Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ

West Bengal Exit Poll Result 2021: ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ನಡೆಸಿದ ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್​) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಕಿಆಂಶಗಳನ್ನು ವಿಶ್ಲೇಷಿಸಿದಾಗ ಜನರ ಒಲವು ಟಿಎಂಸಿ ಪರವಾಗಿರುವ ಅಂಶ ಎದ್ದು ಕಾಣುತ್ತದೆ.

Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ
ನರೇಂದ್ರ ಮೋದಿ ಮತ್ತು ಮಮತಾ ಬ್ಯಾನರ್ಜಿ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 29, 2021 | 7:31 PM

ದೆಹಲಿ: ರಾಜಕೀಯ ಜಿದ್ದಾಜಿದ್ದಿ ಕಣವಾಗಿರುವ ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಸತತ 3ನೇ ಬಾರಿಗೆ ಅಧಿಕಾರಕ್ಕೆ ಬರುವ ಸಾಧ್ಯತೆ Tv9-Polstrat ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಪಶ್ಚಿಮ ಬಂಗಾಳ ರಾಜ್ಯದಾದ್ಯಂತ ನಡೆಸಿದ ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್​) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಕಿಆಂಶಗಳನ್ನು ವಿಶ್ಲೇಷಿಸಿದಾಗ ಇದೇ ಅಂಶ ಎದ್ದು ಕಾಣುತ್ತದೆ.

ಸಮೀಕ್ಷೆಯ ದತ್ತಾಂಶಗಳನ್ನು ವಿಶ್ಲೇಷಿಸಿದಾಗ ಟಿಎಂಸಿ 152ರಿಂದ 162, ಬಿಜೆಪಿರಿಂದ 115-125 ಕ್ಷೇತ್ರಗಳಲ್ಲಿ ಹಾಗೂ ಕಾಂಗ್ರೆಸ್-ಎಡಪಕ್ಷಗಳು ರಚಿಸಿಕೊಂಡಿರುವ ತೃತೀಯ ರಂಗ 16ರಿಂದ 26 ಕ್ಷೇತ್ರಗಳಲ್ಲಿ ಗೆದ್ದು ಬೀಗುವ ಸಾಧ್ಯತೆಯಿರುವ ಅಂಶ ವ್ಯಕ್ತವಾಗಿದೆ. ಒಟ್ಟು ಮತಗಳಿಕೆಯ ಪ್ರಮಾಣದಲ್ಲಿ ಟಿಎಂಸಿ ಶೇ 43.90, ಬಿಜೆಪಿ ಶೇ 40.50, ಕಾಂಗ್ರೆಸ್+ಎಡಪಕ್ಷಗಳು ಶೇ 10.70ರಷ್ಟು ಮತ ಪಡೆಯಲಿವೆ ಎಂದು ಸಮೀಕ್ಷೆ ಹೇಳಿದೆ.

ಸಮೀಕ್ಷೆಯಲ್ಲಿ ಪ್ರತಿಕ್ರಿಯಿಸಿದ ಪುರುಷರ ಪೈಕಿ ಶೇ 42.90 ಮಂದಿ ಬಿಜೆಪಿಗೆ, ಶೇ 42.60 ಮಂದಿ ಟಿಎಂಸಿಗೆ ಮತ್ತು ಶೇ 11.50 ಮಂದಿ ಕಾಂಗ್ರೆಸ್​+ಎಡಪಕ್ಷಗಳಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ಮಹಿಳೆಯರ ಪೈಕಿ ಶೇ 45.20 ಮಂದಿ ಟಿಎಂಸಿಗೆ ಶೇ 38.10 ಮಂದಿ ಬಿಜೆಪಿಗೆ ಮತ್ತು ಶೇ 9.90 ಮಂದಿ ಕಾಂಗ್ರೆಸ್​+ಎಡಪಕ್ಷಗಳಿಗೆ ಮತ ಚಲಾಯಿಸಿದ್ದಾಗಿ ಹೇಳಿದ್ದಾರೆ. ಒಟ್ಟಾರೆ ಮತ ಗಳಿಕೆಯಲ್ಲಿ ಟಿಎಂಸಿ ಮುಂದಿರುವುದು ಗೋಚರಿಸುತ್ತದೆ. ಟಿಎಂಸಿ ಪರವಾಗಿ ಶೇ 43.90, ಬಿಜೆಪಿ ಪರವಾಗಿ ಶೇ 40.50, ಕಾಂಗ್ರೆಸ್+ಎಡಪಕ್ಷಗಳ ಪರವಾಗಿ ಶೇ 10.70 ಮಂದಿ ಮತಚಲಾಯಿಸಿದ್ದಾರೆ.

