AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Marriage Horoscope: ಏನಿದು ಷಷ್ಟಾಷ್ಟಕ ದೋಷ? ಈ ಎರಡು ರಾಶಿಗಳ ಮಧ್ಯೆ ವಿವಾಹ ಏಕೆ ದೋಷಪ್ರದ?

ವಿವಾಹ ಸಂದರ್ಭದಲ್ಲಿ ಗಮನಿಸಬೇಕಾದ ದೋಷಗಳ ಪೈಕಿ ಷಷ್ಟಾಷ್ಟಕ ಕೂಡ ಒಂದು. ಆದ್ದರಿಂದ ಜಾತಕ ತೋರಿಸಿದ ನಂತರ ಮದುವೆ ಮಾಡಿಕೊಳ್ಳುವವರು ಈ ಬಗ್ಗೆಯೂ ಗಮನ ಇರಿಸಿಕೊಳ್ಳಬೇಕು.

Marriage Horoscope: ಏನಿದು ಷಷ್ಟಾಷ್ಟಕ ದೋಷ? ಈ ಎರಡು ರಾಶಿಗಳ ಮಧ್ಯೆ ವಿವಾಹ ಏಕೆ ದೋಷಪ್ರದ?
ಪ್ರಾತಿನಿಧಿಕ ಚಿತ್ರ
Srinivas Mata
| Edited By: |

Updated on: May 20, 2021 | 6:29 AM

Share

ಮದುವೆ ಆಗುವ ಸಂದರ್ಭದಲ್ಲಿ ಎಷ್ಟು ಗುಣ ಕೂಡಿ ಬಂತು, ಕೂಟ ಕೂಡಿ ಬಂತು? ಹುಡುಗಿ ಜಾತಕದಲ್ಲೇನಾದರೂ ಕುಜ ದೋಷ (ಮಾಂಗಲ್ಯ ದೋಷ) ಇದೆಯಾ? ಹುಡುಗ- ಹುಡುಗಿಯಲ್ಲಿ ಸಂತಾನ ಫಲ ಹೇಗಿದೆ? ಕಾಳಸರ್ಪ ದೋಷ ಇದೆಯಾ? ಜನನ ನಕ್ಷತ್ರ ದೋಷ ಇದೆಯಾ ಹೀಗೆ ನಾನಾ ಬಗೆಯಲ್ಲಿ ಪರಿಶೀಲನೆ ಮಾಡಲಾಗುತ್ತದೆ. ಆದರೆ ಇಲ್ಲಿ ಪ್ರಸ್ತಾಪ ಮಾಡದ ಒಂದು ದೋಷದ ವಿಚಾರವನ್ನು ಇನ್ನು ಮುಂದೆ, ಈ ಲೇಖನದಲ್ಲಿ ತಿಳಿಸಲಿದ್ದೇವೆ. ಗಂಡು- ಹೆಣ್ಣಿನ ಮದುವೆಗೆ ಜಾತಕ ನೋಡಿಯೇ ಮದುವೆ ಮಾಡುತ್ತೇವೆ ಎನ್ನುವವರು ಈ ಎರಡು ರಾಶಿಯ ಮಧ್ಯೆ ವಿವಾಹ ಪ್ರಶಸ್ತವಲ್ಲ ಎಂಬುದನ್ನು ತಿಳಿಯುವುದು ಉತ್ತಮ. ಇಲ್ಲಿ ಇನ್ನೂ ಒಂದು ವಿಚಾರ. ಒಂದು ವೇಳೆ ಹುಡುಗ- ಹುಡುಗಿ ಇಬ್ಬರೂ ಪರಸ್ಪರ ಪ್ರೀತಿಸಿ, ತಾವು ಮದುವೆ ಆಗುತ್ತಿದ್ದೇವೆ ಎಂದು ಹಿರಿಯರ ಮುಂದೆ ಬಂದು ಹೇಳುವಾಗ ಅದನ್ನು ಹೇಗಾದರೂ ತಪ್ಪಿಸಬೇಕು ಅಂದುಕೊಂಡು ಅಥವಾ ಯಾವುದಕ್ಕೂ ವಿವಾಹ ಶುಭವೇ ಎಂದು ಕೇಳೋಣ ಅಂತ ಜ್ಯೋತಿಷವನ್ನು ಮುಂದು ಮಾಡಬೇಡಿ. ಅಸಲಿಗೆ ಕೇಳುವುದಕ್ಕೇ ಹೋಗಬೇಡಿ. ಇದು ಸಲಹೆ ಅಷ್ಟೇ. ಇಬ್ಬರು ಪ್ರೀತಿಸಿದ ಜೀವಗಳನ್ನು ದೂರ ಮಾಡಿದ ಪಾಪ ಬರುವುದು ಬೇಡ ಅಂತ.

