ಅಡಿಕೆ ಬೆಳೆಗಾರರು ಆತಂಕ ಪಡುವ ಅಗತ್ಯವಿಲ್ಲ: ಬೆಳೆಗಾರರಿಗೆ ಯಡಿಯೂರಪ್ಪ ಅಭಯ
ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ತಪ್ಪು ಕಲ್ಪನೆ ಇದೆ. ಅಡಿಕೆ ಬೆಳೆಗಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅದನ್ನು ಹೋಗಲಾಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಶಿವಮೊಗ್ಗ: ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂಬ ತಪ್ಪು ಕಲ್ಪನೆ ಇದೆ. ಅಡಿಕೆ ಬೆಳೆಗಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಅದನ್ನು ಹೋಗಲಾಡಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. ಅಡಿಕೆ ಬೆಳೆಗಾರರಿಗೆ ನಾನು ಭರವಸೆ ನೀಡುತ್ತೇನೆ ಎಂದು ಹೇಳಿದ ಯಡಿಯೂರಪ್ಪ ಪ್ರಧಾನಿಯವರ ಜೊತೆ ಈ ಬಗ್ಗೆ ಸಮಾಲೋಚನೆ ನಡೆಸುತ್ತೇನೆ ಎಂದು ಸ್ಪಷ್ಟಪಡಿಸಿದರು.
ಸುಪ್ರೀಂಕೋರ್ಟ್ನಲ್ಲಿ ಅಡಿಕೆ ಹಾನಿಕಾರಕ ಎಂಬ ಪ್ರಕರಣವಿದೆ. ಅಡಿಕೆಯು ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು ಸಂಶೋಧನಾ ವರದಿ ಬರುವವರೆಗೂ ಸುಪ್ರೀಂ ಕೋರ್ಟ್ನಲ್ಲಿರುವ ಅಡಿಕೆ ಪ್ರಕರಣವನ್ನು ಇತ್ಯರ್ಥ ಮಾಡಬಾರೆಂದು ಕೇಂದ್ರ ಸರ್ಕಾರದ ಮೂಲಕ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಲು ಸಭೆಯೊಂದರಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ರಾಜ್ಯ ಅಡಿಕೆ ಕಾರ್ಯಪಡೆ ಅಧ್ಯಕ್ಷ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದ್ದರು.
ಅಡಿಕೆ ಬೆಳೆಗಾರರು ಇತ್ತೀಚೆಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಅಡಿಕೆ ಹಾನಿಕಾರಕ ಎಂಬ ವಿಚಾರ ಹೊರ ಬಿದ್ದಾಗಿನಿಂದಲೂ ಅಡಿಕೆ ಬೆಳೆಗಾರರಲ್ಲಿ ಬೆಲೆ ಕುಸಿತ ಕಾಣುವ ಆತಂಕ ಇದ್ದೇ ಇದೆ. ಇದರ ಜತೆಗೆ ಮಲೆನಾಡಿನಲ್ಲಿ ಸುರಿಯುವ ಮಳೆಗೆ ಕೊಳೆ ರೋಗ ಕೂಡ ಭಾದಿಸುತ್ತಿದೆ. ಇದರಿಂದ ಸಾಕಷ್ಟು ಅಡಿಕೆ ಮರಗಳು ಸಾಯುತ್ತಿವೆ. ಇನ್ನು, ಗಾಳಿಗೆ ಸಿಲುಕಿ ಅಡಿಕೆ ಕಾಯಿ ಉದುರುತ್ತಿರುವುದು ಕೂಡ ರೈತರಿಗೆ ಬಿಸಿ ತುಪ್ಪವಾಗಿದೆ. ಇದರಿಂದ ನಷ್ಟ ಅನುಭವಿಸಿದ ರೈತರಿಗೆ ಸರ್ಕಾರದಿಂದ ಅನುದಾನ ಸಿಗಬೇಕು ಎನ್ನುವ ಆಗ್ರಹ ಕೂಡ ಇದೆ.
ಇದನ್ನೂ ಓದಿ: ದೇಣಿಗೆ ಕೊಡಲು ಇಷ್ಟವಿಲ್ಲ ಅಂದರೆ ಹೆಚ್.ಡಿ. ಕುಮಾರಸ್ವಾಮಿ ಕೊಡುವುದು ಬೇಡ: ಸಚಿವ ನಾರಾಯಣಗೌಡ