Char Dham Yatra Suspended: ಕುಂಭಮೇಳದ ಬಳಿಕ ಎಚ್ಚೆತ್ತುಕೊಂಡ ಉತ್ತರಾಖಂಡ್ ಸರ್ಕಾರ; ಚಾರ್ ಧಾಮ್ ಯಾತ್ರೆ ರದ್ದು
ಉತ್ತರಾಖಂಡ್ನಲ್ಲಿ ಕೊವಿಡ್ ಸೋಂಕಿನಿ ಪ್ರಮಾಣ ಹೆಚ್ಚಾಗಿದೆ. ಬುಧವಾರ ಒಂದೇ ದಿನ 6054 ಕೊರೊನಾ ಕೇಸ್ಗಳು ದಾಖಲಾಗಿದ್ದು ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,68,616ಕ್ಕೆ ಏರಿಕೆಯಾಗಿದೆ. ಬುಧವಾರ 108ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 2417ಕ್ಕೆ ತಲುಪಿದೆ.
ಡೆಹ್ರಾಡೂನ್: ಕೊರೊನಾ ಸೋಂಕಿನ ಪ್ರಸರಣ ಹೆಚ್ಚಾಗುತ್ತಿರುವ ಕಾರಣ ಪ್ರಸಕ್ತ ವರ್ಷದ ಚಾರ್ ಧಾಮ್ ಯಾತ್ರೆಯನ್ನು ರದ್ದು ಪಡಿಸಿದ್ದಾಗಿ ಉತ್ತರಾಖಂಡ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಹೇಳಿದ್ದಾರೆ. ಇತ್ತೀಚೆಗೆ ಹರಿದ್ವಾರದಲ್ಲಿ ನಡೆದ ಕುಂಭಮೇಳ ಕೊರೊನಾ ಹಾಟ್ಸ್ಫಾಟ್ ಆಗಿ ಬದಲಾಗಿತ್ತು. ಇದರಲ್ಲಿ ಭಾಗವಹಿಸಿದ್ದ ಅನೇಕ ಸಾಧುಗಳಿಗೆ ಕೊರೊನಾ ತಗುಲಿತ್ತು. ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಮನವಿಯ ಮೇರೆಗೆ ಕುಂಭಮೇಳವನ್ನು ಅರ್ಧಕ್ಕೆ ನಿಲ್ಲಿಸಲಾಗಿತ್ತು.
ಇದೀಗ ಚಾರ್ಧಾಮ್ ಯಾತ್ರೆಯನ್ನು ರದ್ದುಗೊಳಿಸಿ ಆದೇಶ ನೀಡಿರುವ ಮುಖ್ಯಮಂತ್ರಿ ರಾವತ್, ಅರ್ಚಕರು ಪೂಜೆ ಮಾಡಬಹುದು. ಆದರೆ ಯಾತ್ರೆಗೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಭಕ್ತರು ಬದ್ರಿನಾಥ್, ಕೇದಾರನಾಥ್, ಯಮುನೋತ್ರಿ ಹಾಗೂ ಗಂಗೋತ್ರಿ (ಚಾರ್ ಧಾಮ್)ಗಳಿಗೆ ಈ ಸಮಯದಲ್ಲಿ ಯಾತ್ರೆಗೆ ಹೋಗುತ್ತಾರೆ. ಈ ಚಾರ್ಧಾಮ್ ಯಾತ್ರೆಯ ಸಂಬಂಧ ಎರಡು ದಿನಗಳ ಹಿಂದಷ್ಟೇ ಉತ್ತರಾಖಂಡ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿತ್ತು. ಇದೀಗ ಸಂಪೂರ್ಣವಾಗಿ ರದ್ದು ಮಾಡಿದೆ.
ಉತ್ತರಾಖಂಡ್ನಲ್ಲಿ ಕೊವಿಡ್ ಸೋಂಕಿನಿ ಪ್ರಮಾಣ ಹೆಚ್ಚಾಗಿದೆ. ಬುಧವಾರ ಒಂದೇ ದಿನ 6054 ಕೊರೊನಾ ಕೇಸ್ಗಳು ದಾಖಲಾಗಿದ್ದು ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 1,68,616ಕ್ಕೆ ಏರಿಕೆಯಾಗಿದೆ. ಬುಧವಾರ 108ಜನ ಮೃತಪಟ್ಟಿದ್ದು, ಸಾವಿನ ಸಂಖ್ಯೆ 2417ಕ್ಕೆ ತಲುಪಿದೆ. ಇದರಲ್ಲಿ ಅತಿ ಹೆಚ್ಚು ಸೋಂಕಿತರು ಇರುವುದು ಡೆಹ್ರಾಡೂನ್ನಲ್ಲಿ.
ಇದನ್ನೂ ಓದಿ: ಸರ್.. 3 ಲಕ್ಷ ಕೊಟ್ರೂ ಉಳಿದ 90 ಸಾವಿರ ಕೊಡೋವರೆಗೂ ಅಮ್ಮನ ಬಾಡಿ ಕೊಟ್ಟಿರಲಿಲ್ಲ | ಮಗನ ಕಣ್ಣೀರು
ಶರಣು ಮಣ್ಣಿಗೆ : ಹುರಿಗಟ್ಟಿದ ರಟ್ಟೆಯೊಂದಿಗೆ ಅವುಡುಗಚ್ಚಿದ ದವಡೆಯೊಂದಿಗೆ ಇಳಕಲ್-ಇಸ್ಲಾಂಪುರದ ರೈತಮಕ್ಕಳು