ಇನ್ನು ಈ ಲೇಖನಕ್ಕೆ ಸಂಬಂಧಪಟ್ಟ ವಿಚಾರಕ್ಕೆ ಬರುವುದಾದರೆ, ಷಷ್ಟಾಷ್ಟಕ ಎಂಬ ದೋಷ ಇದೆ. ಅಂದರೆ ಜನ್ಮ ಜಾತಕದ ರಾಶಿ ಕುಂಡಲಿಯಲ್ಲಿ ಚಂದ್ರ ಇರುವಂಥ ಮನೆ ಜನ್ಮ ರಾಶಿ ಆಗುತ್ತದೆ. ಹುಡುಗನ ರಾಶಿಯಿಂದಲೋ ಅಥವಾ ಹುಡುಗಿಯ ರಾಶಿಯಿಂದಲೇ ಲೆಕ್ಕಹಾಕುವಾಗ ಪರಸ್ಪರರ ರಾಶಿಗಳು ಆರು ಮತ್ತು ಎಂಟನೇ ಮನೆ ಆಗಿರಬಾರದು. ಒಂದು ಉದಾಹರಣೆ ನೋಡಿ, ಮೇಷ ರಾಶಿಯ ಹುಡುಗ ಅಥವಾ ಹುಡುಗಿಗೆ ಕನ್ಯಾ ರಾಶಿಯ ಹುಡುಗಿ ಅಥವಾ ಹುಡುನ ಜತೆಗೆ ವಿವಾಹ ಮಾಡಬಹುದಾ ಎಂದು ಜಾತಕ ನಿಷ್ಕರ್ಷೆ ಮಾಡುವುದಾದರೆ, ಮಾಡಬಾರದು.

ಏಕೆಂದರೆ, ಮೇಷ ರಾಶಿಯಿಂದ ಎಣಿಸಿದರೆ ಕನ್ಯಾ ರಾಶಿಯು ಆರನೆಯದ್ದಾಗುತ್ತದೆ ಹಾಗೂ ಕನ್ಯಾ ರಾಶಿಯಿಂದ ಮೇಷವು ಎಂಟನೆಯದ್ದಾಗುತ್ತದೆ. ಇದನ್ನ ಷಷ್ಟಾಷ್ಟಕ ದೋಷ ಎನ್ನಲಾಗುತ್ತದೆ. ಈ ಥರ ಎಲ್ಲ ರಾಶಿಗೂ ಇದೆ. ಹಾಗಿದ್ದ ಮೇಲೆ ಯಾವ್ಯಾವ ರಾಶಿಯ ಮಧ್ಯೆ ಷಷ್ಟಾಷ್ಟಕ ಆಗುತ್ತದೆ ಹಾಗೂ ಆ ಪೈಕಿ ಯಾವುದು ಹೆಚ್ಚು ಗಂಭೀರ ಪ್ರಮಾಣದ ದೋಷ ಹಾಗೂ ಮಧ್ಯಮ ಪ್ರಮಾಣದ್ದು ಅಂತ ನೋಡುವುದಾದರೆ, ಇಲ್ಲಿದೆ ಮಾಹಿತಿ.

