ಲಕ್ಷ್ಮಿ ಹೆಬ್ಬಾಳ್ಕರ್ ಕುಟುಂಬ ಒಡೆತನದ ಶುಗರ್ ಫ್ಯಾಕ್ಟರಿ ಸ್ಥಾಪನೆಗೆ ಗ್ರಾಮಸ್ಥರಿಂದ ವಿರೋಧ, ಇನ್ನೊಮ್ಮೆ ಬರ್ತೀನಿ ಅಂತ ವಾಪಸ್ಸಾದ ಸಚಿವೆ
ಗ್ರಾಮಸ್ಥರು ಹೇಳುವ ಪ್ರಕಾರ ಲಕ್ಷ್ಮಿ ಹೆಬ್ಬಾಳ್ಕರ್ ಜಮೀನನ್ನು ಏಜೆಂಟ್ ಗಳ ಮೂಲಕ ಖರೀದಿಸಿದ್ದಾರಂತೆ ಮತ್ತು ಖರೀದಿಸುವಾಗ ಫ್ಯಾಕ್ಟರಿ ನಿರ್ಮಾಣದ ಸಂಗತಿಯನ್ನು ಅವರಿಗೆ ತಿಳಿಸಿಲ್ಲವಂತೆ. ಗ್ರಾಮದ ಮೂಲಕ ಹರಿಯುತ್ತಿದ್ದ ಹಳ್ಳವೊಂದರ ದಿಕ್ಕನ್ನು ಬದಲಾಯಿಸಿದ್ದು ಸಹ ನಿವಾಸಿಗಳನ್ನು ರೊಚ್ಚಿಗೆಬ್ಬಿಸಿದೆ. ಅವರ ಪ್ರಶ್ನೆಗಳಿಗೆ ಉತ್ತರಿಸಲಾಗದ ಸಚಿವೆ ಇನ್ನೊಮ್ಮೆ ಊರಿಗೆ ಬಂದು ಮಾತಾಡುವುದಾಗಿ ಹೇಳಿ ಅಲ್ಲಿಂದ ಹೊರಟರು.
ಧಾರವಾಡ, ಏಪ್ರಿಲ್ 3: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಾಯಶಃ ಇದನ್ನು ನಿರೀಕ್ಷಿಸಿರಲಿಲ್ಲ. ಅವರ ಕುಟುಂಬ ಒಡೆತನದ ಮೃಣಾಲ್ ಶುಗರ್ಸ್ ಫ್ಯಾಕ್ಟರಿ (Mrinal Sugars factory) ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲಿ ಶುರುವಾಗಲಿದೆ. ಸ್ಥಳದಲ್ಲಿ ಕಟ್ಟಡವೊಂದರ ನಿರ್ಮಾಣಕ್ಕೆ ಸಚಿವೆ ಪೂಜೆ ನೆರವೇರಿಸುತ್ತಿದ್ದಂತೆಯೇ ಗ್ರಾಮದ ಜನ ಒಂದುಗೂಡಿ ಧರಣಿಗೆ ಕೂತು ತಮಗೆ ಇಲ್ಲಿ ಫ್ಯಾಕ್ಟರಿ ಬೇಕಿಲ್ಲ ಎಂದರು. ಗ್ರಾಮಸ್ಥರ ಪರವಾಗಿ ಇಬ್ಬರು ಪುರುಷರು ಮತ್ತೊಬ್ಬ ಮಹಿಳೆ ಮಾತಾಡಿದರು. ಲಕ್ಷ್ಮಿಯವರ ಜೊತೆ ಅವರ ಮಗ ಮೃಣಾಲ್ ಮತ್ತು ಸಹೋದರ ಚನ್ನರಾಜ್ ಹಟ್ಟಿಹೊಳಿ ಇದ್ದರಾದರೂ ಗ್ರಾಮಸ್ಥರ ಪ್ರಶ್ನೆಗಳಿಗೆ ಯಾರಿಂದಲೂ ಉತ್ತರ ಸಿಗಲಿಲ್ಲ
ಇದನ್ನೂ ಓದಿ: ಪರಿಷತ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ ಪ್ರಕರಣ ಒಂದು ಕೆಟ್ಟ ಘಳಿಗೆ ಎಂದ ಎಮ್ಮೆಲ್ಸಿ ಸಿಟಿ ರವಿ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