Credit card Benefits: ಕ್ರೆಡಿಟ್ ಕಾರ್ಡ್ನಿಂದ ನಿಮಗೆ ಸಿಗಲಿದೆ ಈ ಐದು ಸೀಕ್ರೆಟ್ ಲಾಭಗಳು!
ಇ-ಕಾಮರ್ಸ್ ತಾಣಗಳು ಕ್ರೆಡಿಟ್ ಕಾರ್ಡ್ ಮೇಲೆ ಸಾಕಷ್ಟು ಆಫರ್ಗಳನ್ನು ಕೂಡ ನೀಡುತ್ತಿವೆ. ಹಾಗಾದರೆ, ಕ್ರೆಡಿಟ್ ಕಾರ್ಡ್ನಿಂದ ಆಗುವ ಲಾಭಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
ಕ್ರೆಡಿಟ್ ಕಾರ್ಡ್ ಕಂಡರೆ ಇಂದಿಗೂ ಅನೇಕರಿಗೆ ಭಯವಿದೆ. ಕ್ರೆಡಿಟ್ ಕಾರ್ಡ್ ಬಳಕೆ ಮಾಡಲು ಆರಂಭಿಸಿದರೆ ಸಾಲದಲ್ಲಿದ್ದಂತೆ ಭಾಸವಾಗುತ್ತದೆ ಎಂಬುದು ಅನೇಕರ ನಂಬಿಕೆ. ಆದರೆ, ಕ್ರೆಡಿಕ್ ಕಾರ್ಡ್ ಬಳಕೆಯಿಂದ ನಿಮಗೆ ಗೊತ್ತಿಲ್ಲದೆ ಇರುವ ಅನೇಕ ಲಾಭಗಳಿವೆ. ಹೀಗಾಗಿ, ಕ್ರೆಡಿಟ್ ಕಾರ್ಡ್ ಸರಿಯಾಗಿ ಬಳಕೆ ಮಾಡಿಕೊಂಡರೆ ನಿಮ್ಮ ಆರ್ಥಿಕ ಯೋಜನೆಗೆಳಿಗೆ ಹೊಸ ಅರ್ಥ ಬರಲಿದೆ. ಆಧುನಿಕ ಯುಗದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆ ನಿಧಾನವಾಗಿ ಹೆಚ್ಚುತ್ತಿದೆ. ಅಷ್ಟೇ ಅಲ್ಲ, ಇ-ಕಾಮರ್ಸ್ ತಾಣಗಳು ಕ್ರೆಡಿಟ್ ಕಾರ್ಡ್ ಮೇಲೆ ಸಾಕಷ್ಟು ಆಫರ್ಗಳನ್ನು ಕೂಡ ನೀಡುತ್ತಿವೆ. ಹಾಗಾದರೆ, ಕ್ರೆಡಿಟ್ ಕಾರ್ಡ್ನಿಂದ ಆಗುವ ಲಾಭಗಳೇನು ಎನ್ನುವ ಬಗ್ಗೆ ಇಲ್ಲಿದೆ ವಿವರ.
1. ಸಿಬಿಲ್ ಸ್ಕೋರ್ ಹೆಚ್ಚುತ್ತದೆ.. ನೀವು ಬ್ಯಾಂಕ್ಗೆ ಹೋಗಿ ಸಾಲ ಕೇಳಿದರೆ, ಅವರು ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೆ. ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ನಿಮಗೆ ಸುಲಭವಾಗಿ ಸಾಲ ದೊರೆಯುತ್ತದೆ. ಸಿಬಿಲ್ ಸ್ಕೋರ್ ಹೆಚ್ಚುವಲ್ಲಿ ಕ್ರೆಡಿಟ್ ಕಾರ್ಡ್ನ ಪಾತ್ರ ದೊಡ್ಡದಿದೆ. ನೀವು ಕ್ರೆಡಿಟ್ ಕಾರ್ಡ್ ಬಳಕೆ ಮಾಡಿ, ನಂತರ ಸರಿಯಾದ ಸಮಯಕ್ಕೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಿದರೆ, ಸಿಬಿಲ್ ಸ್ಕೋರ್ ಹೆಚ್ಚಲಿದೆ.
2.ಕ್ಯಾಶ್ಬ್ಯಾಕ್ ಆಫರ್ಗಳು.. ಪ್ರತಿ ವರ್ಷ ಹಬ್ಬದ ಸಮಯದಲ್ಲಿ ಅಥವಾ ವಿಶೇಷ ಸಂದರ್ಭದಲ್ಲಿ ಇ-ಕಾಮರ್ಸ್ ತಾಣಗಳು ಸಾಕಷ್ಟು ಆಫರ್ಗಳನ್ನು ನೀಡುತ್ತವೆ. ಅಲ್ಲದೆ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ಮೊಬೈಲ್ ಅಥವಾ ಯಾವುದೇ ವಸ್ತುವನ್ನು ಖರೀದಿಸಿದರೆ ನಿಮಗೆ ಆಫರ್ ಸಿಗುತ್ತದೆ. ಕೆಲವೊಮ್ಮೆ ಕ್ಯಾಶ್ಬ್ಯಾಕ್ ಸಿಕ್ಕರೆ, ಕೆಲವೊಮ್ಮೆ ಶೇ 5-15 ಆಫ್ ಸಿಗುತ್ತದೆ. ಅಷ್ಟೇ ಅಲ್ಲದೆ, ಕ್ರೆಡಿಟ್ ಕಾರ್ಡ್ ಬಳಕೆಯಿಂದ ನಿಮಗೆ ಪಾಯಿಂಟ್ಸ್ ರಿವಾರ್ಡ್ಗಳು ಕೂಡ ಸಿಗಲಿವೆ.
