್ಲಿಪ್ಕಾರ್ಟ್ ಮುಂತಾದವು ಪ್ರತೀ ತಿಂಗಳು ಗ್ಯಾಡ್ಜೆಟ್ ಉತ್ಪನ್ನಗಳಿಗೆ ಒಂದಿಲ್ಲೊಂದು ವಿಶೇಷ ಕೊಡುಗೆ ನೀಡುತ್ತಿರುತ್ತವೆ. ಹೀಗಾಗಿ ಬಹುತೇಕ ಮಂದಿ ಆನ್ಲೈನ್ ಶಾಪಿಂಗ್ ತಾಣಗಳ ಮೂಲಕವೇ ಮೊಬೈಲ್ ಫೋನ್ಗಳನ್ನು ಕೊಳ್ಳುತ್ತಿರುತ್ತಾರೆ. ಫ್ಲಿಪ್ಕಾರ್ಟ್ ಇ-ಕಾಮರ್ಸ್ ತಾಣವು ಈಗ ‘ಆಫಲ್ ಡೇಸ್’ ಸೇಲ್ಸ್ ಮೇಳವನ್ನು ಆರಂಭಿಸಿದೆ. ಈ ಮಾರಾಟ ಮಾರ್ಚ್ 1ರಿಂದ ಆರಂಭವಾಗಿ, ಮಾರ್ಚ್ 4ರವರೆಗೂ ಇರಲಿದೆ.
ಆಪಲ್ ಡೇಸ್ನಲ್ಲಿ ಆಪಲ್ ಐಫೋನ್ಗಳು, ಆಪಲ್ ಮ್ಯಾಕ್ಬುಕ್ಗಳು ಹಾಗೂ ಆಪಲ್ ಐಪಾಡ್ಗಳಿಗೆ ಅತ್ಯುತ್ತಮ ರಿಯಾಯಿತಿ ನೀಡಲಾಗುತ್ತಿದೆ. ವಿಶೇಷ EMI ಸೌಲಭ್ಯಗಳ ಮೂಲಕವೂ ಆಪಲ್ ಉತ್ಪನ್ನಗಳನ್ನು ಕೊಳ್ಳಬಹುದಾಗಿದೆ. ರಿಯಾಯಿತಿ ದರದಲ್ಲಿ ಐಫೋನ್ ಕೊಳ್ಳಬೇಕು, ಐಫೋನ್ ಬೇಕೇ ಬೇಕು ಎಂದು ಅಂದುಕೊಂಡವರು ಫೋನ್ ಕೊಳ್ಳಲು ಇದು ಸಕಾಲವಾಗಿದೆ.
ಐಫೋನ್ ಕೊಳ್ಳಬೇಕು ಎನ್ನುವುದು ಬಹಳಷ್ಟು ಜನರ ಕನಸಾಗಿರುತ್ತದೆ. ಬಹುತೇಕ ಶ್ರೀಮಂತರ, ಸೆಲೆಬ್ರಿಟಿಗಳ ಕೈಲಿರುವ ಈ ಫೋನ್ ಬಳಕೆದಾರರಿಗೆ ಸುರಕ್ಷತೆ ನೀಡುವ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಐಫೋನ್ ಹಿಡಿದು ಕನ್ನಡಿ ಮುಂದೆ ನಿಂತು ಫೊಟೊ ಕ್ಲಿಕ್ಕಿಸಿಕೊಳ್ಳುವವರೂ ಬಹಳಷ್ಟಿದ್ದಾರೆ. ಬಹುತೇಕ ಎಲ್ಲರಿಗೂ ಐಫೋನ್ ಎಂಬುದು ಕನಸು. ಆದರೆ, ಇದರ ದುಬಾರಿ ಬೆಲೆಯಿಂದಾಗಿ ಎಲ್ಲರ ಕೈಗೆ ಐಫೋನ್ ಸಿಗುವುದು ಕಷ್ಟ. ಅಂತಹ ಗ್ರಾಹಕರು ತಾವು ನಿರೀಕ್ಷೆ ಮಾಡಿರದ ಬೆಲೆಯಲ್ಲಿ ಈಗ ಐಫೋನ್ ಕೊಳ್ಳಬಹುದು.
