ಕೌಶಲ್ಯ ಅಭಿವೃದ್ಧಿ ಯೋಜನೆಯ ಎಲ್ಲ ಪ್ರಯೋಜನಗಳನ್ನು ಜಾರ್ಖಂಡ್ ಯುವಕರಿಗೆ ಒದಗಿಸಲಾಗುವುದು: ಸತ್ಯಾನಂದ ಭೋಕ್ತಾ
ಯುವಕರಲ್ಲಿ ಕೌಶಲ್ಯಗಳನ್ನು ಬೆಳೆಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯತ್ತುಮವಾಗಿವೆ ಎಂದು ಸಚಿವ ಸತ್ಯಾನಂದ ಭೋಕ್ತಾ ಹೇಳಿದರು. ಈ ಕಾರ್ಯಕ್ರಮದ ಪ್ರಯೋಜನಗಳು ಎಲ್ಲಾ ಸಮುದಾಯಗಳಿಗೆ ತಲುಪುವಂತಾಗಲು, ಸಂಬಂಧಪಟ್ಟವರೆಲ್ಲ ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ರಾಂಚಿ: ಜಾರ್ಖಂಡ್ನ ಕಾರ್ಮಿಕ ಮತ್ತು ಕೌಶಲ್ಯಾಭಿವೃದ್ಧಿ ಸಚಿವರಾಗಿರುವ ಸತ್ಯಾನಂದ ಭೋಕ್ತಾ ಅವರು ರಾಜ್ಯ ಸರ್ಕಾರ ಯುವಕರಿಗೆ ಪ್ರಧಾನಮಂತ್ರಿ ಕೌಶಲ್ ವಿಕಾಸ್ ಯೋಜನೆಯಡಿ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಬದ್ಧವಾಗಿದೆ ಎಂದು ಹೇಳಿದರು. ಕೌಶಲ್ಯ ಆಭಿವೃದ್ಧಿ ಯೋಜನೆಯ ಎಲ್ಲ ಪ್ರಯೋಜನಗಳನ್ನು ಯುವಕರಿಗೆ ಒದಗಿಸಲಾಗುವುದೆಂದು ಅವರು, ಪ್ರಧಾನ ಮಂತ್ರಿ ಕೌಶಲ್ ವಿಕಾಸ ಯೋಜನೆ ಮೂರನೇ ಹಂತವನ್ನು ಯುವಕರಿಗೆ ತರಬೇತಿ ಒದಗಿಸಲು ನಿಯೋಜಿಸಲಾಗಿರುವ ತುಪುದಾನದಲ್ಲಿರುವ ಜಾರ್ಖಂಡ್ ಆರೋಗ್ಯ ಮತ್ತು ಶಿಕ್ಷಣ ಕೇಂದ್ರದಲ್ಲಿ ಉದ್ಘಾಟಿಸಿ ಮಾತಾಡುವಾಗ ಹೇಳಿದರು.
ಯುವಕರಲ್ಲಿ ಕೌಶಲ್ಯಗಳನ್ನು ಬೆಳೆಸಲು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು ಅತ್ಯತ್ತುಮವಾಗಿವೆ ಎಂದು ಸಚಿವ ಸತ್ಯಾನಂದ ಭೋಕ್ತಾ ಹೇಳಿದರು. ಈ ಕಾರ್ಯಕ್ರಮದ ಪ್ರಯೋಜನಗಳು ಎಲ್ಲಾ ಸಮುದಾಯಗಳಿಗೆ ತಲುಪುವಂತಾಗಲು, ಸಂಬಂಧಪಟ್ಟವರೆಲ್ಲ ಶ್ರಮಿಸಬೇಕೆಂದು ಅವರು ಕರೆ ನೀಡಿದರು. ಇದೇ ಸಮಯದಲ್ಲಿ ಮಾತಾಡಿದ ಇಲಾಖೆಯ ಕಾರ್ಯದರ್ಶಿಯಾಗಿರುವ ಪ್ರವೀಣ್ ಕುಮಾರ್ ಟೊಪ್ಪೋ, ಕೌಶಲ್ಯ ಅಭಿವೃದ್ಧಿ ಯೋಜನೆಯಡಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಬೇಕೆಂದು ಹೇಳಿದರು.
