Poco M3: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 6 ಜಿಬಿ RAM, 6,000 mAh ಬ್ಯಾಟರಿ ಮೊಬೈಲ್ ಫೋನ್!

Poco M3 ಕೂಲ್ ಬ್ಲೂ, ಪವರ್ ಬ್ಲಾಕ್ ಹಾಗೂ ಪೊಕೊ ಯೆಲ್ಲೊ ಬಣ್ಣಗಳಲ್ಲಿ ಬಳಕೆದಾರರಿಗೆ ಸಿಗಲಿದೆ. 6GB/ 64GB ಮೊಬೈಲ್ 10,999 ಮತ್ತು 6GB/ 128GB ಫೋನ್ 11,999 ರೂ. ಬೆಲೆಬಾಳಲಿದೆ.

Poco M3: ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ 6 ಜಿಬಿ RAM, 6,000 mAh ಬ್ಯಾಟರಿ ಮೊಬೈಲ್ ಫೋನ್!
POCO M3
Follow us
TV9 Web
| Updated By: ganapathi bhat

Updated on:Apr 06, 2022 | 8:22 PM

ಮೊಬೈಲ್, ಗ್ಯಾಡ್ಜೆಟ್ ಪ್ರಿಯರಿಗೆ ಹೊಸ ಸುದ್ದಿಯೊಂದು ಲಭ್ಯವಾಗಿದೆ. ಪೊಕೊ ಸಂಸ್ಥೆಯ ನೂತನ ಸ್ಮಾರ್ಟ್ ಫೋನ್ ಭಾರತೀಯ ಮಾರುಕಟ್ಟೆಗೆ ಇಂದು (ಫೆ.2) ಲಗ್ಗೆ ಇಟ್ಟಿದೆ. 10,999 ರೂಪಾಯಿ ಮುಖಬೆಲೆಯ ಪೊಕೊ ಎಮ್​3 (Poco M3) ಭಾರತದಲ್ಲಿ ಲಾಂಚ್ ಆಗಿದೆ. ಕ್ವಾಲ್​ಕಾಮ್ ಸ್ನಾಪ್​ಡ್ರಾಗನ್ 662 ಚಿಪ್​ಸೆಟ್, 6 ಜಿಬಿ RAM, 6,000 mAh ಬ್ಯಾಟರಿ ಬ್ಯಾಕಪ್ ಹೊಂದಿರುವ ಈ ಮೊಬೈಲ್ ಗ್ರಾಹಕ ಸ್ನೇಹಿ ದರದಲ್ಲಿ ಲಭ್ಯವಿದೆ.

Poco M3 ವಿಶೇಷಗಳೇನು? ಹೊಸ ಪೊಕೊ M3 ಮೊಬೈಲ್, 6.53 ಇಂಚುಗಳ, 1080 x 2340 ಪಿಕ್ಸೆಲ್ ರಿಸೊಲ್ಯೂಷನ್​ನ IPS LCD ಡಿಸ್​ಪ್ಲೇ ಹೊಂದಿದೆ. ಮೊಬೈಲ್ ಪರದೆಯು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3ಯ ರಕ್ಷಣೆಯನ್ನೂ ಹೊಂದಿದೆ. ಜೊತೆಗೆ, ಕ್ವಾಲ್​ಕಂ ಸ್ನಾಪ್​ಡ್ರಾಗನ್ 662 SoC, 6 GB RAM ಇದೆ. 64 GB ಇಂಟರ್​ನಲ್ ಸ್ಟೋರೇಜ್ ಅಥವಾ 128 GB ಇಂಟರ್​ನಲ್ ಸ್ಟೋರೇಜ್ ಬಳಕೆದಾರರ ಬೇಡಿಕೆಯಂತೆ ಸಿಗಲಿದೆ.

ಇದನ್ನೂ ಓದಿ: ಒಳ್ಳೇ ಸುದ್ದಿ | ಕಣ್ಣಿಲ್ಲದವರಿಗೂ ಸುಲಭವಾಗಿ ಮೊಬೈಲ್​ ಬಳಕೆ ಸಾಧ್ಯವಾಗಿಸಿದ ಸಾಧಕ ಈ ಎಂಜಿನಿಯರ್

