ಮುಸಲ್ಮಾನರಿಗೆ ರಂಜಾನ್ನಲ್ಲಿ ಬೇಗ ಮನೆಗೆ ಅವಕಾಶ ನೀಡೋದಾದರೆ ಬೇರೆ ಧರ್ಮಗಳ ಆಚರಣೆಗಳಿಗೂ ಅವಕಾಶ ನೀಡಿ: ಸಿಟಿ ರವಿ
ಹಿಂದೂಗಳು ಮಹಾಶಿವರಾತ್ರಿ ಸಮಯದಲ್ಲಿ ರಾತ್ರಿಯಿಡೀ ಭಜನೆ ಮಾಡುತ್ತಾರೆ, ಏಕಾದಶಿ ಸಂದರ್ಭದಲ್ಲಿ ಉಪವಾಸ ಮಾಡುತ್ತಾರೆ . ಹಾಗೆಯೇ ಎಲ್ಲ ಧರ್ಮದವರು ಒಂದೊಂದು ಬಗೆಯ ಆಚರಣೆ ಮಾಡುತ್ತಾರೆ, ಮುಸಲ್ಮಾನರಿಗೆ ಬೇಗ ಮನೆಗೆ ಹೋಗಲು ಅವಕಾಶ ನೀಡಬಾರದು ಅಂತ ಹೇಳುತ್ತಿಲ್ಲ, ಅವರಿಗೆ ಅವಕಾಶ ಕೊಡುವುದಾದರೆ ಎಲ್ಲರಿಗೂ ಕೊಡಲಿ ಅನ್ನೋದೇ ತಮ್ಮ ವಾದ ಎಂದು ಸಿಟಿ ರವಿ ಹೇಳಿದರು.
ಬೆಂಗಳೂರು: ರಂಜಾನ್ ತಿಂಗಳಲ್ಲಿ ಮುಸ್ಲಿಂ ಸಮುದಾಯದ ಸರ್ಕಾರಿ ನೌಕರರು ಒಂದು ಗಂಟೆ ಮೊದಲು ಕಚೇರಿಯಿಂದ ಮನೆಗೆ ಹೋಗುವ ಅವಕಾಶ ಕೇಳಿದ್ದು ಚರ್ಚೆಗೆ ಗ್ರಾಸವಾಗುತ್ತಿದೆ. ನಗರದಲ್ಲಿಂದು ಪ್ರತಿಕ್ರಿಯೆ ನೀಡಿದ ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿಟಿ ರವಿ ವಿಷಯಕ್ಕೆ ಸಂಬಂಧಿಸಿದಂತೆ ಸರ್ಕಾರದ ನಿಲುವೇನು ಅನ್ನೋದಿನ್ನೂ ಗೊತ್ತಾಗಿಲ್ಲ, ಜಾತ್ಯಾತೀತ ಸರ್ಕಾರ ಏನು ಮಾಡುತ್ತದೆ ಅಂತ ನೋಡಬೇಕಿದೆ, ಜಾತ್ಯಾತೀತ ಧೋರಣೆಯನ್ನು ಸರ್ಕಾರ ಹೇಗೆ ನಿಭಾಯಿಸುತ್ತದೆ, ಜಾತ್ಯಾತೀತತೆ ಅಂದರೆ ಸರ್ವರಿಗೂ ಸಮಾನ ಆವಕಾಶ ನೀಡಬೇಕು, ಒಬ್ಬರಿಗೆ ಹೆಚ್ಚು ಮತ್ತೊಬ್ಬರಿಗೆ ಕಡಿಮೆ ಅಂತ ಮಾಡಲಾಗಲ್ಲ, ಸರ್ವಧರ್ಮ ಸಮಪಾಲು ಅಂತ ಡಾ ಬಿಅರ್ ಅಂಬೇಡ್ಕರ್ ಹೇಳಿದರು, ಅವರ ಜಾತ್ಯಾತೀತತೆ ವ್ಯಾಖ್ಯಾನದಲ್ಲಿ ಓಲೈಕೆಗೆ ಅವಕಾಶವಿಲ್ಲ ಎಂದು ರವಿ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಹೆಬ್ಬಾಳ್ಕರ್ರನ್ನು ನಿಂದಿಸಿದ ಪ್ರಕರಣ ರದ್ದು ಕೋರಿ ಸಿಟಿ ರವಿ ಅರ್ಜಿ: ಹೈಕೋರ್ಟ್ನಲ್ಲಿ ವಾದ, ಪ್ರತಿವಾದ ಹೀಗಿತ್ತು