Sign In

By signing in or creating an account, you agree with Associated Broadcasting Company's Terms & Conditions and Privacy Policy.

Relations Breakup Astrology: ಯಾವ ರಾಶಿಯವರು ಯಾವಾಗ ಪ್ರೀತಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಗೊತ್ತಾ?

ಎಲ್ಲವೂ ಸರಿಯಿತ್ತು, ಆದರೆ ಏಕಾಏಕಿ ಆ ಹುಡುಗ ಅಥವಾ ಆ ಹುಡುಗಿ ಈ ಪ್ರೀತಿ ಸರಿಹೋಗಲ್ಲ ಅಂತ ಬಿಟ್ಟುಹೋಗಿಬಿಟ್ಟರು ಅನ್ನೋ ಮಾತನ್ನು ನೀವೆಲ್ಲಾದರೂ ಕೇಳಿದ್ದಲ್ಲಿ ಅಥವಾ ನೀವೇ ಆ ಮಾತನ್ನು ಆಡಿದ್ದಲ್ಲಿ ಈ ಜ್ಯೋತಿಷ ಲೇಖನ ಬಹಳ ಆಸಕ್ತಿಕರವಾಗಿರುತ್ತದೆ. ಅಥವಾ ನಿಮಗೂ ಸಂಗಾತಿಯ ಸಹವಾಸ ಬೇಡ ಎನಿಸಲು ಶುರುವಾಗಿದ್ದರೆ, ಇದ್ಯಾಕೆ ಹೀಗೆ ಎಂಬ ಪ್ರಶ್ನೆ ಕಾಡುತ್ತಿದ್ದಲ್ಲಿ ಉತ್ತರವೂ ಸಿಕ್ಕಂತಾಗುತ್ತದೆ. ಜ್ಯೋತಿಷದ ಪ್ರಕಾರ ಯಾವ ರಾಶಿಯವರು ಯಾವಾಗ ಸಂಗಾತಿ ಜತೆಗೆ ಬ್ರೇಕ್ ಅಪ್ ಮಾಡಿಕೊಳ್ಳುತ್ತಾರೆ ಎಂಬ ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

Srinivas Mata
|

Updated on: Apr 28, 2021 | 4:28 PM

ಮೇಷ
ಸಂಗಾತಿ ಬೋರ್ ಎನಿಸುವುದಕ್ಕೆ ಶುರುವಾದರೆ ಯಾವುದೇ ಆಲೋಚನೆಯೂ ಮಾಡದೆ ಮೇಷ ರಾಶಿವರು ಬಿಟ್ಟುಬಿಡುತ್ತಾರೆ. ಸಂಬಂಧಗಳಿಂದ ಇವರು ಹೊರಬರುವುದಕ್ಕೆ ಅದೇ ಮುಖ್ಯ ಕಾರಣ. ಯಾವ ವ್ಯಕ್ತಿ ಬೋರಿಂಗ್ ಆಗಿರುತ್ತಾರೋ ಅಂಥವರ ಜತೆಗೆ ಇವರು ಇರಲಾರರು. ತುಂಬ ಬೇಗ ಅಂಥ ಜನರ ಮೇಲೆ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

ಮೇಷ ಸಂಗಾತಿ ಬೋರ್ ಎನಿಸುವುದಕ್ಕೆ ಶುರುವಾದರೆ ಯಾವುದೇ ಆಲೋಚನೆಯೂ ಮಾಡದೆ ಮೇಷ ರಾಶಿವರು ಬಿಟ್ಟುಬಿಡುತ್ತಾರೆ. ಸಂಬಂಧಗಳಿಂದ ಇವರು ಹೊರಬರುವುದಕ್ಕೆ ಅದೇ ಮುಖ್ಯ ಕಾರಣ. ಯಾವ ವ್ಯಕ್ತಿ ಬೋರಿಂಗ್ ಆಗಿರುತ್ತಾರೋ ಅಂಥವರ ಜತೆಗೆ ಇವರು ಇರಲಾರರು. ತುಂಬ ಬೇಗ ಅಂಥ ಜನರ ಮೇಲೆ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

1 / 12
ವೃಷಭ
ಯಾವುದೇ ವಿಷಯವನ್ನಾಗಲೀ ಬಹಳ ನಿಧಾನವಾಗಿ ತೆಗೆದುಕೊಳ್ಳುತ್ತಾರೆ ಈ ರಾಶಿಯವರು. ನೋಡನೋಡುತ್ತಲೇ ಲವ್ ಆಯಿತು ಅನ್ನೋ ಜಾಯಮಾನದವರಲ್ಲ ಇವರು. ಪದೇಪದೇ ಫೋನ್ ಮಾಡೋದು ಹಾಗೂ ಹೆಚ್ಚು ಸಮಯ ಕೇಳೋದು ಮಾಡಿಬಿಟ್ಟರೆ ಸಂಗಾತಿ ಬಗ್ಗೆ ಬಹಳ ಬೇಗ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

ವೃಷಭ ಯಾವುದೇ ವಿಷಯವನ್ನಾಗಲೀ ಬಹಳ ನಿಧಾನವಾಗಿ ತೆಗೆದುಕೊಳ್ಳುತ್ತಾರೆ ಈ ರಾಶಿಯವರು. ನೋಡನೋಡುತ್ತಲೇ ಲವ್ ಆಯಿತು ಅನ್ನೋ ಜಾಯಮಾನದವರಲ್ಲ ಇವರು. ಪದೇಪದೇ ಫೋನ್ ಮಾಡೋದು ಹಾಗೂ ಹೆಚ್ಚು ಸಮಯ ಕೇಳೋದು ಮಾಡಿಬಿಟ್ಟರೆ ಸಂಗಾತಿ ಬಗ್ಗೆ ಬಹಳ ಬೇಗ ಆಸಕ್ತಿ ಕಳೆದುಕೊಂಡು ಬಿಡುತ್ತಾರೆ.

2 / 12
ಮಿಥುನ

ಇವರ ಜೀವನಶೈಲಿ ಹಾಗೂ ಆಲೋಚನೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಆಗಷ್ಟೇ ಸಂಬಂಧವನ್ನು ಕಾಪಾಡಿಕೊಳ್ಳುವುದಕ್ಕೆ ಸಾಧ್ಯ. ಇವರಿಗೆ ಥ್ರಿಲ್ ಇರಬೇಕು ಹಾಗೂ ಖುಷಿಖುಷಿಯಾಗಿ ಇರಬೇಕು. ಅವರ ಈ ಸ್ವಭಾವಕ್ಕೆ ತಕ್ಕಂತೆ ಹೊಂದಿಕೊಳ್ಳದಿದ್ದಲ್ಲಿ ತಕ್ಷಣವೇ ಹೊಸ ಸಂಗಾತಿಯನ್ನು ಹುಡುಕಿಕೊಳ್ಳುವುದಕ್ಕೆ ಆರಂಭಿಸುತ್ತಾರೆ.

3 / 12
ಕರ್ಕಾಟಕ

ಈ ರಾಶಿಯವರು ಬಲು ಸೂಕ್ಷ್ಮ. ಜತೆಗೆ ಬೆಚ್ಚನೆಯ ಹೃದಯದ ಸ್ವಭಾವದವರು. ಯಾರನ್ನಾದರೂ ನಂಬುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತಾರೆ. ಇವರೆದುರು ಸುಳ್ಳು ಹೇಳಿದರೆ, ಕೆಟ್ಟ-ಕೊಳಕ ಕೂಗಾಡಿದರೆ ನಿಧಾನಕ್ಕೆ ಬಿಟ್ಟು ಹಾಕುತ್ತಾರೆ. ಅವರು ಪೂರ್ತಿಯಾಗಿ ಬಿಡುವ ತನಕ ಎದುರಿಗಿನವರಿಗೆ ಅನುಭವಕ್ಕೆ ಸಹ ಬಂದಿರುವುದಿಲ್ಲ. ಒಂದು ದಿನ ಕಾಲ್ ರಿಸೀವ್ ಮಾಡೋದನ್ನು ನಿಲ್ಲಿಸಿ ಬಿಡುತ್ತಾರೆ.