ಕ್ಯಾಮರಾ ಸೌಲಭ್ಯಗಳು ಹೇಗಿದೆ? ಪೊಕೊ ಮೊಬೈಲ್​ನ ಕ್ಯಾಮರಾ ಹೇಗಿದೆ ಎಂಬ ಕುತೂಹಲ ಸಹಜವಾಗಿ ಇರಬಹುದು. ಅದಕ್ಕಿಲ್ಲಿ ಉತ್ತರವಿದೆ. ಪೊಕೊ ವಿಶೇಷವಾಗಿ ಟ್ರಿಪಲ್ ರೇರ್ ಕ್ಯಾಮರಾ ಹೊಂದಿದೆ. (3 ರೇರ್ ಕ್ಯಾಮರಾಗಳು) ಮತ್ತು ಒಂದು ಫ್ರಂಟ್ ಕ್ಯಾಮರಾ ಇದೆ. ಮುಖ್ಯ ಹಿಂಬದಿ (ರೇರ್) ಕ್ಯಾಮರಾ 48 MP, ಮತ್ತೆರಡು ರೇರ್ ಕ್ಯಾಮರಾಗಳು 2 MP ಮ್ಯಾಕ್ರೋ ಸೆನ್ಸಾರ್ ಹಾಗೂ 2 MP ಡೆಪ್ತ್ ಸೆನ್ಸಾರ್ ಹೊಂದಿರಲಿದೆ. 8 MP ಫ್ರಂಟ್ ಕ್ಯಾಮರಾ ಸೆಲ್ಫೀ ಅಂದ ಹೆಚ್ಚಿಸಲಿದೆ.

ಬ್ಯಾಟರಿ ಬ್ಯಾಕಪ್ ವಿಚಾರದಲ್ಲೂ ಪೊಕೊ ಉತ್ತಮ ಸಾಮರ್ಥ್ಯ ಹೊಂದಿದೆ. 6,000 mAh, 18 W ಫಾಸ್ಟ್ ಚಾರ್ಜಿಂಗ್ ಸಾಮರ್ಥ್ಯ ಈ ಫೋನ್​ಗೆ ಇರಲಿದೆ. ಬ್ಯಾಟರಿ ರಿವರ್ಸ್ ಚಾರ್ಜಿಂಗ್ ನೀಡುವ ಸಾಮರ್ಥ್ಯವನ್ನೂ ಹೊಂದಿರಲಿದೆ. USB Type-C port, ಫಿಂಗರ್​ಪ್ರಿಂಟ್ ಸ್ಕಾನರ್ ಕೂಡ ಈ ಫೋನ್​ಗಿದೆ. ಪೊಕೊ ಎಮ್​3 ಡುಯಲ್ ಬ್ಯಾಂಡ್ ವೈಫೈ, ಡುಯಲ್ VoLTE, ಡುಯಲ್ VoWiFi ಸೇವೆ ನೀಡಲಿದೆ. ಸ್ಟೀರಿಯೋ ಸ್ಪೀಕರ್​ಗಳೂ ಈ ಫೋನ್​ನಲ್ಲಿದೆ.

ಪೊಕೊ ಎಮ್​3 ಕೂಲ್ ಬ್ಲೂ, ಪವರ್ ಬ್ಲಾಕ್ ಹಾಗೂ ಪೊಕೊ ಯೆಲ್ಲೊ ಬಣ್ಣಗಳಲ್ಲಿ ಬಳಕೆದಾರರಿಗೆ ಸಿಗಲಿದೆ. 6GB/ 64GB ಮೊಬೈಲ್ 10,999 ಮತ್ತು 6GB/ 128GB ಫೋನ್ 11,999 ರೂ. ಬೆಲೆಬಾಳಲಿದೆ. ಹೊಸ ಗ್ಯಾಡ್ಜೆಟ್ ಪೊಕೊ ಎಮ್​3 ಟ್ವಿಟರ್​ನಲ್ಲಿ ಕೂಡ ಟ್ರೆಂಡಿಂಗ್​ನಲ್ಲಿದೆ. ಇಂಡಿಯಾ ಟ್ರೆಂಡಿಂಗ್​ನಲ್ಲಿ #POCOM3 ಎಂಬ ಹ್ಯಾಷ್​ಟ್ಯಾಗ್ 12.7K ರಿಟ್ವೀಟ್ ಪಡೆದಿದೆ.

ಕಾಸಿದ್ರೆ ಕೈಲಾಸ | 15 ಸಾವಿರ ಸಂಬಳದಲ್ಲಿ 12 ಸಾವಿರದ ಮೊಬೈಲ್ ಕೊಳ್ಳೋದು ಹೇಗೆ?

Published On - 4:11 pm, Tue, 2 February 21

ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