ಮಿಸ್ಟರ್ ಪ್ರತಾಪ್ ಸಿಂಹ ಎಲ್ಲಿದ್ದೀರಾ ? ಕೊಡಗಿಗೆ ಏನು ಮಾಡಿದ್ದೀರಾ?: ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಗುಡುಗು
ಕೊಡಗಿನ ಜನ ಬಿಜೆಪಿ ಪಕ್ಷವನ್ನು ಇಂಜಕ್ಟ್ ಮಾಡಿಕೊಂಡಿದ್ದಾರೆ. ಅವರು ಹೇಗಿದ್ದರೂ ಮತ ಹಾಕುತ್ತಾರೆಂದು ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಅಲ್ಲಿನ ಜನರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿದೆ ಎಂದು ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಹೇಳಿದ್ದಾರೆ.
ಮೈಸೂರು: ಮಿಸ್ಟರ್ ಪ್ರತಾಪ್ ಸಿಂಹ ಎಲ್ಲಿದ್ದೀರಾ ? ಕೊಡಗಿಗೆ ಏನು ಮಾಡಿದ್ದೀರಾ? ರೋಡ್ ಚೆನ್ನಾಗಿದೆಯಾ ? ರಾಜ್ಯ ಸರ್ಕಾರದಿಂದ ಕೊಡಗು ಜಿಲ್ಲೆಗೆ ಮಂತ್ರಿ ಸ್ಥಾನ ಕೊಟ್ಟಿದ್ದಾರಾ? ಕನಿಷ್ಠ ಯಾವುದಾದರು ಬೋರ್ಡ್, ಚೇರ್ಮನ್ ಪದವಿಯನ್ನಾದರೂ ನೀಡಿದ್ದಾರಾ? ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಕಿಡಿಕಾರಿದರು.
ಕೊಡಗಿನ ಜನ ಬಿಜೆಪಿ ಪಕ್ಷವನ್ನು ಇಂಜಕ್ಟ್ ಮಾಡಿಕೊಂಡಿದ್ದಾರೆ. ಅವರು ಹೇಗಿದ್ದರೂ ಮತ ಹಾಕುತ್ತಾರೆಂದು ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಕಡೆಗಣಿಸಿದೆ. ಅಲ್ಲಿನ ಜನರು ಈ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕೇವಲ ಭಾವನಾತ್ಮಕವಾಗಿ ಹೇಳಿಕೆ ಕೊಟ್ಟು ಕಿಡಿ ಹೊತ್ತಿಸುವ ಹೇಳಿಕೆ ಕೊಟ್ಟು ಹೋಗುವುದಲ್ಲ. ಬದಲಿಗೆ ಮಾಡಿದ ಕೆಲಸವನ್ನು ತಿಳಿಸಬೇಕು. ಕೇಂದ್ರದ ಬಜೆಟ್‌ನಲ್ಲಿ ಹಳೆ ಮೈಸೂರು ಭಾಗಕ್ಕೆ ಯಾವ ಕೊಡುಗೆ ದೊರೆತಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇಂಟರ್ ನ್ಯಾಷನಲ್ ಏರ್ ಪೋರ್ಟ್ಗೆ ಎಲ್ಲಿಂದ ಹಣ ತಂದಿದ್ದೀರಿ ಹೇಳಿ? ಮೈಸೂರು ವಿಮಾನ ನಿಲ್ದಾಣವನ್ನ ಇಂಟರ್ ನ್ಯಾಷನಲ್ ಏರ್ ಪೋರ್ಟ್ ಮಾಡ್ತೀವಿ ಅಂತೀರಾ.. ಎಲ್ಲಿಂದ ಹಣ ತಂದಿದ್ದೀರಿ ಹೇಳಿ? ಎಂದು ಮೈಸೂರಿನಲ್ಲಿ ಪ್ರತಾಪ್ ಸಿಂಹ ವಿರುದ್ಧ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ ಕೇಳಿದರು.
Published On - 3:44 pm, Tue, 2 February 21