Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು

Money management: ಹನ್ನೆರಡು ರಾಶಿಗಳ ಪೈಕಿ ಈ 5ರಿಂದ 6 ರಾಶಿಯವರು ಹಣಕಾಸು ನಿರ್ವಹಣೆಯಲ್ಲಿ ಬಲು ಗಟ್ಟಿಗರು ಎನ್ನುತ್ತದೆ ಜ್ಯೋತಿಷ ಶಾಸ್ತ್ರ.

Money management: ಈ 5 ರಾಶಿಯವರು ದುಡ್ಡು- ಕಾಸಿನ ನಿರ್ವಹಣೆಯಲ್ಲಿ ಬಲು ಗಟ್ಟಿಗರು
ರಾಶಿ ಚಕ್ರ
Follow us
Srinivas Mata
|

Updated on: May 05, 2021 | 9:08 PM

ದುಡ್ಡು ಎಷ್ಟೇ ಇದ್ದರೂ ಅದನ್ನ ಹೇಗೆ ಮ್ಯಾನೇಜ್ ಮಾಡಬೇಕು ಅನ್ನೋ ಸಂಗತಿ ಬಹಳ ಮಂದಿಗೆ ಗೊತ್ತಿರೋದಿಲ್ಲ. ಈಗಿನ ದಿನಮಾನಕ್ಕೆ ತಕ್ಕಂತೆ ಹೇಳಬೇಕು ಅಂದರೆ ಮನಿ ಮ್ಯಾನೇಜ್​ಮೆಂಟ್​ (ನಿರ್ವಹಣೆ) ಬಾರದ ಅಮಾಯಕರಾಗಿರುತ್ತಾರೆ. ಆದರೆ ಇಂದಿನ ಲೇಖನದಲ್ಲಿ ತಿಳಿಸುವುದಕ್ಕೆ ಹೊರಟಿರುವುದು ಮನಿ ಮ್ಯಾನೇಜ್​ಮೆಂಟ್ ಬಹಳ ಚೆನ್ನಾಗಿ ಬರುವವರ ಬಗ್ಗೆ. ಜ್ಯೋತಿಷ ಶಾಸ್ತ್ರದ ಪ್ರಕಾರ ಈ 5 ರಾಶಿಗಳವರು ಬಲು ಲೆಕ್ಕಾಚಾರದ, ನಾಜೂಕಿನ, ಸುಖಾಸುಮ್ಮನೆ ಹಣಕಾಸು ಸಂಕಷ್ಟಕ್ಕೆ ಬೀಳದ ಜಾಣ- ಜಾಣೆಯರು. ಈ ಬಗ್ಗೆ ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಅವರು ಟಿವಿ9ಕನ್ನಡದ ಡಿಜಿಟಲ್ ಓದುಗರ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಮಿಥುನ ಮೊದಲನೆಯದು ಮೊದಲಿಗೇ. ಮಿಥುನ ರಾಶಿಯವರು ಈ ಪಟ್ಟಿಯಲ್ಲಿ ಎಲ್ಲರಿಗಿಂತ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಇವರಿಗೂ ಚೆಸ್​ ಆಟಗಾರರಿಗೂ ಹೆಚ್ಚು ವ್ಯತ್ಯಾಸ ಇರೋದಿಲ್ಲ. ಇಂದು ಹುಟ್ಟಿದ ಮಗುವಿನ ಚೌಲ, ನಾಮಕರಣದಿಂದ ಶಿಕ್ಷಣ, ಮದುವೆ, ರಿಟೈರ್​ಮೆಂಟ್ ತನಕ ಇವರು ಪ್ಲಾನ್ ಮಾಡಿ ಮುಗಿಸಿರುತ್ತಾರೆ. ಅಷ್ಟೇ ಅಲ್ಲ, ಅದಕ್ಕೆ ಹಣವನ್ನೂ ಒಟ್ಟು ಹಾಕಲು ಶುರು ಮಾಡಿ ಬಿಡ್ತಾರೆ. ಮತ್ತೆ ತಮ್ಮ ಗುಟ್ಟನ್ನು ಹೊರಗೆ ಬಿಟ್ಟುಕೊಡದ ಆಸಾಮಿಗಳು ಇವರು. ಬುಧ ಗ್ರಹ ಇವರ ರಾಶ್ಯಾಧಿಪತಿ. ಬುದ್ಧಿವಂತಿಕೆ ಇವರ ಸ್ವಭಾವ ಹಾಗೂ ಆದಾಯದ ಮೂಲವೂ ಹೌದು. ದುಡ್ಡು ಹಾಕುವುದಕ್ಕಿಂತ ಬುದ್ಧಿ ಬಳಸಿ ಏನು ಮಾಡಬಹುದು ಅನ್ನೋದರ ಕಡೆಗೆ ಇವರ ಆಲೋಚನೆ ಇರುತ್ತದೆ. ಅಂಥದ್ದೇ ಉದ್ಯೋಗ, ವ್ಯಾಪಾರ, ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ.

ಕನ್ಯಾ ಈ ರಾಶಿಯ ಅಧಿಪತಿ ಕೂಡ ಬುಧನೇ. ಇವರಿಗೂ ಮಿಥುನ ರಾಶಿಗೂ ಹಲವು ಸಾಮ್ಯತೆ ಇರುತ್ತದೆ. ಆದರೆ ಇವರ ಬಳಿ ಯಾವುದೇ ಮುಚ್ಚುಮರೆ ಇಲ್ಲ. ತಾನು ಏನೇನು ಮಾಡಿದ್ದೀನಿ ಎಂಬುದನ್ನು ಎಲ್ಲರೊಂದಿಗೂ ಹೇಳಿಕೊಂಡು ಬಿಡುತ್ತಾರೆ. ಪ್ಲಾನಿಂಗ್ ತುಂಬಾ ಚೆನ್ನಾಗಿರುತ್ತದೆ. ಆರ್ಗನೈಸ್ಡ್ ಹೂಡಿಕೆ ಇವರದು. ಪರ್ಫೆಕ್ಷನಿಸ್ಟ್​ಗಳಾದ ಇವರು, ವಯಸ್ಸಿಗೆ ತಕ್ಕಂತೆ ರಿಸ್ಕ್ ತೆಗೆದುಕೊಳ್ಳುವ ಸ್ವಭಾವವನ್ನೂ ಹೊಂದಿರುತ್ತಾರೆ. ಉಳಿತಾಯ, ಹೂಡಿಕೆ ಹೀಗೆ ಹಂತ ಹಂತವಾಗಿ ಬೆಳೆಯುತ್ತಾ ಸಾಗುತ್ತದೆ. ಚಿಕ್ಕ ವಯಸ್ಸಿನಲ್ಲಿ ಕಲಿತ ಪಾಠಗಳು ಬಹಳ ಸಹಾಯಕ್ಕೆ ಬರುತ್ತವೆ. ಅದನ್ನು ಚೆನ್ನಾಗಿ ಬಳಸಿಕೊಳ್ಳುತ್ತಾರೆ.

ತುಲಾ ತುಲಾ ರಾಶಿಯ ಅಧಿಪತಿ ಶುಕ್ರ. ತಕ್ಕಡಿ ಗುರುತಿನ ಈ ರಾಶಿಯವರು ಲಾಭ ಇಲ್ಲದೆ ಅಥವಾ ಆದಾಯ ಇಲ್ಲದೆ ಏನನ್ನೂ ಮಾಡುವಂಥವರಲ್ಲ. ಸುಖಾಸುಮ್ಮನೆ ಯಾವುದೇ ಕೆಲಸವನ್ನು ಮಾಡಿಕೊಡುವಂಥವರಲ್ಲ. ಆ ಕಾರಣಕ್ಕೆ ಸಾಮಾನ್ಯವಾಗಿ ಇವರು ಹಣಕಾಸಿನ ಕಷ್ಟಗಳಿಗೆ ಸಿಲುಕಿಕೊಳ್ಳುವರಲ್ಲ. ಲಾಭ ಇಲ್ಲದ ಅಥವಾ ತಮಗೆ ಉಪಯೋಗ ಇಲ್ಲದ ಕೆಲಸ ಅಥವಾ ಸ್ಥಳದಲ್ಲಿ ಸಮಯ ಕಳೆಯದ ತುಲಾ ರಾಶಿವರು ಇವತಿನ ಜಗತ್ತಿಗೆ ಹೇಳಿ ಮಾಡಿಸಿದಂಥವರು. ಅಪರೂಪಕ್ಕೆ ತುಲಾ ರಾಶಿಯವರಿಂದ ಫೋನ್ ಬಂತು, ಕಷ್ಟ- ಸುಖ ವಿಚಾರಿಸಿದರು ಅಂದರೆ ಮತ್ತೊಂದು ದಿನಕ್ಕೆ ಆಗಬೇಕಾದ ಕೆಲಸದ ಮುನ್ನುಡಿ ಅಂತ ಅರ್ಥ. ಏಕೆಂದರೆ, ಅವರಿಗೆ ಕೆಲಸ ಇದ್ದಾಗ ಮಾತ್ರ ಆಯಾ ನಿರ್ದಿಷ್ಟ ವ್ಯಕ್ತಿಯ ನೆನಪಾಗುತ್ತದೆ.

