ಕನ್ನಡ ಹಾಡು ಹಾಕಿದ್ದಕ್ಕೆ ಬೈಕ್ಗೆ ಬೆಂಕಿ ಹಚ್ಚಿ ಹಲ್ಲೆ ನಡೆಸಿ ಎಂಇಎಸ್ ಗೂಂಡಾಗಳ ಪುಂಡಾಟ; 10 ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು
ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರು ವರ ಸಿದ್ದು ಸಹೋದರ ಭರಮ ಎಂಬುವರ ಬೈಕ್ಗೆ ಬೆಂಕಿ ಹಚ್ಚಿ ಕಿರಿಕ್ ಮಾಡಿದ್ದಾರೆ.
ಬೆಳಗಾವಿ: ಜಿಲ್ಲೆಯಲ್ಲಿ ಮತ್ತೆ ಎಂಇಎಸ್ ಗೂಂಡಾಗಳ ಪುಂಡಾಟ ಶುರುವಾಗಿದೆ. ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಧು ವರ, ಕನ್ನಡಿಗ ಯುವಕರ ಮೇಲೆ MES ಪುಂಡರು ಹಲ್ಲೆ ನಡೆಸಿದ್ದಾರೆ. ಬೆಳಗಾವಿ ತಾಲೂಕಿನ ಧಾಮನೆ ಗ್ರಾಮದಲ್ಲಿ ತಡರಾತ್ರಿ ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿದ್ದಕ್ಕೆ MES ಪುಂಡರು ವರ ಸಿದ್ದು ಸಹೋದರ ಭರಮ ಎಂಬುವರ ಬೈಕ್ಗೆ ಬೆಂಕಿ ಹಚ್ಚಿ ಕಿರಿಕ್ ಮಾಡಿದ್ದಾರೆ. ರಾಣಿ ಚನ್ನಮ್ಮ ನಗರ ಅಂತಾ ಕನ್ನಡದಲ್ಲಿ ಬರೆದಿದ್ದ ಬೋರ್ಡ್ ಎದುರು ಧರ್ಮವೀರ ಸಂಭಾಜಿ ನಗರ ಎಂಬ ಮರಾಠಿ ಬೋರ್ಡ್ ಹಾಕಿದ ಉದ್ಧಟತನ ಮೆರೆದಿದ್ದಾರೆ. ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ.
ಘಟನೆ ಖಂಡಿಸಿ ಕರವೇ ಹಾಗೂ ಕುಟುಂಬಸ್ಥರ ಪ್ರತಿಭಟನೆ ಇನ್ನು ಮತ್ತೊಂದು ಕಡೆ ಎಂಇಎಸ್ ಪುಂಡರ ವಿರುದ್ಧ ಕರವೇ ಹಾಗೂ ಕುಟುಂಬಸ್ಥರು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದ್ದಾರೆ. ಬೆಳಗಾವಿಯ ಸಾಹಿತ್ಯ ಭವನದಲ್ಲಿ ಆರೋಪಿಗಳ ಬಂಧನಕ್ಕೆ ಕರವೇ, ಕುಟುಂಬಸ್ಥರು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಕನ್ನಡಿಗರ ಮೇಲೆ ಈ ಪುಂಡರು ಹಲ್ಲೆ ನಡೆಸಿದ್ದರು. ಹೀಗಾಗಿ ಎಂಇಎಸ್ ಗೂಂಡಾಗಳನ್ನ ಗಡಿಪಾರು ಮಾಡಿ ಕುಟುಂಬಕ್ಕೆ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ದೆಹಲಿ ಕ್ರೀಡಾಂಗಣದಲ್ಲಿ ನಾಯಿ ವಾಕಿಂಗ್ ಅಷ್ಟೇ ಅಲ್ಲ; ವಿಐಪಿ ಸಂಸ್ಕೃತಿಯಿಂದ ಬೆಂಗಳೂರು ಆ್ಯಂಬುಲೆನ್ಸ್ನಲ್ಲಿದ್ದ ಜೀವಗಳಿಗೂ ಕುತ್ತು ಬಂದಿತ್ತು
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಮದುವೆ ಮನೆಗೆ ನುಗ್ಗಿ ಎಂಇಎಸ್ ಗೂಂಡಾಗಿರಿ ವಿಚಾರಕ್ಕೆ ಸಂಬಂಧಿಸಿ 10 ಆರೋಪಿಗಳನ್ನು ಬೆಳಗಾವಿ ಗ್ರಾಮೀಣ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಮದುವೆ ಸಮಾರಂಭದಲ್ಲಿ ಕನ್ನಡ ಹಾಡು ಹಾಕಿ, ನೃತ್ಯ ಮಾಡುತ್ತಿದ್ದವರ ಜತೆ ಕಿರಿಕ್ ತೆಗೆದು ವಧು ವರ, ಕನ್ನಡಿಗ ಯುವಕರ ಮೇಲೆ ಹಲ್ಲೆ ಮಾಡಿದ್ದರು. ವರ ಸಿದ್ದು ಸೈಬಣ್ಣವರ್, ವಧು ರೇಷ್ಮಾ ಸೇರಿ ಐವರ ಮೇಲೆ ಹಲ್ಲೆಯಾಗಿದೆ. ಮನೆಗೆ ನುಗ್ಗಿ ದೊಣ್ಣೆ, ಬಡಿಗೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಹಲ್ಲೆಯಿಂದ ಓರ್ವನ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಅಜಯ್ ಯಳ್ಳೂರಕರ್, ಆಕಾಶ್ ಸೇರಿ 10 ಜನರ ವಿರುದ್ಧ ವಧು ವರನ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ದೂರಿನಲ್ಲಿದ್ದ ಎಂಇಎಸ್ ಪುಂಡರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಾ.ಬೋರಲಿಂಗಯ್ಯ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮತ್ತೆ ಶುರುವಾದ ಹಿಜಾಬ್ ವಿವಾದ; ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದ ಮಂಗಳೂರು ವಿವಿ ಪ್ರಾಂಶುಪಾಲೆ ಅನುಸೂಯ ರೈ
Published On - 12:28 pm, Fri, 27 May 22