4 / 12
ಸಿಂಹ

ಸಿಂಹ ರಾಶಿಯವರ ಬಗ್ಗೆ ಸದಾ ಗಮನ ನೀಡುತ್ತಲೇ ಇರಬೇಕು. ಸಂಗಾತಿಗೆ ತಾವೇ ಪ್ರಾಮುಖ್ಯವಾಗಿ ಇರಬೇಕು ಎಂದು ಬಯಸುವ ಜನರಿವರು. ಒಂದು ವೇಳೆ ಅವರ ಕಡೆ ಗಮನ ನೀಡೋದು ಸ್ವಲ್ಪ ಕಡಿಮೆಯಾದರೂ ಸಂಗಾತಿ ಬಗ್ಗೆ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ಇವರು ತಮ್ಮನ್ನು ತಾವು ಆ ಪರಿಯಲ್ಲಿ ಪ್ರೀತಿಸುತ್ತಾರೆ.

5 / 12
ಕನ್ಯಾ

ಈ ರಾಶಿಯವರು ಸಂಬಂಧದ ವಿಚಾರದಲ್ಲಿ ಗಂಭೀರವಾಗಿ ಇರುತ್ತಾರೆ. ಯಾವುದೇ ಸಂಬಂಧಕ್ಕೆ ಬದ್ಧವಾಗುವ ಮುನ್ನ ಅಳೆದು- ತೂಗಿ ಆ ಮೇಲೆ ಮುಂದೆ ಹೋಗುತ್ತಾರೆ. ಒಂದು ವೇಳೆ ಸಂಗಾತಿಗೆ ತಮ್ಮ ಬಗ್ಗೆ ಆಸಕ್ತಿ ಕಡಿಮೆ ಆಗುತ್ತಿದೆ ಎಂಬ ಸುಳಿವು ಸಿಗುತ್ತಿದ್ದಂತೆಯೇ ತಾವೇ ಮೊದಲಿಗೆ ಬದಲಾಗಿ ಬಿಡುತ್ತಾರೆ. ಮಾನಸಿಕವಾಗಿ ಗಟ್ಟಿಯಾಗಿ, ಸಂಗಾತಿಯನ್ನು ದೂರ ಮಾಡಿಕೊಂಡು ಬಿಡುತ್ತಾರೆ.

6 / 12
ತುಲಾ

ಸಂಬಂಧದಲ್ಲಿ ಸಂಗಾತಿ ಅದೆಷ್ಟು ಗಂಭೀರರಾಗಿದ್ದಾರೆ ಎಂಬುದು ತುಲಾ ರಾಶಿಯವರಿಗೆ ಬಹಳ ಮುಖ್ಯವಾಗುತ್ತದೆ. ಇವರು ಫೋನ್ ಮಾಡುವ ಪ್ರತಿ ಸಲ ನೀವು ಬಿಜಿಯಾಗಿದ್ದಲ್ಲಿ ಆಸಕ್ತಿಯನ್ನು ಕಳೆದುಕೊಂಡು ಬಿಡುತ್ತಾರೆ. ನಿಮ್ಮನ್ನು ಸ್ವಕೇಂದ್ರಿತ ವ್ಯಕ್ತಿತ್ವದವರು, ಸದಾ ನಿಮ್ಮ ಬಗ್ಗೆಯೇ ಮಾತನಾಡುತ್ತಿರುತ್ತೀರಿ ಎಂದು ತುಲಾ ರಾಶಿಯವರು ಅಂದುಕೊಂಡುಬಿಡುತ್ತಾರೆ.