ಕುಂಭ ಇವರು ಜೀವನವನ್ನೂ ಎಂಜಾಯ್ ಮಾಡ್ತಾರೆ. ತಮ್ಮನ್ನು ತಾವು ಅಮಾಯಕರು, ಏನೂ ಗೊತ್ತಿಲ್ಲದವರು, ಲೋಕ ಜ್ಞಾನ ಕಡಿಮೆ ಇರುವಂಥವರು ಎಂದು ತೋರಿಸಿಕೊಳ್ಳುವ ಕುಂಭ ರಾಶಿಯವರು ಜೀವನ ನಡೆಸುವುದಕ್ಕೆ ಅಗತ್ಯ ಇರುವ ಹಾಗೂ ಭವಿಷ್ಯಕ್ಕೆ ಬೇಕಾದ ಎಲ್ಲವನ್ನೂ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ತಮ್ಮದೇನೋ ಸಾಧನೆ, ನಾನು ಹೀಗೆ ಮಾಡಿದ್ದೀನಿ, ಹಾಗೆ ಮಾಡಿದ್ದೀನಿ ಎಂದು ಹೇಳಿಕೊಳ್ಳುವ ಜಾಯಮಾನದವರಲ್ಲ. ಇವರ ರಾಶ್ಯಾಧಿಪತಿ ಶನಿ. ಆದ್ದರಿಂದ ಸ್ವಲ್ಪ ಮಟ್ಟಿಗೆ ನಿಧಾನಸ್ಥರಂತೆ ಕಾಣುತ್ತಾರೆ. ಅಷ್ಟೇ ಅಲ್ಲ, ಅವರೇ ತೋರಿಸಿಕೊಳ್ಳುವಂತೆ ಹಾಗೂ ಹೇಳಿಕೊಳ್ಳುವಂತೆ ಅಮಾಯಕರು ಎಂಬ ಅನುಮಾನವೂ ಮೂಡುತ್ತದೆ. ಆದರೆ ಕುಂಭ ರಾಶಿಯವರು ಮನಿ ಮ್ಯಾನೇಜ್​ಮೆಂಟ್​ನಲ್ಲಿ ಗಟ್ಟಿಗರು.

ಮೇಷ ಉಳಿದ ಎಲ್ಲ ರಾಶಿಗಳಿಗಿಂತ ಭಿನ್ನವಾದ ಮೇಷ ರಾಶಿಯವರು ಬೇರೆಯವರ ಕಣ್ಣಿಗೆ ಜಿಪುಣರಂತೆ- ಜುಗ್ಗರಂತೆ ಅನಿಸುತ್ತಾರೆ. ಆದರೆ ಇವರು ಮಿನಿಮಲಿಸ್ಟ್​ಗಳು. ಅಂದರೆ ಇವರ ಆದಾಯ ಎಷ್ಟಿದೆಯೋ ಅಷ್ಟರಲ್ಲಿ ಜೀವನ ನಡೆಸಿಕೊಂಡು, ಉಳಿತಾಯವನ್ನೂ ಮಾಡುತ್ತಾರೆ. ಹಾಸಿಗೆ ಎಷ್ಟಿದೆಯೋ ಅಷ್ಟಕ್ಕೆ ಮಾತ್ರ ಕಾಲು ಮುದುರಿಕೊಂಡಿರುವ ಜಾಯಮಾನದವರು. ಕಂಡಿದ್ದೆಲ್ಲವೂ ಬೇಕು ಅನ್ನೋ ಆಸೆ ಇಲ್ಲವಾದ್ದರಿಂದ ಸಾಲ ಮಾಡಬೇಕು ಅನ್ನೋ ಪ್ರಮೇಯ ಇರೋದಿಲ್ಲ. ಇನ್ಷೂರೆನ್ಸ್, ಇನ್ವೆಸ್ಟ್​ಮೆಂಟ್, ಚಿನ್ನ, ರಿಯಲ್ ಎಸ್ಟೇಟ್ ಹೀಗೆ ಯಾವುದಕ್ಕೆ ಎಷ್ಟು ಎಂದು ಸರಿಯಾಗಿ ಲೆಕ್ಕ ಹಾಕಿಕೊಂಡು ಹೂಡಿಕೆ ಮಾಡುವ ಮೇಷ ರಾಶಿಯವರ ಅಧಿಪತಿ ಕುಜ. ಇವರಿಗಿಂತ ಒಂದು ಗುಲಗಂಜಿಯಷ್ಟು ಕಡಿಮೆ ಅಂತ ಅಂದುಕೊಳ್ಳುವುದಾದರೆ ವೃಶ್ಚಿಕ ರಾಶಿಯವರನ್ನು ತೆಗೆದುಕೊಳ್ಳಬಹುದು.

ಜ್ಯೋತಿಷಿ ಪಂಡಿತ್ ವಿಠ್ಠಲ ಭಟ್ ಸಂಪರ್ಕ ಸಂಖ್ಯೆ: 6361335497

ಇದನ್ನೂ ಓದಿ: Astrology tips: ಈ ನಾಲ್ಕು ರಾಶಿಯವರು ಆಮೆ ಆಕಾರದ ಉಂಗುರ ಧರಿಸಬಾರದು

ಇದನ್ನೂ ಓದಿ:Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

(Money management skill of Gemini, Virgo, Libra, Aquarius and Aries zodiac signs are known as best according to astrology. Do you know the reason why?)

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್