ಸಮುದಾಯವಾರು ಮತಚಲಾವಣೆ ಮಾಹಿತಿ ದತ್ತಾಂಶದ ವಿಶ್ಲೇಷಣೆ ಸಂದರ್ಭ ಎಸ್​ಸಿ / ಎಸ್​ಸಿ ಸಮುದಾಯದ ಅತಿಹೆಚ್ಚು ಮಂದಿ, ಅಂದರೆ ಶೇ 58.10 ಬಿಜೆಪಿ ಪರವಾಗಿ ಮತ ಚಲಾಯಿಸಿರುವುದು ಅರಿವಿಗೆ ಬಂದಿದೆ. ಇದೇ ಸಮುದಾಯದ ಮತದಾರರು ಟಿಎಂಸಿ ಪರವಾಗಿ ಶೇ 29.40, ಕಾಂಗ್ರೆಸ್​+ಎಡಪಕ್ಷಗಳ ಪರವಾಗಿ ಶೇ 7.90 ಮಂದಿ ಮತ ಹಾಕಿದ್ದಾರೆ. ಮುಸ್ಲಿಮರು ದೊಡ್ಡ ಸಂಖ್ಯೆಯಲ್ಲಿ ಟಿಎಂಸಿ ಪರವಾಗಿ ನಿಂತಿರುವುದನ್ನು ಈ ದತ್ತಾಂಶಗಳು ತಿಳಿಸುತ್ತವೆ. ಶೇ 70ರಷ್ಟು ಮುಸ್ಲಿಮರು ಟಿಎಂಸಿ ಪರವಾಗಿ ಮತಚಲಾಯಿಸಿದ್ದಾರೆ. ಶೇ 14ರಷ್ಟು ಮಂದಿ ಬಿಜೆಪಿ ಪರವಾಗಿ, ಶೇ 14.10 ಮಂದಿ ಕಾಂಗ್ರೆಸ್+ಎಡಪಕ್ಷಗಳಿಗೆ ಮತದಾನ ಮಾಡಿದ್ದಾರೆ. ಇತರ ಜಾತಿಗಳ ಮತದಾನದ ಒಲವು ವಿಶ್ಲೇಷಿಸಿದಾಗ ಶೇ 40.50 ಮಂದಿ ಬಿಜೆಪಿಗೆ, ಶೇ 32.40 ಮಂದಿ ಟಿಎಂಸಿಗೆ ಮತ್ತು ಶೇ 10ರಷ್ಟು ಜನರು ಕಾಂಗ್ರೆಸ್+ಎಡಪಕ್ಷಗಳಿಗೆ ಮತ ನೀಡಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಯ Tv9-Polstrat ಸಮೀಕ್ಷೆಯ ಒಟ್ಟಾರೆ ಅಂಕಿಅಂಶಗಳನ್ನು ಕೂಲಂಕಶವಾಗಿ ವಿಶ್ಲೇಷಿಸಿದಾಗ ಆಡಳಿತಾರೂಢ ಟಿಎಂಸಿ ಪರವಾಗಿ ಮತದಾರರ ಒಲವು ವ್ಯಕ್ತವಾಗಿರುವುದು ಅರಿವಿಗೆ ಬರುತ್ತದೆ. 294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಅಧಿಕಾರಕ್ಕೆ ಬರಲು (ಮ್ಯಾಜಿಕ್ ನಂಬರ್) ಯಾವುದೇ ಪಕ್ಷ ಅಥವಾ ಮೈತ್ರಿಕೂಟ 148 ಸದಸ್ಯ ಬಲದೊಂದಿಗೆ ವಿಶ್ವಾಸಮತ ಸಾಬೀತುಪಡಿಸಬೇಕು.

