ದೇವನಹಳ್ಳಿ ನಲ್ಲೂರು ಟೋಲ್ ಪ್ಲಾಜಾ ಬಳಿ ಸರಣಿ ಅಪಘಾತ, ಯಾವುದೇ ಪ್ರಾಣಾಪಾಯವಿಲ್ಲ
ಅಪಘಾತಗಳು ಹೀಗೂ ಸಂಭವಿಸುತ್ತವೆ. ಕಾರಿನಲ್ಲಿದ್ದವರಿಗೆ ಏನಾಗುತ್ತಿದೆ ಅಂತ ಗೊತ್ತಾಗುವ ಮೊದಲೇ ಢಿಕ್ಕಿಗಳು ನಡೆದು ಹೋಗಿರುತ್ತವೆ. ಕಾರುಗಳಲ್ಲಿದ್ದವರೆಲ್ಲ ಸೇಫಾಗಿದ್ದಾರೆ. ಲಾರಿಯಿಂದ ಢಿಕ್ಕಿ ಹೊಡೆಸಿಕೊಂಡ ಮೊದಲ ಕಾರು ಎಲ್ಲಕ್ಕಿಂತ ಹೆಚ್ಚು ಘಾಸಿಗೊಳಗಾಗಿದೆ. ಸರಣು ಅಪಘಾತದಿಂದ ದೊಡ್ಡಬಳ್ಳಾಪುರ-ಹೊಸಕೋಟೆ ಹೆದ್ದಾರಿಯಲ್ಲಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಆಗಿತ್ತು.
ಚಿಕ್ಕಬಳ್ಳಾಪುರ: ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ನಲ್ಲೂರು ಟೋಲ್ ಪ್ಲಾಜಾ ಬಳಿ ಇಂದು ಮಧ್ಯಾಹ್ನ ನಡೆದ ಸರಣಿ ಅಪಘಾತವೊಂದರಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ, ಅದೃಷ್ಟವಶಾತ್ ಪ್ರಾಣಾಪಾಯವೇನೂ ಸಂಭವಿಸಿಲ್ಲ. ದೊಡ್ಡಬಳ್ಳಾಪುರ-ಹೊಸಕೋಟೆ ಹೆದ್ದಾರಿಯಲ್ಲಿರುವ ಟೋಲ್ ಪ್ಲಾಜಾದ ಬಳಿ ಅಪಘಾತ ಸಂಭವಿಸಿದ್ದು ಟೋಲ್ ಪಾವತಿಸಲು ಸರತಿ ಸಾಲಿನಲ್ಲಿ ಕಾಯುತ್ತಿದ್ದ ಕಾರೊಂದಕ್ಕೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದೆ. ಟ್ರಕ್ಕ್ ನಿಂದ ಗುದ್ದಿಸಿಕೊಂಡ ಕಾರು ತನ್ನ ಮುಂದಿನ ಕಾರಿಗೆ, ಅದು ತಮ್ಮ ಮುಂಭಾದ ಕಾರಿಗೆ ಹೀಗೆ…..4 ಕಾರುಗಳು ಜಖಂಗೊಂಡಿವೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ರಾಷ್ಟ್ರೀಯ ಹೆದ್ದಾರಿಯಲ್ಲಿ 3 ಲಾರಿಗಳು, 1 ಸ್ಲೀಪರ್ ಕೋಚ್ ಬಸ್, ಕಾರು ನಡುವೆ ಸರಣಿ ಅಪಘಾತ; ಹಲವರಿಗೆ ಗಾಯ