7 / 12
ವೃಶ್ಚಿಕ

ವೃಶ್ಚಿಕ ಈ ರಾಶಿಯವರ ಸಂಗಾತಿಗೆ ಅಪಾರ ಪ್ರಮಾಣದ ತಾಳ್ಮೆ ಬೇಕು. ಸಮಯ, ಬದ್ಧತೆ, ಶ್ರಮ, ಕಾಳಜಿ ಎಲ್ಲವನ್ನೂ ಸಂಗಾತಿಯಿಂದ ಇವರು ಬಯಸುತ್ತಾರೆ. ಒಂದು ವೇಳೆ ಸಂಗಾತಿಯೇ ನಿರ್ಧಾರ ತೆಗೆದುಕೊಂಡು, ಆ ಮೇಲೆ ಇವರ ಬಳಿ ಹೇಳಲು ಬಂದರೆ ಅದನ್ನು ಒಪ್ಪುವಂಥವರಲ್ಲ. ಮುಖಕ್ಕೆ ಹೊಡೆದಂತೆಯೇ, ಇದು ಆಗಲ್ಲ ಅಥವಾ ಇಲ್ಲ ಎಂದುಬಿಡುತ್ತಾರೆ.

8 / 12
ಧನುಸ್ಸು

ಒಂದು ಸಲ ಮನಸ್ಸು ಮುರಿದ ಧನುಸ್ಸು ರಾಶಿ ವಾಪಸ ಬರೋದಿಲ್ಲ. ಯಾವ ರೀತಿಯಿಂದಲೂ ಇವರನ್ನು ಕಟ್ಟಿ ಹಾಕ್ತೀನಿ, ಪಳಗಿಸ್ತೀನಿ ಅಂತ ಅಂದುಕೊಳ್ಳಬಾರದು. ಖುಷಿಯಾಗಿ ಇರಬೇಕು, ಸಾಹಸಗಳು ಒಳಗೊಂಡಿರಬೇಕು ಮತ್ತು ಜೀವನದ ಎಲ್ಲ ಕ್ಷಣಕ್ಕೂ ತಕ್ಷಣ ಸ್ಪಂದಿಸಬೇಕು ಎಂದು ಬಯಸುತ್ತಾರೆ ಧನುಸ್ಸು ರಾಶಿಯವರು. ಆದ್ದರಿಂದ ಈ ಗುಣಗಳಿಗೆ ಅಡ್ಡಿಯಾಗುವ ಸಂಗಾತಿ ಎನಿಸಿದರೆ ಬಹಳ ಬೇಗ ಆಸಕ್ತಿ ಕಳೆದುಕೊಳ್ಳುತ್ತಾರೆ.

9 / 12
ಮಕರ

ಬಹುತೇಕ ಸಂದರ್ಭಗಳಲ್ಲಿ ಮಕರ ರಾಶಿಯವರಿಂದ ಸಂಗಾತಿ ದೂರವಾಗುವುದಕ್ಕೆ ಈ ರಾಶಿಯವೇ ಕಾರಣರಾಗಿರುತ್ತಾರೆ. ಸದಾ ಕೆಲಸ- ಕಾರ್ಯ ಅಂದುಕೊಂಡಿರುವ ಇವರು ವೈಯಕ್ತಿಕ ಬದುಕಿನ ಬಗ್ಗೆ ಹೆಚ್ಚಿನ ಗಮನ, ಸಮಯ ನೀಡುವುದು ಕಷ್ಟ. ಆದ್ದರಿಂದ ಮಕರ ರಾಶಿಯವರೇ ಸಂಬಂಧಗಳಿಗೆ ಹೆಚ್ಚಿನ ಸಮಯ ಮೀಸಲಿಡಲಾಗದೆ ಕಳೆದುಕೊಳ್ಳುತ್ತಾರೆ.

10 / 12
ಕುಂಭ

ಸ್ವಚ್ಛಂದವಾದ ಹಾಗೂ ಸ್ವತಂತ್ರವಾಗಿ ಇರಬಯಸುವ ಕುಂಭ ರಾಶಿಯವರ ಮೇಲೆ ಒತ್ತಡ ಹಾಕಿದರೆ ಅಸಾಧ್ಯ ಸಿಟ್ಟು ಬರುತ್ತದೆ. ಒತ್ತಡ ಹಾಕುವ, ಇದೇ ಮಾಡು- ಹೀಗೇ ಮಾಡು ಎನ್ನುವ ಹಾಗೂ ಎಲ್ಲಕ್ಕೂ ಉಪದೇಶ ಮಾಡುವ ಸಂಗಾತಿ ಅಂದರೆ ತಕ್ಷಣವೇ ಕಳಚಿಕೊಂಡು ಬಿಡುತ್ತಾರೆ. ಸಮಾನ ಆಸಕ್ತರ ಜತೆಗೆ ಇವರು ಬೇಗ ಹೊಂದಿಕೊಳ್ಳುತ್ತಾರೆ, ಸಂಬಂಧ ಮುಂದುವರಿಸುತ್ತಾರೆ.

