ಪರಿಷತ್ನಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ನಿಂದನೆ ಪ್ರಕರಣ ಒಂದು ಕೆಟ್ಟ ಘಳಿಗೆ ಎಂದ ಎಮ್ಮೆಲ್ಸಿ ಸಿಟಿ ರವಿ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಬಗ್ಗೆ ಮಾತಾಡಿದ ಸಿಟಿ ರವಿ, ಪುರಾತನ ಕಾಲದಿಂದಲೂ ಭಾರತ ಮಹಿಳೆಯರನ್ನು ಗೌರವಿಸುತ್ತಾ ಬಂದಿದೆ, ಭಗವಂತ ಕೂಡ ಅರ್ಧನಾರೀಶ್ವರನಾಗಿ ಪ್ರಕಟಗೊಂಡು ತನ್ನಲ್ಲಿ ಪುರುಷ ಮತ್ತು ಮಹಿಳೆ ಸಮಾನವಾಗಿದ್ದಾರೆ ಅನ್ನೋದನ್ನು ಸಾರಿದ, ಸಂಕಷ್ಟದ ಸಂದರ್ಭಗಳಲ್ಲಿ ಶಕ್ತದೇವತೆ ದುರ್ಗೆಯೇ ನೆರವಿಗೆ ಬರೋದು ಎಂದು ಹೇಳಿದರು.
ಬೆಳಗಾವಿ, ಮಾರ್ಚ್ 8: ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ತಮ್ಮ ಪತ್ನಿಯೊಂದಿಗೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದಲ್ಲಿ (Kapileshwara temple) ರುದ್ರಾಭಿಷೇಕ ಮಾಡಿಸಿದರು. ಪೂಜೆ ಸಲ್ಲಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಸಾತ್ವಿಕ ಸ್ವರದಲ್ಲಿ ಶ್ಲೋಕಗಳನ್ನು ಹೇಳುತ್ತಾ ಮಾತಾಡಿದರು. ಪರಿಷತ್ ಕಲಾಪ ನಡೆಯುತ್ತಿರುವಾಗ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಅವಾಚ್ಯ ಪದದಲ್ಲಿ ನಿಂದಿಸಿದ ಅರೋಪದ ಬಗ್ಗೆ ಕೇಳಿದಾಗ, ಅದೊಂದು ಕೆಟ್ಟ ಘಳಿಗೆ ಅದರ ವಿಷಯವಾಗಿ ಮಾತಾಡಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಭಗವದ್ಗೀತೆ ಮೇಲೆ ತನ್ನೊಂದಿಗೆ ಚರ್ಚೆಗೆ ಬರಲು ಅಶೋಕ್, ಸಿಟಿ ರವಿ ಮತ್ತು ಯತ್ನಾಳ್ ಗೆ ಪ್ರದೀಪ್ ಈಶ್ವರ್ ಪಂಥಾಹ್ವಾನ
Latest Videos