ಕೊವಿಡ್​​​ನಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರ ಮಾಡಲು ಬಿಡದ ಸ್ಥಳೀಯರು; ಪತ್ನಿಯ ಮೃತದೇಹವನ್ನು ಸೈಕಲ್​ ಮೇಲೆ ಹೊತ್ತು ಅಲೆದಾಡಿದ ಪತಿ

70 ವರ್ಷದ ವೃದ್ಧ ಸ್ಮಶಾನಕ್ಕಾಗಿ ಸೈಕಲ್​​ನಲ್ಲಿ ಅಲೆದಾಡಿ ಸುಸ್ತಾಗಿ ಕೆಳಗೆ ಬಿದ್ದಿದ್ದಾಗ ಅವರ ಸಹಾಯಕ್ಕೆ ಬಂದಿದ್ದು ಪೊಲೀಸ್ ಅಧಿಕಾರಿ. ರಸ್ತೆ ಮೇಲೆ ಬಿದ್ದಿದ್ದ ತಿಲಕ್​ಧರಿಯನ್ನು ನೋಡಿ ನೆರವಿಗೆ ಧಾವಿಸಿದ್ದಾರೆ.

ಕೊವಿಡ್​​​ನಿಂದ ಮೃತಪಟ್ಟ ವೃದ್ಧೆಯ ಶವಸಂಸ್ಕಾರ ಮಾಡಲು ಬಿಡದ ಸ್ಥಳೀಯರು; ಪತ್ನಿಯ ಮೃತದೇಹವನ್ನು ಸೈಕಲ್​ ಮೇಲೆ ಹೊತ್ತು ಅಲೆದಾಡಿದ ಪತಿ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಫೋಟೋ
Follow us
Lakshmi Hegde
|

Updated on:Apr 29, 2021 | 4:04 PM

ಲಖನೌ: ಕೊವಿಡ್​ -19 ಸೋಂಕು ಎಂಬುದು ಮನುಕುಲಕ್ಕೆ ಶಾಪ. ಇದು ಬರೀ ದೇಹಕ್ಕೆ ಸಂಬಂಧಪಟ್ಟ ರೋಗವಲ್ಲ. ಮಾನವೀಯತೆಗೆ ಬಂದ ರೋಗ ಎಂದೂ ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ. ಅದಕ್ಕೆ ಪೂರಕವಾದ ಘಟನೆಗಳು ಆಗಾಗ ಕಣ್ಮುಂದೆ ನಡೆಯುತ್ತಿರುತ್ತವೆ. ಇದೀಗ ಉತ್ತರಪ್ರದೇಶದಲ್ಲಿ ಹೀಗಿದ್ದೇ ಒಂದು ಹೃದಯ ವಿದ್ರಾವಕ ಘಟನೆ ನಡೆದಿದೆ.

ಕೊರೊನಾದಿಂದ ಆಸ್ಪತ್ರೆಯಲ್ಲಿ ಮೃತಪಟ್ಟ ಪತ್ನಿಯ ಶವಸಂಸ್ಕಾರಕ್ಕೆ ಈ ವೃದ್ಧ ಪಟ್ಟ ಪಡಿಪಾಟಲು ಫೋಟೋ ರೂಪದಲ್ಲಿ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ. ಉತ್ತರ ಪ್ರದೇಶದ ಜಾನ್‌ಪುರದ ಅಂಬರ್ಪುರ್ ಗ್ರಾಮದ ನಿವಾಸಿ ತಿಲಖ್​ಧರಿ (70)ಎಂಬುವರ ಪತ್ನಿ ಕೊವಿಡ್​ 19 ಸೋಂಕಿಗೆ ತುತ್ತಾಗಿದ್ದರು. ಅವರನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಅವರ ಶವವನ್ನು ಆಸ್ಪತ್ರೆ ಸಿಬ್ಬಂದಿ ಆ್ಯಂಬುಲೆನ್ಸ್​ನಲ್ಲಿ ಮನೆಗೆ ತಂದು ಬಿಟ್ಟರು. ಪತ್ನಿಯ ಶವವನ್ನು ಸಂಸ್ಕಾರ ಮಾಡಲೆಂದು ಸ್ಮಶಾನಕ್ಕೆ ತೆಗೆದುಕೊಂಡು ಹೋದ ತಿಲಕ್​ಧರಿಯನ್ನು ಸ್ಥಳೀಯರು ತಡೆದಿದ್ದಾರೆ. ಕೊವಿಡ್​ ಸೋಂಕಿನಿಂದ ಮೃತಪಟ್ಟ ಆಕೆಯ ಶವಸಂಸ್ಕಾರವನ್ನು ಸ್ಥಳೀಯ ಸ್ಮಶಾನದಲ್ಲಿ ಮಾಡುವಂತಿಲ್ಲ ಎಂದು ಹೆದರಿಸಿ ವಾಪಸ್​ ಕಳಿಸಿದ್ದಾರೆ. ಆ ಶವವನ್ನು ಹೊತ್ತು ತರಲಾಗದೆ ವೃದ್ಧ ತುಂಬ ಕಷ್ಟಪಟ್ಟಿದ್ದಾರೆ.

