ಬೆಳಗಾವಿ ಖಡೇಬಜಾರ್ ಎಸಿಪಿ ಕಚೇರಿ ಆವರಣದಲ್ಲಿ ಡಿಸಿಪಿ ರೋಹನ್ ಜಗದೀಶ್ರಿಂದ ರೌಡಿ ಪರೇಡ್
ಟಿವಿ9 ವರದಿಗಾರ ನೀಡುವ ಮಾಹಿತಿ ಪ್ರಕಾರ ಬೆಳಗಾವಿ ನಗರದಲ್ಲಿ ಒಂದು ಸಾವಿರಕ್ಕೂ ಹೆಚ್ಚು ರೌಡಿಶೀಟರ್ ಗಳಿದ್ದಾರೆ ಮತ್ತು ಸಮಾರು 40 ಜನರನ್ನು ಗಡಿಪಾರು ಮಾಡಲಾಗಿದೆ. ನಗರದ ಡಿಸಿಪಿ ಮತ್ತು ಎಸ್ಪಿ ಗಳು ನಿರಂತರವಾಗಿ ಪುಂಟಾಟಿಕೆ ಮೆರೆಯುತ್ತಿರುವ ಎಂಇಎಸ್ ಕಾರ್ಯಕರ್ತರನ್ನೂ ಹದ್ದುಬಸ್ತಿನಲ್ಲಿಡಬೇಕಾದ ಅವಶ್ಯಕತೆಯಿದೆ. ಇವತ್ತು ಕೆಲ ಮರಾಠೀ ಭಾಷಿಕರು ಬಸ್ ಕಂಡಕ್ಟರೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ.
ಬೆಳಗಾವಿ: ಬೆಳಗಾವಿ ಡಿಸಿಪಿ ರೋಹನ್ ಜಗದೀಶ್ ನಗರದ ಖಡೇಬಜಾರ್ನಲ್ಲಿರುವ ಎಸಿಪಿ ಕಚೇರಿ ಆವರಣದಲ್ಲಿ ರೌಡಿ ಪರೇಡ್ ಮಾಡಿಸಿ 100 ಕ್ಕೂ ಹೆಚ್ಚು ರೌಡಿ ಶೀಟರ್ಗಳಿಗೆ ಸಜ್ಜನರಾಗಿ ಬದುಕುವಂತೆ ಎಚ್ಚರಿಕೆ ನೀಡಿದರು. ರೌಡಿಶೀಟರ್ ಗಳ ಮೇಲೆ ಪೊಲೀರು ಸದಾ ನಿಗಾ ಇಟ್ಟಿರುತ್ತಾರೆ, ಯಾವುದೇ ಅಕ್ರಮದಲ್ಲಿ ಭಾಗಿಯಾದರೆ, ಕಲಹಗಳಲ್ಲಿ ಪಾಲ್ಗೊಂಡರೆ, ಡಾನ್ ಗಳ ಹಾಗೆ ಮಧ್ಯಸ್ಥಿಕೆ ವಹಿಸಿ ಜಗಳಗಳನ್ನು ಬಿಡಿಸಲು ಹೋದರೆ ತಕ್ಕ ಶಾಸ್ತಿ ಮಾಡಲಾಗುವುದು. ಜಗಳ ತಂಟೆಗಳಿಂದ ದೂರವಿದ್ದರೆ ರೌಡಿಗಳಿಗೆ ಒಳ್ಳೆಯದು, ಹತ್ತು ವರ್ಷಗಳ ಕಾಲ ಯಾವುದೇ ರೀತಿಯ ಗಲಾಟೆ, ಜೂಜು, ಕಳ್ಳತನ, ದರೋಡೆ ಮೊದಲಾದವುಗಳಲ್ಲಿ ಭಾಗಿಯಾಗದೆ ಸಜ್ಜನರ ಹಾಗೆ ಬದುಕಿದ್ದರೆ ಅಂಥವರ ಹೆಸರನ್ನು ರೌಡಿಶೀಟರ್ ಲಿಸ್ಟ್ ನಿಂದ ತೆಗೆದುಹಾಕವ ಪ್ರಯತ್ನ ಮಾಡಲಾಗುವುದು ಎಂದು ರೋಹನ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಗಳಿಗೆ ಸಂಕ್ರಾಂತಿ ಹಬ್ಬದ ಬುತ್ತಿ ಕೊಡಲು ಬಂದ ಅತ್ತೆಯನ್ನೇ ಕೊಂದ ಅಳಿಯ, ಕಾರಣವೇನು?