West-Bengal-Exit-Poll

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಗೆಲುವು ಸಾಧ್ಯತೆ; Tv9-Polstrat ಸಮೀಕ್ಷೆ

ಸಮೀಕ್ಷೆಯಲ್ಲಿ ವ್ಯಕ್ತವಾಗಿರುವ ಅಭಿಪ್ರಾಯಗಳ ಪ್ರಕಾರ ಆಡಳಿತಾರೂಢ ಟಿಎಂಸಿ 152ರಿಂದ 162 ಸ್ಥಾನ ಗೆಲ್ಲಬಹುದು ಎಂಬ ನಿರೀಕ್ಷೆಗಳು ವ್ಯಕ್ತವಾಗಿವೆ. ಈ ಲೆಕ್ಕಾಚಾರ ನಿಜವೇ ಆದರೆ ಅಲ್ಲಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರಲಿರುವ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹ್ಯಾಟ್ರಿಕ್ ಬಾರಿಸಲಿದೆ. ಬಿಜೆಪಿ ಈ ಬಾರಿ ಅಧಿಕಾರಕ್ಕೆ ಬರುವ ಸಾಧ್ಯತೆ ಕ್ಷೀಣಿಸಿದ್ದರೂ 115ರಿಂದ 125 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದರೊಂದಿಗೆ ಪ್ರಮುಖ ಮತ್ತು ಪ್ರಬಲ ವಿರೋಧ ಪಕ್ಷವಾಗಿ ಹೊರಬರಲಿದೆ. ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ನಗಣ್ಯ ಎನಿಸಿದ್ದ ಬಿಜೆಪಿ ಈ ಬಾರಿ 100ರ ಗಡಿ ದಾಟಿದರೆ, ಅದು ಖಂಡಿತ ಕಡಿಮೆ ಸಾಧನೆಯಲ್ಲ. ಪಶ್ಚಿಮ ಬಂಗಾಳದಲ್ಲಿ ಸುದೀರ್ಘ ಅವಧಿಗೆ ಆಳ್ವಿಕೆ ನಡೆಸಿದ್ದ ಎಡಪಕ್ಷಗಳು ಈ ಬಾರಿ ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿದಿವೆ. ಈ ಮೈತ್ರಿಕೂಟ 16ರಿಂದ 26 ಸ್ಥಾನ ಪಡೆದು, ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಬಹುದಾಗಿದೆ.

ಕಳೆದ ಬಾರಿ, ಅಂದರೆ 2011ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಟಿಎಂಸಿ 211, ಕಾಂಗ್ರೆಸ್+ಎಡಪಕ್ಷಗಳು 76, ಬಿಜೆಪಿ 6, ಇತರರು ಒಂದು ಸ್ಥಾನದಲ್ಲಿ ಜಯಗಳಿಸಿದ್ದರು.

(TV9 Bharatvarsh exit poll results 2021 polstrat West Bengal assembly elections exit poll updates in Kannada)

ಇದನ್ನೂ ಓದಿ: West Bengal Elections 2021: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ರ‍್ಯಾಲಿಗಳಿಂದ ಕೊರೊನಾ ಪಾಸಿಟಿವ್ ದರ ಹೆಚ್ಚಳ!

ಇದನ್ನೂ ಓದಿ: ವಿಶ್ಲೇಷಣೆ: ಪಶ್ಚಿಮ ಬಂಗಾಳ ಕದನ ಕಣ; ಈ ಬಾರಿ ಯಾರ ಕೈ ಹಿಡಿಯಲಿದ್ದಾರೆ ಮಹಿಳಾ ಮತದಾರರು?

Published On - 7:30 pm, Thu, 29 April 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