ಮಾವು ಬೆಳೆಗಾರರಲ್ಲಿ ಸಂತಸ: ಕಳೆದ ಬಾರಿಗಿಂತ ಈ ಬಾರಿ ಇಳುವರಿ ಹೆಚ್ಚಾಗುವ ಸಾಧ್ಯತೆ

ಹಣ್ಣಿನ ವ್ಯಾಪಾರಿಗಳು ಹೊಲದಲ್ಲಿ ಮರಗಳು ಹೂ ಬಿಟ್ಟಿರುವ ಪ್ರಮಾಣವನ್ನು ಗಮನಿಸಿ ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಮುಂಗಡ ಹಣನೀಡಿ ಗುತ್ತಿಗೆಗೆ ಪಡೆದಿದ್ದಾರೆ. ಕಾಯಿ ಬಲಿತು ಕೊಯ್ಲಿಗೆ ಬಂದ ಸಮಯದಲ್ಲಿ ಪೂರ್ಣ ಹಣಕೊಟ್ಟು ಕಿತ್ತುಕೊಂಡು ಹೋಗುತ್ತಾರೆ ಎಂದು ತಿಳಿದು ಬಂದಿದೆ.

ಮಾವು ಬೆಳೆಗಾರರಲ್ಲಿ ಸಂತಸ: ಕಳೆದ ಬಾರಿಗಿಂತ ಈ ಬಾರಿ ಇಳುವರಿ ಹೆಚ್ಚಾಗುವ ಸಾಧ್ಯತೆ
ಮಾವಿನ ಹೂವು ಬಿಟ್ಟಿರುವ ದೃಶ್ಯ
Follow us
preethi shettigar
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Feb 17, 2021 | 1:42 PM

ತುಮಕೂರು: ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಜಿಲ್ಲೆಯಲ್ಲಿ ಹಣ್ಣಿನ ರಾಜ ಮಾವು ಇಳುವರಿ ಹೆಚ್ಚಾಗಲಿದೆ. ಮಾವು ಬೆಳೆಗೆ ಬೇಕಾದ ಉತ್ತಮ ವಾತಾವರಣ ನಿರ್ಮಾಣವಾಗಿದ್ದು, ಉತ್ತಮ ಮಳೆ, ರೋಗ ಬಾಧೆ ನಿಯಂತ್ರಣಕ್ಕೆ ಬಂದಿರುವುದು ಉತ್ಪಾದನೆ ಹೆಚ್ಚಳಕ್ಕೆ ಕಾರಣವಾಗಿದೆ.

ಈ ಸಲ ಶೇಕಡಾ 30ರಿಂದ 40ರಷ್ಟು ಅಧಿಕ ಇಳುವರಿ ನಿರೀಕ್ಷಿಸಲಾಗಿದ್ದು, ಹಿಂದಿನ ವರ್ಷ ಮಳೆ ಕೊರತೆ, ರೋಗ ಬಾಧೆ ಮೊದಲಾದ ಕಾರಣಕ್ಕೆ ಉತ್ಪಾದನೆ ಸಾಕಷ್ಟು ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಸುಮಾರು 1.71 ಲಕ್ಷ ಮೆಟ್ರಿಕ್ ಟನ್‌ಗಳಷ್ಟೇ ಉತ್ಪಾದನೆಯಾಗಿತ್ತು. ಮಾವು ಬೆಳೆಯುವಲ್ಲಿ ಮುಂಚೂಣಿಯಲ್ಲಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದ ಹಣ್ಣು ತರಿಸಲಾಗಿತ್ತು. ಆದರೆ ಈ ಸಲ ಜಿಲ್ಲೆಯಲ್ಲಿಯೇ ಉತ್ತಮ ಇಳುವರಿ ನಿರೀಕ್ಷಿಸಿದ್ದು, 2 ಲಕ್ಷ ಮೆಟ್ರಿಕ್ ಟನ್ ವರೆಗೂ ಉತ್ಪಾದನೆ ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ.

ಉತ್ತಮ ವಾತಾವರಣ: ಡಿಸೆಂಬರ್ ತಿಂಗಳ ವರೆಗೂ ಉತ್ತಮ ಮಳೆಯಾಗಿದ್ದು, ಬೆಳೆಗೆ ಸಹಕಾರಿಯಾಗಿದೆ. ಚಂಡಮಾರುತದ ಪರಿಣಾಮ ಜನವರಿಯಲ್ಲಿ ಬಂದ ಮಳೆಯಿಂದ ರೋಗ ಹೆಚ್ಚಾಗಿ, ಇಳುವರಿ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಲಾಗುತಿತ್ತು. ಈ ಸಂದರ್ಭದಲ್ಲಿ ಬೂದಿ ರೋಗ, ಹೂ ಕೊಳೆಯುವ ರೋಗ ಕಾಣಿಸಿಕೊಂಡಿತ್ತು. ನಂತರ ಮಳೆ ನಿಂತು, ಔಷದೋಪಚಾರದಿಂದ ರೋಗ ನಿಯಂತ್ರಣಕ್ಕೆ ಬಂದಿದ್ದು, ನಂತರದ ದಿನಗಳಲ್ಲಿ ಶುಷ್ಕ ವಾತಾವರಣ ನಿರ್ಮಾಣವಾಗಿ ಬೆಳೆಗೆ ಪೂರಕವಾಗಿದೆ. ಸದ್ಯ ಮಾವು ರೈತರ ಮುಖದಲ್ಲೂ ಹರ್ಷ ಮೂಡಿದೆ.