ಸ್ಮಶಾನದಲ್ಲಿ ಅವಕಾಶ ಸಿಗದಾಗ ವೃದ್ಧ ತನ್ನ ಪತ್ನಿಯ ಮೃತದೇಹವನ್ನು ಸೈಕಲ್ ಮೇಲೆ ಹಾಕಿದ ಫೋಟೋ ಮತ್ತು ಆ ಶವದ ಭಾರಕ್ಕೆ ಸೈಕಲ್ ಬಿದ್ದು, ಶವವೂ ರಸ್ತೆಯ ಮೇಲೆ ಬಿದ್ದ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿವೆ.

70 ವರ್ಷದ ವೃದ್ಧ ಸ್ಮಶಾನಕ್ಕಾಗಿ ಸೈಕಲ್​​ನಲ್ಲಿ ಅಲೆದಾಡಿ ಸುಸ್ತಾಗಿ ಕೆಳಗೆ ಬಿದ್ದಿದ್ದಾಗ ಅವರ ಸಹಾಯಕ್ಕೆ ಬಂದಿದ್ದು ಪೊಲೀಸ್ ಅಧಿಕಾರಿ. ರಸ್ತೆ ಮೇಲೆ ಬಿದ್ದಿದ್ದ ತಿಲಕ್​ಧರಿಯನ್ನು ನೋಡಿ ನೆರವಿಗೆ ಧಾವಿಸಿದ್ದಾರೆ. ಬಳಿಕ ಸ್ಥಳೀಯ ಮುಸ್ಲಿಂ ವ್ಯಕ್ತಿಯೊಬ್ಬನ ಸಹಾಯದಿಂದ ತಿಲಕ್​ ಧರಿ ಪತ್ನಿಯ ಶವಸಂಸ್ಕಾರ ನೆರವೇರಿದೆ.

ಇದನ್ನೂ ಓದಿ:  Exit Poll Results 2021: ಪಂಚರಾಜ್ಯಗಳ ಚುನಾವಣೆ: ಇಂದು ಸಂಜೆ ಹೊರಬೀಳಲಿದೆ ಚುನಾವಣೋತ್ತರ ಸಮೀಕ್ಷೆ

ಜೀವಿಸುವ ಹಕ್ಕಿನಲ್ಲಿ ಆರೋಗ್ಯವೂ ಸೇರಿದೆ, ಸೋಂಕಿತರಿಗೆ ಚಿಕಿತ್ಸೆ ನೀಡುವುದು ಎಲ್ಲರ ಕರ್ತವ್ಯ, ಕೂಡಲೇ ಬೆಡ್ ಪ್ರಮಾಣ​ ಹೆಚ್ಚಿಸಿ: ಹೈಕೋರ್ಟ್

Published On - 3:28 pm, Thu, 29 April 21

ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
ಮಹಿಳೆಯರು ಮುಡಿ ಕಟ್ಟದೆ ದೇವಾಲಯಕ್ಕೆ ಹೋಗಬಹುದಾ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಗುರುವಾರದ ದಿನ ಭವಿಷ್ಯ ತಿಳಿಯಿರಿ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
‘ಸಂಜು ವೆಡ್ಸ್​ ಗೀತಾ 2’ ಸಿನಿಮಾದ ಕಥೆಯೇ ಬೇರೆ: ರಚಿತಾ ರಾಮ್ ಸ್ಪಷ್ಟನೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಸರ್ಕಾರದಿಂದ ಪುನರ್ವಸತಿ ಮತ್ತು ತಲಾ 3 ಲಕ್ಷ ರೂ. ನೀಡುವ ಪ್ರಕಟಣೆ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?