ಮತ್ತೆ ಶುರುವಾದ ಹಿಜಾಬ್ ವಿವಾದ; ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದ ಮಂಗಳೂರು ವಿವಿ ಪ್ರಾಂಶುಪಾಲೆ ಅನುಸೂಯ ರೈ
ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಮಂಗಳೂರಿನಲ್ಲಿ ಟಿವಿ9ಗೆ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ ಎಂದರು.
ಮಂಗಳೂರು: ಕೆಲ ತಿಂಗಳ ಹಿಂದೆ ಕರಾವಳಿ ಹೊತ್ತಿಕೊಂಡ ಹಿಜಾಬ್ ದಂಗಲ್ ರಾಜ್ಯಾದ್ಯಂತ ಧಗಧಗಿಸಿತ್ತು. ಕೋರ್ಟ್ ಆದೇಶದ ಬಳಿಕ ಬೂದಿ ಮುಚ್ಚಿದ ಕೆಂಡದಂತಾಗಿದ್ದ ಕೇಸ್ ಈಗ ಮತ್ತೆ ಧಗಧಗಿಸೋಕೆ ಆರಂಭಿಸಿದೆ. ಮತ್ತದೇ ಕರಾವಳಿಯಲ್ಲಿ ಹಿಜಾಬ್ ವಿವಾದ ಶುರುವಾಗಿದೆ. ಮೇ 10ರಂದು ಮಂಗಳೂರಿನ ವಿವಿ ಘಟಕ ಡಿಗ್ರಿ ಕಾಲೇಜಿನಲ್ಲಿ ಹಿಜಾಬ್ ವಿವಾದದ ಕಿಡಿ ಹೊತ್ತಿಕೊಂಡಿತ್ತು. ಪೋಷಕರ ಸಭೆಯಲ್ಲಿ ಹಿಜಾಬ್ ಧರಿಸದಂತೆ ಮೌಖಿಕವಾಗಿ ಸೂಚಿಸಲಾಗಿತ್ತಾದ್ರೂ, ಕಾಲೇಜು ಆಡಳಿತ ಮಂಡಳಿ ಯಾವುದೇ ಆದೇಶ ಜಾರಿ ಮಾಡಿರಲಿಲ್ಲ. ಇದ್ರಿಂದ ರೊಚ್ಚಿಗೆದ್ದ ಹಿಂದೂ ವಿದ್ಯಾರ್ಥಿಗಳು ಹೋರಾಟಕ್ಕೆ ಇಳಿದಿದ್ರು. ಇದಾದ ಬಳಿಕ ಅನೇಕ ಬೆಳವಣಿಗೆಗಳಾಗಿದ್ದು ಸದ್ಯ ಈ ಬಗ್ಗೆ ಸಭೆಗಳು, ಚರ್ಚೆಗಳು ನಡೆಯುತ್ತಿವೆ.
ಇನ್ನು ಮಂಗಳೂರಿನ ಹಂಪನಕಟ್ಟೆ ಕಾಲೇಜಿನಲ್ಲಿ ಹಿಜಾಬ್ ವಿವಾದಕ್ಕೆ ಸಂಬಂಧಿಸಿ ಹಿಜಾಬ್ ಧರಿಸಿ ಬಂದರೆ ಕಾಲೇಜಿಗೆ ಸೇರಿಸುವುದಿಲ್ಲ ಎಂದು ಮಂಗಳೂರಿನಲ್ಲಿ ಟಿವಿ9ಗೆ ಶಾಸಕ ವೇದವ್ಯಾಸ ಕಾಮತ್ ತಿಳಿಸಿದ್ದಾರೆ. ಹಿಜಾಬ್ ವಿವಾದದ ಹಿಂದೆ ಹಲವು ಪಕ್ಷಗಳ ಕೈವಾಡ ಇದೆ. ಎಸ್ಡಿಪಿಐ, ಕಾಂಗ್ರೆಸ್, ಕಮ್ಯೂನಿಸ್ಟ್ ಪಕ್ಷಗಳ ಕೈವಾಡ ಇದೆ. ಹಿಜಾಬ್ ಮೂಲಕ ರಾಜ್ಯ ಸರ್ಕಾರಕ್ಕೆ ಮುಜುಗರ ತರುವ ಯತ್ನ ನಡೆಯುತ್ತಿದೆ. ಕಾನೂನು ಪಾಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇವೆ ಎಂದು ಹೇಳಿದ್ದಾರೆ. ಇನ್ನು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಜೊತೆ ಹೋಗಿರುವ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, DC ಅಲ್ಲ ಕಾಂಗ್ರೆಸ್ನ ಸಿಎಂ ಇದ್ರೂ ಅವಕಾಶ ಕೊಡಲು ಸಾಧ್ಯವಿಲ್ಲ. ಹಿಜಾಬ್ ಧರಿಸಲು ಕೆಲ ಅಧ್ಯಾಪಕರ ಕುಮ್ಮಕ್ಕು ಆರೋಪವಿದೆ. ಅಂತಹವರ ವಿರುದ್ಧ ಕ್ರಮಕೈಗೊಳ್ಳುವಂತೆ ಇಲಾಖೆಗೆ ಸೂಚಿಸಿದ್ದೇವೆ. ಮಂಗಳೂರು ವಿವಿಯನ್ನು ಜೆಎನ್ಯು ರೀತಿ ಮಾಡಲು ಬಿಡಲ್ಲ. ನ್ಯಾಯಾಲಯ, ಕಾನೂನಿಗೆ ಗೌರವ ನೀಡಿ ಕಾಲೇಜಿಗೆ ಬನ್ನಿ. ಉಳಿದ ವಿಚಾರವನ್ನು ವಿದ್ಯಾರ್ಥಿಗಳ ಪೋಷಕರಿಗೆ ಬಿಟ್ಟಿದ್ದು ಎಂದರು. ಇದನ್ನೂ ಓದಿ: ವೈವಿಧ್ಯಗೊಳಿಸಿದ ಆಹಾರಕ್ರಮಗಳು ಮಕ್ಕಳ ಪ್ರೋಟೀನ್ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು
ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶವಿಲ್ಲ ತರಗತಿಗಳಲ್ಲಿ ಮಾತ್ರವಲ್ಲ, ಕ್ಯಾಂಪಸ್ನಲ್ಲೂ ಹಿಜಾಬ್ಗೆ ಅವಕಾಶವಿಲ್ಲ ಎಂದು ಟಿವಿ9ಗೆ ಮಂಗಳೂರು ವಿವಿ ಪ್ರಾಂಶುಪಾಲೆ ಅನುಸೂಯ ರೈ ಸ್ಪಷ್ಟಪಡಿಸಿದ್ದಾರೆ. ನಮ್ಮಲ್ಲಿ 44 ಜನ ಮುಸ್ಲಿಂ ವಿದ್ಯಾರ್ಥಿನಿಯರಿದ್ದಾರೆ. ಕೆಲ ವಿದ್ಯಾರ್ಥಿಗಳಿಗೆ ಮಾತ್ರ ಈ ಆದೇಶದ ಬಗ್ಗೆ ಸಮಸ್ಯೆ ಇದೆ. ಅವರನ್ನು ಅವರ ಪೋಷಕರ ಮನವೊಲಿಸಲು ನಮಗೆ ಸಮಯ ಬೇಕು. ಅವರು ನ್ಯಾಯಾಲಯದ ಆದೇಶ ಆಡಳಿತ ಮಂಡಳಿಯಿಂದ ನಿಯಮವನ್ನು ಪಾಲಿಸಲೇ ಬೇಕು. ಆಡಳಿತ ಮಂಡಳಿ ಆದೇಶ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ಅನೇಕ ಶಾಸಕರು ಕರೆ ಮಾಡಿದ್ದಾರೆ ನನಗೆ ಯಾರು ಒತ್ತಡ ಹಾಕಿಲ್ಲ. ಕೇವಲ ನಮ್ಮ ಆದೇಶದ ಬಗ್ಗೆ ಮಾಹಿತಿ ಪಡೆದಿದ್ದಾರೆ ಎಂದು ಪ್ರಾಂಶುಪಾಲರಾದ ಅನುಸೂಯ ರೈ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
ಇನ್ನು ಈ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಮಾತನಾಡಿದ್ದು ಹಿಜಾಬ್ ಕಾರಣಕ್ಕೆ ಮುಸ್ಲಿಂ ಹೆಣ್ಣುಮಕ್ಕಳನ್ನ ಪ್ರತ್ಯೇಕಿಸಲಾಗುತ್ತಿದೆ. ಇದು ತಾಲಿಬಾನ್ ಸಂಸ್ಕೃತಿ ಅಂತಾ ಅನಿಸುತ್ತಿದೆ. ಮುಸ್ಲಿಂ ಸಮಾಜ ಮತ್ತೆ ಮತ್ತೆ ಒಂದು ರಿಗ್ರೇಸಿವ್ ಸಮಾಜ ಅಂತಾ ತೋರಿಸಿಕೊಡುತ್ತಿದೆ. ಮಂಗಳೂರನ್ನ ಕೇರಳಕ್ಕೆ ಸೇರಿಸುವ ಹುನ್ನಾರ ಇದು. ಹೀಗಾಗಿ ಮಂಗಳೂರಿನಲ್ಲಿ ಹಿಜಾಬ್ ಸೇರಿದಂತೆ ಬೇರೆ ಬೇರೆ ಸಂಘರ್ಷ ಕೇಳಿ ಬರುತ್ತಿವೆ. ಆದ್ರೆ ಮಂಗಳೂರಿನಲ್ಲಿ ಹಿಂದೂಗಳು ಬಲವಾಗಿರುವುದರಿಂದ ಇತರದ ಗಲಾಟೆ ನಡೆಯುತ್ತಿವೆ. ಆದ್ರೆ ಕರವಾಳಿಯ ಈ ಗಲಾಟೆಗಳ ಹಿಂದೆ ಅಂತಾರಾಷ್ಟ್ರೀಯ ಹಣ ಬಳಕೆಯಾಗುತ್ತಿದೆ. ಯೂಪಿ ಚುನಾವಣೆ ಮೊದಲು ಇದೇ ತರ ಗಲಾಟೆ ನಡೆಯುತ್ತಿದ್ವು. ಮುಸ್ಲಿಂ ಓಟುಗಳನ್ನ ಹೇಗಾದ್ರು ಪಡೆಯಬೇಕು ಅನ್ನೊ ಚಿಂತನೆ ಇದು. ಆರು ಜನ ಹೆಣ್ಣು ಮಕ್ಕಳಿಂದ ಹಿಜಾಬ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚಗೆ ಕಾರಣವಾಯ್ತು. ಇದನ್ನೂ ಓದಿ: ದೊಡ್ಡಗುಬ್ಬಿ ಕೆರೆಯಲ್ಲಿ ನೀರು ಪಾಲಾಗಿದ್ದ ಮೂವರು ಬಾಲಕರು; ಓರ್ವ ಬಾಲಕನ ಶವ ಪತ್ತೆ
ಇದೇ ಆರು ಜನ ಹಿಜಾಬ್ ಹೆಣ್ಣು ಮಕ್ಕಳೆ ಹಿಂದೂ ಕಾರ್ಯಕರ್ತ ಹರ್ಷ ಕೊಲೆಗೂ ಕಾರಣವಾದ್ರೂ. ಮಳಲಿ ಮಸೀದಿ ವಿಚಾರ ಹಿಂದಕ್ಕೆ ತಳುವ ಪ್ರಯತ್ನ ಕೂಡಾ ಇದಾಗಿದೆ. ಮಳಲಿ ತಾಂಬೂಲ ಪ್ರಶ್ನೆಯನ್ನ ಸರ್ಕಾರ ನಿಷೇಧಿಸಬೇಕು ಅಂತಾರೆ. ಏನ್ರಿ ಯಾಕೆ ಅಷ್ಟ ಮಂಗಳ ತಾಂಬೂಲ ಪ್ರಶ್ನೆ ನಿಷೇಧಿಸಬೇಕು. ಮಂದಿರ ಕೆಡವಿ ಮಸೀದಿ ಕಟ್ಟಿರುವ ಹಿಂದೆ ನಿಂತಿಕೊಳ್ಳುವುದು ಎಷ್ಟು ಸರಿ. ಹಿಜಾಬ್ ವಿವಾದ ಬೇರೆ ಬೇರೆ ಹೋರಾಟಗಳಿಗೆ ಕಾರಣವಾಯ್ತು. ಮತ್ತೆ ಹಿಜಾಬ್ ತಗಾದೆ ಶುರು ಮಾಡಿದ್ರು ಮತ್ತೆ ಹಲಾಲ್, ಲೌಡ್ ಸ್ಪೀಕರ್ ಸಂಘರ್ಷ ಮೇಲ್ನಟಕ್ಕೊ ಬರಬಹುದು. ಹಿಜಾಬ್ ಈ ಹೋರಾಟದ ಹಿಂದೆ ರಾಜಕೀಯ ಕೈವಾಡವೂ ಇದೆ.
ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಪದೇ ಪದೇ ಮುಸ್ಲಿಂ ಪರವಾಗಿ ಮಾತನಾಡ್ತೀರೊದು ಸರ್ಕಾರದ ನೀತಿ ಹಿಜಾಬ್ ವಿಚಾರದಲ್ಲಿ ತುಂಬಾ ಸ್ಪಷ್ಟವಾಗಿದೆ. ಹಿಜಾಬ್ ಸೇರಿದಂತೆ ಯಾವುದೇ ಮತ ಪಂಥಗಳ ವಸ್ತ್ರಸಂಹಿತೆಗೆ ಅವಕಾಶ ಇಲ್ಲ. ಕೋರ್ಟ್ ಕೂಡಾ ತುಂಬಾ ಸ್ಪಷ್ಟವಾಗಿ ತಿಳಿಸಿದೆ. ಹೀಗಾಗಿ ಹಿಜಾಬ್ ವಿಚಾರದಲ್ಲಿ ಸರ್ಕಾರ ಸೂಕ್ತ ಕ್ರಮವಹಿಸುತ್ತೆ ಎಂದರು. ಇದನ್ನೂ ಓದಿ: Petrol Price Today: ದೇಶದಲ್ಲಿ ಇಂಧನ ದರ ಸ್ಥಿರ; ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
Published On - 11:35 am, Fri, 27 May 22