ಬೆಳಗಾವಿ ಜಿಲ್ಲೆಯಲ್ಲಿ ಮರಾಠಿ ಭಾಷಿಕರಿಂದ ಮತ್ತೇ ಪುಂಡಾಟ, ಕರ್ತವ್ಯನಿರತ ಕೆಎಸ್ಸಾರ್ಟಿಸಿ ನಿರ್ವಾಹಕ, ಚಾಲಕ ಮೇಲೆ ಹಲ್ಲೆ
ಕನ್ನಡನಾಡಲ್ಲಿ ಕನ್ನಡಿಗರಿಗೆ ರಕ್ಷಣೆ ಇಲ್ಲವೇ? ಬೆಳಗಾವಿಯಲ್ಲಿ ಮರಾಠಿ ಭಾಷಿಕರ ಪುಂಡಾಟ ನೋಡುತ್ತಿದ್ದರೆ ಇಂಥದೊಂದದು ಪ್ರಶ್ನೆ ಕನ್ನಡಿಗರಲ್ಲಿ ಏಳುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಮತ್ತು ಕನ್ನಡ ಪರ ಸಂಘಟನೆಗಳು ನಾಳೆ ಪ್ರತಿಭಟನೆ ನಡೆಸಲಿವೆಯಂತೆ. ಅಷ್ಟಾದರೆ ಸಾಕೇ? ಯಾಕೆಂದರೆ ಇದಕ್ಕೂ ಮೊದಲು ಸಹ ಪ್ರತಿಭಟನೆಗಳಾಗಿವೆ ಮತ್ತು ದೂರುಗಳು ದಾಖಲಾಗಿವೆ. ಆದರೆ ಮರಾಠಿ ಭಾಷಿಕರು ಜಗಳ ಕಾಯುವುದನ್ನು ನಿಲ್ಲಿಸಿಲ್ಲ.
ಬೆಳಗಾವಿ: ಜಿಲ್ಲೆಯಲ್ಲಿ ಮರಾಠಿ ಭಾಷಿಕ ಪುಂಡರ ಗೂಂಡಾಗಿರಿ ಬಗ್ಗೆ ನಾವು ಆಗಾಗ್ಗೆ ವರದಿ ಮಾಡಿದರೂ ಅವರ ಪುಂಡಾಟ ನಿಲ್ಲುತ್ತಿಲ್ಲ. ಸುಳೇಭಾವಿ ಮತ್ತು ಸಣ್ಣ ಬಾಳೆಕುಂದ್ರಿ ಗ್ರಾಮದ ನಡುವೆ ಮರಾಠಾ ಪುಂಡರು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದರಲ್ಲಿ ಕರ್ತವ್ಯನಿರತ ಕಂಡಕ್ಟರ್ ಮತ್ತು ಡ್ರೈವರ್ ಮೇಲೆ ಹಲ್ಲೆ ಮಾಡಿದ್ದಾರೆ. ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿರುವ ಕಂಡಕ್ಟರ್, ಮರಾಠಿಯಲ್ಲಿ ಮಾತಾಡುತ್ತ ಟಿಕೆಟ್ ಕೇಳಿದ ಮಹಿಳೆಯೊಬ್ಬರಿಗೆ ಕನ್ನಡದಲ್ಲಿ ಹೇಳಿ ಅಂದಿದ್ದಕ್ಕೆ ಗಲಾಟೆ ಶುರುವಾಗಿದೆಯಂತೆ. ಹಿರಿವಯಸ್ಸಿನವರಾಗಿರುವ ನಿರ್ವಾಹಕ ಗೂಂಡಾಗಳ ಗುಂಪು ತಮಗೆ ಥಳಸಿದ್ದನ್ನು ಹೇಳುವಾಗ ಅತ್ತುಬಿಡುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos