ACB Raid ಬಯಲಾಗುತ್ತಿದೆ ಅಧಿಕಾರಿಗಳ ಭ್ರಷ್ಟಾಚಾರ.. ನೀರಾವರಿ ಎಂಜಿನಿಯರ್ ಪತ್ನಿ, ಅಳಿಯನ ಹೆಸರಲ್ಲೂ ಇದೆ ಲಾಕರ್
ACB Raid ದಾಳಿ ವೇಳೆ 27 ಎಕರೆ ಆಸ್ತಿ ಖರೀದಿಸಿರುವ ದಾಖಲೆ, ಚೆಕ್ಬುಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಲಾಕರ್‌ನಲ್ಲಿ 56.60 ಲಕ್ಷ ಹಣ, ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ. ಹಾಗೂ ಇಇ ದೇವರಾಜ್ ಪತ್ನಿ, ಅಳಿಯನ ಹೆಸರಲ್ಲಿ ಲಾಕರ್ ಇದೆ.
ಹುಬ್ಬಳ್ಳಿ: ಬಗೆದಷ್ಟೂ ಹೊರಬರ್ತಿದೆ ನುಂಗಣ್ಣರ ಬ್ರಹ್ಮಾಂಡ ಭ್ರಷ್ಟಾಚಾರ. ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಮನೆಯಲ್ಲಿ ಕೈ ಇಟ್ಟಲ್ಲೆಲ್ಲಾ ಹಣ ಸಿಗುತ್ತಿದೆ. ಸಣ್ಣ ನೀರಾವರಿ ಇಲಾಖೆ ಇಇ ದೇವರಾಜ್ ಶಿಗ್ಗಾಂವಿ ಮನೆ ಸೇರಿದಂತೆ ಏಕಕಾಲಕ್ಕೆ ನಗರದ ಮೂರು ಕಡೆಗಳಲ್ಲಿ ಎಸಿಬಿ ಟೀಂ ದಾಳಿ ನಡೆಸಿದೆ.
ದಾಳಿ ವೇಳೆ 27 ಎಕರೆ ಆಸ್ತಿ ಖರೀದಿಸಿರುವ ದಾಖಲೆ, ಚೆಕ್ಬುಕ್ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಲಾಕರ್‌ನಲ್ಲಿ 56.60 ಲಕ್ಷ ಹಣ, ಅರ್ಧ ಕೆಜಿ ಚಿನ್ನ ಪತ್ತೆಯಾಗಿದೆ. ಹಾಗೂ ಇಇ ದೇವರಾಜ್ ಪತ್ನಿ, ಅಳಿಯನ ಹೆಸರಲ್ಲಿ ಲಾಕರ್ ಇದೆ. ಈ ಹಿನ್ನೆಲೆಯಲ್ಲಿ ದೇವರಾಜ್ ಮತ್ತು ಆತನ ಪತ್ನಿಯನ್ನ ಸಿಬ್ಬಂದಿ ಬ್ಯಾಂಕ್‌ಗೆ ಕರೆದೊಯ್ದಿದ್ದಾರೆ. ಇನ್ನು ಮಾವನ ಹೆಸರಿನಲ್ಲಿಯೂ ಬ್ಯಾಂಕ್ ಲಾಕರ್ ಪತ್ತೆಯಾಗಿದೆ. ಸದ್ಯ ಆ ಲಾಕರ್ಗಳನ್ನ ಓಪನ್ ಮಾಡಲು ಎಸಿಬಿ ಫ್ಲ್ಯಾನ್ ಮಾಡಿಕೊಂಡಿದೆ.
ಭ್ರಷ್ಟ ಅಧಿಕಾರಿ ಪಾಂಡುರಂಗ ಮನೆಯಲ್ಲಿ ‘ಅಕ್ರಮ ಸಾಮ್ರಾಜ್ಯ’ ಬೆಂಗಳೂರು ಪ್ರಾಂತದ ಸಹಕಾರ ಸಂಘಗಳ ಜಂಟಿ ನಿಬಂಧಕ ಪಾಂಡುರಂಗನ ಮನೆಯಲ್ಲಿ ಕಂತೆ ಕಂತೆ ನೋಟು, ರಾಶಿ ರಾಶಿ ಬೆಳ್ಳಿ, ಚಿನ್ನಾಭರಣಗಳು ಪತ್ತೆಯಾಗಿವೆ. ಹೀಗಾಗಿ ವಿಜಯನಗರದ ನಿವಾಸಕ್ಕೆ ಎರಡು ವಾಹನಗಳಲ್ಲಿ 6ಕ್ಕೂ ಹೆಚ್ಚು ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಎಸಿಬಿ ಡಿವೈಎಸ್ಪಿ ಸಿ.ಆರ್. ಗೀತಾ ನೇತೃತ್ವದ ತಂಡದಿಂದ ದಾಳಿ ನಡೆದಿದ್ದು ಪಾಂಡುರಂಗ ಮನೆಗೆ ಪ್ರಿಂಟರ್ ತರಿಸಿಕೊಳ್ಳಲಾಗಿದೆ.
ಕೋಲಾರದ ಡಿಹೆಚ್ಒ ಮನೆಯಲ್ಲಿಯೂ ಆಸ್ತಿ ಪತ್ರಗಳು ಪತ್ತೆಯಾಗಿವೆ. ಡಿಹೆಚ್ಒ ಕಚೇರಿಯಲ್ಲಿ 22 ಅಧಿಕಾರಿಗಳಿಂದ ತಲಾಶ್ ನಡೆಯುತ್ತಿದೆ. ಡಾ. ವಿಜಯ್ ಕುಮಾರ್ಗೆ ಸೇರಿದ 6 ಕಡೆಗಳಲ್ಲಿ ಎಸಿಬಿ ಟೀಂ ಮಹತ್ವದ ದಾಖಲೆ ಪರಿಶೀಲನೆ ಮಾಡ್ತಿದ್ದಾರೆ. ಸಂಜೆ ವೇಳೆ ಆಸ್ತಿ ಬಗ್ಗೆ ಸಂಪೂರ್ಣ ಮಾಹಿತಿ ಸಿಗೋ ಸಾಧ್ಯತೆ ಇದೆ.
ಅಕ್ರಮ ಆಸ್ತಿ ಗಳಿಕೆ ಆರೋಪ, ರಾಜ್ಯದ 7 ಅಧಿಕಾರಿಗಳ ಮನೆಗಳ ಮೇಲೆ ACB ರೇಡ್
ACB Raid ಟಿಪಿಒ ಜಯರಾಜ್ ಮನೆಯಲ್ಲಿ ಭಾರೀ ಆಸ್ತಿ ಪತ್ತೆ, ಕೇರಳದಲ್ಲಿರುವ ಪತ್ನಿಯ ಕ್ವಾರ್ಟರ್ಸ್ ಮೇಲೂ ದಾಳಿ