899₹ ತಿಂಗಳ ಕಂತಿನಲ್ಲಿ iPhone 6 ಫ್ಲಿಪ್ಕಾರ್ಟ್ ಇ-ಕಾಮರ್ಸ್ ಸಂಸ್ಥೆ ಆಪಲ್ ಐಫೋನ್ 6ರ ಮೇಲೆ ಭಾರೀ ರಿಯಾಯಿತಿ ನೀಡುತ್ತಿದೆ. ಜತೆಗೆ, ಬ್ಯಾಂಕ್ ಆಫ್ ಬರೋಡಾ ಕೂಡ ಶೇ. 10ರಷ್ಟು ರಿಯಾಯಿತಿ ನೀಡುತ್ತಿದೆ. ತಿಂಗಳಿಗೆ ಕೇವಲ 899₹ ಪಾವತಿಸುವ ಮೂಲಕ ಕಂತುಗಳಲ್ಲೂ ಐಫೋನ್ ಖರೀದಿಸಬಹುದು.
iPhone SEಗೆ 7,901₹ ರಿಯಾಯಿತಿ iPhone SEಗೆ 7,901 ರೂಪಾಯಿ ರಿಯಾಯಿತಿ ನೀಡಲಾಗುತ್ತಿದೆ. ನಿಮ್ಮ ಬಳಿ ಬ್ಯಾಂಕ್ ಆಫ್ ಬರೋಡಾ ಕಾರ್ಡ್ಗಳಿದ್ದರೆ ಶೇ. 10ರಷ್ಟು ರಿಯಾಯಿತಿ ನೀಡಲಾಗುತ್ತಿದೆ. ಆಪಲ್ ಐಫೋನ್ ಎಸ್ಇ 4.7 ಇಂಚು, ರೆಟಿನಾ ಎಚ್ಡಿ ಮಾದರಿಯ ಐಪಿಎಸ್ ಎಲ್ಸಿಡಿ ಡಿಸ್ಪ್ಲೇಯನ್ನು ಹೊಂದಿದೆ. ವೈಟ್ ಬ್ಯಾಲೆನ್ಸ್ ಹೊಂದಿಸಿಕೊಳ್ಳಲು ಟ್ರೂ ಟೋನ್ ಟೆಕ್ ಕೂಡ ಇದೆ. ಇದು ಸಿಂಗಲ್ ಕ್ಯಾಮರಾ ಹೊಂದಿದ್ದು, 12 ಮೆಗಾಪಿಕ್ಸೆಲ್ (MP) ಸೆನ್ಸಾರ್ ಒಳಗೊಂಡಿದೆ. ಜತೆಗೆ 7MP ಸಾಮರ್ಥ್ಯದ ಸೆಲ್ಫೀ ಕ್ಯಾಮರಾವನ್ನೂ ಹೊಂದಿದೆ.
iPhone 11 Pro ಮೇಲೆ 26 ಸಾವಿರ ₹ ರಿಯಾಯಿತಿ! iPhone 11 Pro ಮೊಬೈಲ್ ಫೋನ್ ಮೇಲೆ 26 ಸಾವಿರ ರೂಪಾಯಿಗಳ ರಿಯಾಯಿತಿ ಲಭ್ಯವಾಗುತ್ತಿದೆ. 16,500 ರೂ.ಗಳ ಎಕ್ಸ್ಚೇಂಜ್ ಆಫರ್ ಈ ಫೋನ್ಗೆ ಇರಲಿದೆ. iPhone 12 Mini ಫೋನ್ನ್ನು ಕೂಡ 11,650 ರೂ. ಮಾಸಿಕ ಕಂತುಗಳಿಗೆ ಖರೀದಿಸಬಹುದಾಗಿದೆ. HDFC ಕಾರ್ಡ್ ಹೊಂದಿದ್ದವರಿಗೆ 6,000 ರೂ. ಗಳ ರಿಯಾಯಿತಿ ಇದೆ. ಐಫೋನ್ 12 Miniಯಲ್ಲೂ 16,500 ರೂ. ಎಕ್ಸ್ಚೇಂಜ್ ಆಫರ್ ಇರಲಿದೆ.
ಇದನ್ನೂ ಓದಿ: Poco M3: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 6 ಜಿಬಿ RAM, 6,000 mAh ಬ್ಯಾಟರಿ ಮೊಬೈಲ್ ಫೋನ್!
Credit card Benefits: ಕ್ರೆಡಿಟ್ ಕಾರ್ಡ್ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್ ಲಾಭಗಳು!
Published On - 3:52 pm, Tue, 2 March 21