Viral Video: ದರೋಡೆಗೆ ಹೋದಾಗ ಮಾಲೀಕ ಎದ್ದಿದ್ದನ್ನು ನೋಡಿ ಟೆರೇಸ್ನಿಂದ ಬಿದ್ದ ಕಳ್ಳ
ಉತ್ತರ ಪ್ರದೇಶದಲ್ಲಿ ಮನೆಯ ಟೆರೇಸ್ ಮೇಲೆ ಕಳ್ಳನೊಬ್ಬ ಮನೆಯೊಳಗೆ ಹೋಗಲು ಪ್ರಯತ್ನಿಸುತ್ತಿರುವಾಗ ಆ ಮನೆಯ ಮಾಲೀಕರು ಎಚ್ಚರಗೊಂಡಿದ್ದನ್ನು ನೋಡಿ ಭಯದಿಂದ ಟೆರೇಸ್ನಿಂದ ಕೆಳಗೆ ಬಿದ್ದಿದ್ದಾನೆ. ಈ ಘಟನೆ ತಡರಾತ್ರಿ ನಡೆದಿದ್ದು, ಕಳ್ಳನು ಮೇಲ್ಛಾವಣಿಯ ಮೇಲೆ ಹತ್ತಿ ಕದಿಯುವ ಉದ್ದೇಶದಿಂದ ಮನೆಯೊಳಗೆ ನುಗ್ಗಿದ. ಆದರೆ ಮನೆಯವರು ಎಚ್ಚರವಾಗಿದ್ದರಿಂದ ಗಾಬರಿಯಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಕೆಳಗೆ ಬಿದ್ದಿದ್ದಾನೆ.
ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಕಳ್ಳತನಕ್ಕೆ ಹೋಗಿದ್ದ ಕಳ್ಳ ಮನೆಯೊಳಗೆ ನುಗ್ಗಬೇಕು ಎನ್ನುವಷ್ಟರಲ್ಲಿ ಮನೆಯ ಮಾಲೀಕರು ಎಚ್ಚರವಾಗಿದ್ದಾರೆ. ಇದರಿಂದ ಗಾಬರಿಯಾದ ಆತ ತಪ್ಪಿಸಿಕೊಳ್ಳಲು ಪ್ರಯತ್ನಿಸುವಾಗ ಟೆರೇಸ್ನಿಂದ ಕೆಳಗೆ ಬಿದ್ದಿದ್ದಾನೆ. ಸಿಸಿಟಿವಿ ಕ್ಯಾಮೆರಾದಲ್ಲಿ ಇಡೀ ಘಟನೆ ಸೆರೆಯಾಗಿದ್ದು, ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಗಾಯಗೊಂಡ ಕಳ್ಳನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Feb 21, 2025 07:50 PM
Latest Videos