ಕೊವಿಡ್-19 ಪಿಡುಗಿನ ಅಪಾಯ ಇನ್ನೂ ದೂರವಾಗಿರದ ಕಾರಣ ಕೇಂದ್ರ ಗೃಹ ಸಚಿವಾಲಯದ ಮಾರ್ಗಸೂಚಿಗಳನ್ನು ಕಟ್ಟಿನಿಟ್ಟಾಗಿ ಪಾಲಿಸಲು ಭೋಕ್ತಾ ಅವರು ತರಬೇತಿ ಕಾರ್ಯಕ್ರಮಕ್ಕೆ ಆಯ್ಕೆಯಾಗಿರುವ ಯುವಕರಿಗೆ ಎಚ್ಚರಿಸಿದರು. ರಾಜ್ಯದಾದ್ಯಂತ ಕೌಶಲ್ಯ ಅಭಿವೃದ್ಧಿ ಕೇಂದ್ರಗಳು ಸೋಮವಾರದಿಂದ ಆರಂಭಗೊಂಡಿದ್ದು, ತರಬೇತಿ ಹೊಂದಲಿರುವವರಿಗೆ ಟ್ರೇನಿಂಗ್ ಕಿಟ್ಗಳನ್ನು ಹಂಚಲಾಗಿದೆ. ಸದರಿ ಕಾರ್ಯಕ್ರಮದೊಂದಿಗೆ ಸಚಿವರು ತರಬೇತಿಗೆ ಉಪಯೋಗಿಸಲಾಗುವ ಕೋಣೆಗಳು ಮತ್ತು ಬ್ಯೂಟಿಸಿಯನ್ ಕೋರ್ಸಿಗೆ ಅಗತ್ಯವಿರುವ ಪ್ರಯೋಗಾಲಯವನ್ನೂ ಉದ್ಘಾಟಿಸಿದರು.
ಯೋಜನೆಯ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಕುಮಾರ್, ಉಪ ಕಾರ್ಯದರ್ಶಿ ಭಯ್ಯಾ ರಜನೀಶ್, ತರಬೇತಿ ಕೇಂದ್ರದ ಕಾರ್ಯದರ್ಶಿ ಅದಿತಿ ಸಿನ್ಹಾ ಮೊದಲಾದವದರು ಉಪಸ್ಥಿತರಿದ್ದರು.
ನರೇಗಾ ಯೋಜನೆಯಡಿ ರಾಂಚಿಯಲ್ಲಾಗಿರುವ ಕೆಲಸಗಳು ಮತ್ತು ಸಾಮಾಜಿಕ ಆಡಿಟ್ನ ವೈಶಿಷ್ಟ್ಯಗಳನ್ನು ಅಭ್ಯಾಸ ಮಾಡಲು ಷಫಿಯಾ ಎನ್ನುವವರ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರದ ತಂಡವೊಂದು ಜಾರ್ಖಂಡ್ ಪ್ರವಾಸದಲ್ಲಿದೆ. ಸಾಮಾಜಿಕ ಆಡಿಟ್ ಮತ್ತು ಸಮುದಾಯ ಭಾಗವಹಿಸುವಿಕೆ ಪ್ರಕ್ರಿಯೆಯ ಹಲವಾರು ಆಯಾಮಗಳನ್ನು ಈ ತಂಡ ಆಭ್ಯಾಸ ಮಾಡಲಿದೆ.
ಮೂಲಗಳ ಪ್ರಕಾರ ಷಫಿಯಾ ಅವರ ತಂಡವು ಜಾರ್ಖಂಡ್ನ ಹಲವಾರು ಜಿಲ್ಲೆಗಳಿಗೆ ಈಗಾಗಲೇ ಭೇಟಿ ನೀಡಿದೆ ಮತ್ತು ಫೆಬ್ರುವರಿ 24ರಂದು ಹಜಾರಿಬಾಗ್ನಲ್ಲಿ ನಡೆದ ಜಿಲ್ಲಾಮಟ್ಟದ ಪರಿಶೀಲನಾ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದೆ.
ಇದನ್ನೂ ಓದಿ: ಎರಡು ವರ್ಷ ಕಳೆದರೂ ಚಾಲನಾ ತರಬೇತಿ ಕೇಂದ್ರಕ್ಕೆ ಸಿಕ್ಕಿಲ್ಲ ಚಾಲನೆ: ಹೋರಾಟದ ಎಚ್ಚರಿಕೆ ನೀಡಿದ ಸ್ಥಳೀಯರು