1) ಮೇಷ- ಕನ್ಯಾ: ಗಂಭೀರ 2) ಮೇಷ- ವೃಶ್ಚಿಕ: ಮಧ್ಯಮ 3) ವೃಷಭ- ತುಲಾ: ಮಧ್ಯಮ 4) ವೃಷಭ- ಧನುಸ್ಸು: ಗಂಭೀರ 5) ಮಿಥುನ- ವೃಶ್ಚಿಕ: ಗಂಭೀರ 6) ಮಿಥುನ- ಮಕರ: ಮಧ್ಯಮ 7) ಕರ್ಕಾಟಕ- ಧನುಸ್ಸು: ಮಧ್ಯಮ 8) ಕರ್ಕಾಟಕ- ಕುಂಭ: ಗಂಭೀರ 9) ಸಿಂಹ- ಮಕರ: ಗಂಭೀರ 10) ಸಿಂಹ- ಮೀನ: ಮಧ್ಯಮ 11) ಕನ್ಯಾ- ಕುಂಭ: ಮಧ್ಯಮ 12) ಕನ್ಯಾ- ಮೇಷ: ಗಂಭೀರ

ಹೀಗೆ ಷಷ್ಟಾಷ್ಟಕ ದೋಷ ಇರುವ ಗಂಡ- ಹೆಂಡತಿ ಮಧ್ಯೆ ವಿನಾಕಾರಣದ ವಾದ- ವಿವಾದಗಳು ಏರ್ಪಡುತ್ತವೆ. ಅದರಲ್ಲೂ ಸಪ್ತಮ ಸ್ಥಾನಾಧಿಪತಿ ದುರ್ಬಲನಾಗಿದ್ದಲ್ಲಿ ಅಥವಾ ಆ ಸ್ಥಾನದ ಮೇಲೆ ನೀಚ ಗ್ರಹಗಳ ದೃಷ್ಟಿ ಬೀಳುತ್ತಿದ್ದಲ್ಲಿ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಸಣ್ಣ- ಪುಟ್ಟ ವಿಚಾರಗಳೇ ವಾಗ್ವಾದಕ್ಕೆ ಕಾರಣವಾಗಿ ತಾತ್ಕಾಲಿಕ ಅಥವಾ ಶಾಶ್ವತವಾಗಿ ದೂರ- ದೂರ ಇರುವಂಥ ಪರಿಸ್ಥಿತಿ ಏರ್ಪಡುತ್ತದೆ. ಮುಖ್ಯವಾಗಿ ಒಂದು ರೀತಿಯ ತೀರ್ಮಾನಕ್ಕೆ ಅಥವಾ ಹೊಂದಿಕೊಂಡು ಹೋಗುವಂಥ ಆಲೋಚನೆ ಬರುವುದೇ ಇಲ್ಲ. ಒಬ್ಬರ ತಲೆ ಕಂಡರೆ ಮತ್ತೊಬ್ಬರಿಗೆ ಆಗುವುದಿಲ್ಲ ಎಂಬ ಸ್ಥಿತಿ ಬರುತ್ತದೆ. ಆದ್ದರಿಂದ ಜಾತಕದಲ್ಲಿ ಈ ದೋಷ ಏರ್ಪಡುವಂತಿದ್ದಲ್ಲಿ ವಿವಾಹ ಆಗದಿರುವುದು ಶ್ರೇಯಸ್ಸು.

ಇದನ್ನೂ ಓದಿ: Gemstones: ರಾಶಿಗೆ ಅನುಗುಣವಾಗಿ ಅದೃಷ್ಟರತ್ನ; ಜನ್ಮರಾಶಿಗೆ ಅನುಗುಣವಾಗಿ ಯಾವ ರತ್ನ ದಾರಣೆ ಉತ್ತಮ?

ಇದನ್ನೂ ಓದಿ: Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು

(During marriage horoscope matching Shashtashtaka dosha must be observed. Otherwise it leads to problem in married life of couples)

ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