AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Video: ಪಾರ್ಟಿಗಾಗಿ ಟಾಯ್ಲೆಟ್​ ಕಮೋಡ್​​ನಲ್ಲಿ ಪಾನೀಯ ತಯಾರಿಸಿದ ಯುವತಿ; ಅಸಹ್ಯದ ಪರಮಾವಧಿ ಎಂದ ನೆಟ್ಟಿಗರು

ಯುವತಿ ಮೊದಲು ವೆಸ್ಟರ್ನ್ ಟಾಯ್ಲೆಟ್ ಕಮೋಡ್​​ನಲ್ಲಿ ಐಸ್​ಕ್ರೀಮ್​, ಕ್ಯಾಂಡಿಗಳನ್ನು ತುಂಬುತ್ತಾಳೆ. ಅದಾದ ಬಳಿಕ ಫ್ಲಶ್ ಬಾಕ್ಸ್ ತೆರೆದು ಅದರಲ್ಲಿ, ಫಾಂಟಾ, ಸ್ಪಿರಿಟ್​, ಫ್ರೂಟ್ ಫ್ರಂಚ್​​ಗಳನ್ನು ಸುರಿಯುತ್ತಾಳೆ.

Viral Video: ಪಾರ್ಟಿಗಾಗಿ ಟಾಯ್ಲೆಟ್​ ಕಮೋಡ್​​ನಲ್ಲಿ ಪಾನೀಯ ತಯಾರಿಸಿದ ಯುವತಿ; ಅಸಹ್ಯದ ಪರಮಾವಧಿ ಎಂದ ನೆಟ್ಟಿಗರು
ಕಮೋಡ್​​ನಲ್ಲಿ ಪಾರ್ಟಿ ಡ್ರಿಂಕ್ ತಯಾರಿಸಿದ ಯುವತಿ
Follow us
Lakshmi Hegde
|

Updated on: Apr 29, 2021 | 2:34 PM

ಸೋಷಿಯಲ್ ಮೀಡಿಯಾಗಳಲ್ಲಿ ಎಂತೆಂಥಾ ವಿಚಿತ್ರ, ವಿಶಿಷ್ಟ, ವಿಲಕ್ಷಣ ವಿಡಿಯೋಗಳನ್ನು ನೋಡಿರುತ್ತೇವೆ. ಆದರೆ ಈಗ ವೈರಲ್​ ಆಗಿರುವ ವಿಡಿಯೋ ಇದೆಲ್ಲಕ್ಕೂ ಮಿಗಿಲಾಗಿದೆ. ವಿಲಕ್ಷಣ ಮಾತ್ರವಲ್ಲ, ಗಲೀಜು ಎನ್ನಿಸುತ್ತದೆ. ಮತ್ತೇನಲ್ಲ.. ಯುವತಿಯೊಬ್ಬಳು ಟಾಯ್ಲೆಟ್​​ನ ಕಮೋಡ್​ನಲ್ಲಿ ಪಾನೀಯವನ್ನು ತಯಾರಿಸಿ, ಪಾರ್ಟಿಗೆ ಬಂದ ಅತಿಥಿಗಳಿಗೆ ನೀಡುವ ವಿಡಿಯೋ ಇದು..!

ಅಸಹ್ಯ ಹುಟ್ಟಿಸುವ ಈ ವಿಡಿಯೋಕ್ಕೆ ಇದೀಗ 6.6 ಮಿಲಿಯನ್ಸ್​ಗೂ ಅಧಿಕ ವೀವ್ಸ್ ಬಂದಿದೆ. ವಿಡಿಯೋ ನೋಡಿದ ನೆಟ್ಟಿಗರು ನಿಜಕ್ಕೂ ದಿಗಿಲುಹುಟ್ಟಿಸುವಂತಿದೆ ಎಂದಿದ್ದಾರೆ. ಅಯ್ಯೋ..ಇದನ್ನು ನಂಬಲೇ ಸಾಧ್ಯವಾಗುತ್ತಿಲ್ಲ ಎಂದೂ ಹೇಳಿದವರು ಇದ್ದಾರೆ.