ಮಾವಿನ ತೋಪಿನ ಚಿತ್ರಣ

ಮರದಲ್ಲಿ ಬಿಟ್ಟ ಎಲ್ಲಾ ಹೂವಿನಲ್ಲೂ ಕಾಯಿ ಕಟ್ಟುವುದಿಲ್ಲ. ಸಾಕಷ್ಟು ಸಂಖ್ಯೆಯಲ್ಲಿ ಉದುರಿ ಹೋಗುತ್ತವೆ. ಈ ಸಲ ಹೂವು ಉದುರುವ ಪ್ರಮಾಣ ಕಡಿಮೆ ಇದೆ. ಹಾಗಾಗಿ ಮರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಗಳು ಕಂಡುಬರುತ್ತಿವೆ. ಈ ಕಾಯಿಗಳಲ್ಲೂ ಕೆಲವು ಉದುರುತ್ತವೆ. ಆದರೂ ಈಗಿನ ವಾತಾವರಣವನ್ನು ಗಮನಿಸಿದರೆ ಇಳುವರಿ ಉತ್ತಮವಾಗಿರುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ಮಾವಿನ ಮರಗಳಲ್ಲಿನ ಹೂ

ಮರ ಗುತ್ತಿಗೆ: ಏಪ್ರಿಲ್ ವೇಳೆಗೆ ಜಿಲ್ಲೆಯ ಮಾವು ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬಾದಾಮಿ, ರಸಪುರಿ, ನಿಲಾಂಬರಿ ತಳಿಯ ಮಾವುಗಳು ಹೇರಳವಾಗಿದ್ದು, ಮೇ ತಿಂಗಳ ನಂತರ ಮಾರುಕಟ್ಟೆಗೆ ಬರಲಿದ್ದು, ಅದಕ್ಕೂ ಮುನ್ನ ಜಿಲ್ಲೆಯ ಮಾವಿನ ಹಣ್ಣನ್ನು ಜನರು ಸವಿಯಬಹುದಾಗಿದೆ. ಇನ್ನು ಇದರಿಂದ ಉತ್ತಮ ಬೆಳೆಯೂ ಸಿಗುವ ನಿರೀಕ್ಷೆಯಲ್ಲಿ ರೈತರು ಇದ್ದಾರೆ.

ಹಣ್ಣಿನ ವ್ಯಾಪಾರಿಗಳು ಹೊಲದಲ್ಲಿ ಮರಗಳು ಹೂ ಬಿಟ್ಟಿರುವ ಪ್ರಮಾಣವನ್ನು ಗಮನಿಸಿ ಬೆಲೆ ನಿಗದಿಪಡಿಸಿಕೊಂಡು ರೈತರಿಗೆ ಮುಂಗಡ ಹಣನೀಡಿ ಗುತ್ತಿಗೆಗೆ ಪಡೆದಿದ್ದಾರೆ. ಕಾಯಿ ಬಲಿತು ಕೊಯ್ಲಿಗೆ ಬಂದ ಸಮಯದಲ್ಲಿ ಪೂರ್ಣ ಹಣಕೊಟ್ಟು ಕಿತ್ತುಕೊಂಡು ಹೋಗುತ್ತಾರೆ ಎಂದು ತಿಳಿದು ಬಂದಿದೆ.

mango yield 3

ನಿರೀಕ್ಷೆ ಹೆಚ್ಚಿಸಿದ ಮಾವು ಬೆಳೆ

ಈಗಾಗಲೇ ಮಾವಿನ ತೋಟವನ್ನು ರೈತರು ಉತ್ತಮ ಬೆಲೆಗೆ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳು ಮರದಲ್ಲಿ ಬಿಟ್ಟಿರುವ ಹೂವನ್ನು ಗಮನಿಸಿ ಬೆಲೆ ನಿಗದಿಪಡಿಸಿ ಮುಂಗಡ ಹಣ ನೀಡಿದ್ದಾರೆ. ಒಳ್ಳೇ ರೇಟ್ ಸಿಕ್ಕಿದೆ ಎಂದು ತಾಲ್ಲೂಕಿನ ಕಣಕುಪ್ಪೆ ಗ್ರಾಮದ ರೈತ ನಾಗೇಶ್ ತಿಳಿಸಿದರು.

ಪ್ರದೇಶ ಹೆಚ್ಚಳ: ಪ್ರಸ್ತುತ ಜಿಲ್ಲೆಯಲ್ಲಿ 20,469 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಮಾವು ಬೆಳೆಯುವ ಪ್ರದೇಶ ವಿಸ್ತಾರವಾಗುತ್ತಿದ್ದು, ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶೇ 20ರಷ್ಟು ಹೆಚ್ಚಳವಾಗಿದೆ. ಇನ್ನು ತುಮಕೂರು 5,690;47,347, ಗುಬ್ಬಿ 6,877;68,799, ಕುಣಿಗಲ್ 3,374;25,134, ತಿಪಟೂರು 216;2,750, ತುರುವೇಕೆರೆ 234;1,923, ಕೊರಟಗೆರೆ 726;7,137, ಮಧುಗಿರಿ 759;3,516, ಶಿರಾ 951;8,743, ಪಾವಗಡ1,367;4,327, ಒಟ್ಟು 20,465;1,71,284 ವಿಸ್ತೀರ್ಣ ಹೆಚ್ಚಾಗಿದೆ.

Taiwan Guava Plantation in Kolar ಕುಂಬಳಕಾಯಿ ರೀತಿ ಕಾಣುವ ಈ ಸೀಬೆ ಹಣ್ಣಿನ ತೂಕವೂ ಹೆಚ್ಚು, ಬೆಲೆಯ ತೂಕವೂ ಹೆಚ್ಚು!

Published On - 5:12 pm, Tue, 2 February 21