3.ನೀವು ಎಷ್ಟು ಖರ್ಚು ಮಾಡಿದ್ದೀರಿ ಎನ್ನುವುದು ಗೊತ್ತಾಗುತ್ತದೆ.. ನೀವು ತಿಂಗಳಿಡೀ ಶಾಪಿಂಗ್ ಮಾಡುತ್ತೀರಿ. ಆದರೆ, ಮಾಸಾಂತ್ಯಕ್ಕೆ ನೀವು ಯಾವುದರ ಮೇಲೆ ಎಷ್ಟು ಹಣ ಪಾವತಿ ಮಾಡಿದ್ದೀರಿ ಎನ್ನುವುದು ಗೊತ್ತಾಗುವುದಿಲ್ಲ. ಆದರೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದರೆ ನಿಮಗೆ ಸುಲಭವಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ ಎನ್ನುವುದು ಗೊತ್ತಾಗುತ್ತದೆ. ಕ್ರೆಡಿಟ್ ಕಾರ್ಡ್ ಸ್ಟೇಟ್ಮೆಂಟ್ ಪಡೆಯುವ ಮೂಲಕ ನೀವು ಯಾವುದರ ಮೇಲೆ ಎಷ್ಟು ಹಣ ಖರ್ಚು ಮಾಡಿದ್ದೀರಿ ಎನ್ನುವುದನ್ನು ತಿಳಿಯಬಹುದು!
4.ಕಾರ್ಡ್ಗಳಿಗೆ ಇರುತ್ತೆ ವಿಶೇಷ ಆಫರ್ ನೀವು ಬಳಕೆ ಮಾಡುವ ಕ್ರೆಡಿಟ್ ಕಾರ್ಡ್ನಲ್ಲಿ ಕೆಲವೊಮ್ಮೆ ವಿಶೇಷ ಆಫರ್ಗಳನ್ನು ಬ್ಯಾಂಕ್ನವರು ನೀಡಿರುತ್ತಾರೆ. ಯಾವ ಯಾವ ಆಫರ್ಗಳು ಇದರಲ್ಲಿ ಇವೆ ಎನ್ನುವದನ್ನು ತಿಳಿದುಕೊಳ್ಳಿ. ಈ ಮೂಲಕ ಅದರ ಪೂರ್ತಿ ಬೆನಿಫಿಟ್ ಪಡೆಯಿರಿ.
5.ಒಂದು ತಿಂಗಳ ಹಣಕ್ಕೆ ಸಿಗುತ್ತೆ ಬಡ್ಡಿ! ಕ್ರೆಡಿಟ್ ಕಾರ್ಡ್ನಲ್ಲಿ ನೀವು ಬಿಲ್ ಪಾವತಿ ಮಾಡುವುದರಿಂದ ಒಂದು ತಿಂಗಳ ಬಡ್ಡಿ ನಿಮಗೆ ಸಿಗಲಿದೆ. ಇದು ಹೇಗೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. ನೀವು ಫೆಬ್ರವರಿ 6ರಂದು ಕ್ರೆಡಿಟ್ ಕಾರ್ಡ್ ಮೂಲಕ 20 ಸಾವಿರ ರೂಪಾಯಿಯ ವಸ್ತುವನ್ನು ಖರೀದಿ ಮಾಡುತ್ತೀರಿ. 6ನೇ ತಾರೀಕಿಗೆ ಇದನ್ನು ನೀವು ಖರೀದಿಸಿದರೂ ಇದಕ್ಕೆ ಬಿಲ್ ಪೇ ಮಾಡಲು ನಿಮಗೆ ಮಾರ್ಚ್ 5ರವರೆಗೆ ಅವಕಾಶ ಇರಲಿದೆ. ಅಲ್ಲಿಯವರೆಗೆ 20 ಸಾವಿರ ರೂಪಾಯಿ ನಿಮ್ಮ ಖಾತೆಯಲ್ಲೇ ಇರಲಿದೆ. ಅದಕ್ಕೆ ಬಡ್ಡಿ ಕೂಡ ನಿಮಗೆ ಸಿಗಲಿದೆ.
ಇದನ್ನೂ ಓದಿ: ಕ್ರೆಡಿಟ್ ರೇಟಿಂಗ್ ಎಂದರೇನು? ಆರ್ಥಿಕ ಸಮೀಕ್ಷೆಯಲ್ಲಿ ಭಾರತ ಅಷ್ಟೇಕೆ ತಕರಾರು ಮಾಡಿತು?