ಯುವತಿ ಮೊದಲು ವೆಸ್ಟರ್ನ್ ಟಾಯ್ಲೆಟ್ ಕಮೋಡ್​​ನಲ್ಲಿ ಐಸ್​ಕ್ರೀಮ್​, ಕ್ಯಾಂಡಿಗಳನ್ನು ತುಂಬುತ್ತಾಳೆ. ಅದಾದ ಬಳಿಕ ಫ್ಲಶ್ ಬಾಕ್ಸ್ ತೆರೆದು ಅದರಲ್ಲಿ, ಫಾಂಟಾ, ಸ್ಪಿರಿಟ್​, ಫ್ರೂಟ್ ಫ್ರಂಚ್​​ಗಳನ್ನು ಸುರಿಯುತ್ತಾಳೆ.  ನಂತರ  ಆಕೆ ಫ್ಲಶ್​ ಮಾಡುತ್ತಾಳೆ. ಅಲ್ಲಿಗೆ ಫ್ಲಶ್​ ಟ್ಯಾಂಕ್​​ನಲ್ಲಿದ್ದ ಪಾನೀಯಗಳು, ಕಮೋಡ್​ನಲ್ಲಿದ್ದ ಕ್ಯಾಂಡಿ, ಐಸ್​ಕ್ರೀಂಗಳ ಜತೆ ಮಿಶ್ರಣಗೊಂಡು ಪಾನೀಯ ಸಿದ್ಧವಾಗುತ್ತದೆ. ಹಾಗೇ, ಆ ನೀರನ್ನು ಆಕೆ ಗ್ಲಾಸ್​ಗೆ ಹಾಕುತ್ತಾಳೆ. ಟ್ವಿಟರ್​ನಲ್ಲಿ ಸಿಕ್ಕಾಪಟೆ ವೈರಲ್ ಆಗಿರುವ ಈ ವಿಡಿಯೋ ನೋಡಿದ ಜನರು ಅಸಹ್ಯ ವ್ಯಕ್ತಪಡಿಸಿದ್ದಾರೆ. ಇದು ಗಲೀಜಿನ ಪರಮಾವಧಿ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಹೊತ್ತಿ ಉರಿದ ಗೋದಾಮು, 60ಕ್ಕೂ ಹೆಚ್ಚು ಗಾಡಿ ನೀರು ಹಾಕಿದ್ರೂ ಆರದ ಬೆಂಕಿ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಸಾಮಾನ್ಯ ಸಂಗತಿಯೆಂಬಂತೆ ಘಟನೆ ವಿವರಿಸಿದ ಮೃತ ಬಾಲಕನ ತಂದೆ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಮದುವೆಗೆಂದು ಮಂಗಳೂರಿಗೆ ಹೊರಟ್ಟಿದ್ದ ಬಸ್ ಶಿರಾಡಿ ಘಾಟಿನಲ್ಲಿ ಪಲ್ಟಿ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಆದಂಪುರ ಏರ್​ಬೇಸ್​​ ಭೇಟಿ ಬಳಿಕ ಮೋದಿ ಮಾತು: ಇಲ್ಲಿದೆ ನೇರಪ್ರಸಾರ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ಇಡೀ ವಿಶ್ವವೇ ಭಾರತೀಯ ಸೈನಿಕರ ಕಾರ್ಯವನ್ನು ಕೊಂಡಾಡುತ್ತಿದೆ: ಶಾಸಕ
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಾಗರಿಕರ ಹೆಸರಿನಲ್ಲಿ ರಾಜ್ಯಾದ್ಯಂತ ತಿರಂಗಾ ಯಾತ್ರೆ: ಆರ್ ಅಶೋಕ್
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಬಿಜೆಪಿ ಮಾತಾಡಲ್ಲ: ಶಿವಲಿಂಗೇಗೌಡ
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಶೋಪಿಯಾನ್​ನಲ್ಲಿ ಲಷ್ಕರ್​​ನ ಮೋಸ್ಟ್ ವಾಂಟೆಡ್ ಉಗ್ರ ಸೇರಿ ಮೂವರ ಎನ್​ಕೌಂಟರ್
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ಎಲ್ಲ ಸಂದೇಹಗಳನ್ನು ಪ್ರಧಾನಿ ಮೋದಿ ದೂರ ಮಾಡಿದ್ದಾರೆ: ವಿಜಯೇಂದ್ರ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ
ನಿಮಗೆ ಇಂಗ್ಲಿಷ್ ಬರದಿದ್ದರೆ ಸುಮ್ಮನಿರಿ, ಪಾಕ್​ ರಕ್ಷಣಾ ಸಚಿವಗೆ ತರಾಟೆ