11 / 12
ಮೀನ

ದೀರ್ಘ ಕಾಲದವರೆಗೆ ಜತೆಗಿರುವಂಥ ಸಂಗಾತಿಯನ್ನು ಎದುರು ನೋಡುವ ಮೀನ ರಾಶಿಯವರಿಗೆ ಸಂಬಂಧದ ಬಾಳಿಕೆ ಬಹಳ ಮುಖ್ಯ. ಸಂಗಾತಿಯಾಗಿ ಅವರಿಗೆ ಪ್ರೀತಿ ನೀಡುವುದು ಒಂದು ಕಡೆಯಾಯಿತು. ಇದರ ಜತೆಗೆ ಬದ್ಧತೆಯಿಂದ ದೀರ್ಘ ಕಾಲದ ತನಕ ಇರುವ ಖಾತ್ರಿಯನ್ನೂ ಸಹ ಇವರಿಗೆ ನಿಡಬೇಕು. ಇಲ್ಲದಿದ್ದಲ್ಲಿ ಮೀನು ಜಾರಿ ಹೋಗುತ್ತದೆ.

12 / 12
Follow us
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
VIDEO: ನೋಡ್ಕೊ ಗುರು... ನಾವೇನು ಫಿಕ್ಸಿಂಗ್ ಮಾಡ್ಕೊಂಡಿಲ್ಲ..!
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
ಯತ್ನಾಳ್ ಖುದ್ದು ಮಾತಾಡುತ್ತಿಲ್ಲ, ಅವರ ಬಗ್ಗೆ ಏನು ಮಾತಾಡೋದು: ಸಚಿವ
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
VIDEO: ಇಡೀ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಲಾರಿ ಮುಷ್ಕರ ನಿಲ್ಲದಿದ್ದರೆ ಎಪಿಎಂಸಿಗಳು ಬಂದ್ ಆಗುವ ಸಾಧ್ಯತೆ?
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಜಾತಿ ಗಣತಿ ಅವಶ್ಯಕತೆ ಇಲ್ಲ ಎಂದ ಸಾರ್ವಜನಿಕರು: ಮೈಸೂರಿನಲ್ಲಿ ಜನಾಕ್ರೋಶ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ಮೂಡಿಗೆರೆ: ಮಾಕೋನಹಳ್ಳಿ ಗ್ರಾಮದಲ್ಲಿ ಮನೆಗೆ ನುಗ್ಗಿ ಕಾಡಾನೆ ದಾಂಧಲೆ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ತಮ್ಮ ನಿರ್ದೇಶನದ ಮೊದಲ ಚಿತ್ರದ ಪ್ರಚಾರಕ್ಕೆ ಹೊಸ ತಂತ್ರ ಬಳಸಿದ ರಂಜನಿ
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಮುಷ್ಕರ ಕಾರಣ ಮಹಾರಾಷ್ಟ್ರದ ಟ್ರಕ್ಕನ್ನು ಟೋಲ್ ಗೇಟ್ ಬಳಿ ತಡೆಯಲಾಗಿತ್ತು
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಗರೀಬ್​ ರಥ್​ ಎಕ್ಸ್​ಪ್ರೆಸ್​ ರೈಲನ್ನು ಹಳಿ ತಪ್ಪಿಸುವ ಯತ್ನ ವಿಫಲ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಮಲೆ ಮಹದೇಶ್ವರ ಬೆಟ್ಟದಲ್ಲಿ ಹುಂಡಿ ಏಣಿಕೆ: ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