ಚಿತ್ರದುರ್ಗದಲ್ಲೂ ಮಳೆಯ ಭರಾಟೆ, ಆದರೆ ಇಲ್ಲಿಯ ರಸ್ತೆಗಳು ಬೆಂಗಳೂರು ರಸ್ತೆಗಳಷ್ಟು ಅಧ್ವಾನ ಅಲ್ಲ
ಚಿತ್ರದುರ್ಗ ಹಿಂದುಳಿದ ಜಿಲ್ಲೆಗಳಲ್ಲಿ ಒಂದು ಅಂತ ಹೇಳುತ್ತಾರೆ ಆದರೆ ಜಿಲ್ಲಾ ಕೇಂದ್ರದ ರಸ್ತೆಗಳು ಎಟ್ ಲೀಸ್ಟ್ ಮಳೆಗಾಲದಲ್ಲಿ ಬೆಂಗಳೂರಿನ ರಸ್ತೆಗಳಿಗಿಂತ ಚೆನ್ನಾಗಿವೆ ಅಂತ ಹೇಳಿದರೆ ಉತ್ಪ್ರೇಕ್ಷೆ ಅನಿಸದು. ಮಳೆಯಾಗುತ್ತಿದ್ದರೂ ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿಯುತ್ತಿಲ್ಲ, ಬೆಂಗಳೂರಿನ ಹಾಗೆ! ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆ ಪ್ರಕಾರ ನಾಳೆಯೂ ಬೆಂಗಳೂರು, ಚಿತ್ರದುರ್ಗ ಮತ್ತು ದಕ್ಷಿಣದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಚಿತ್ರದುರ್ಗ, ಏಪ್ರಿಲ್ 3: ಕರ್ನಾಟಕದ ದಕ್ಷಿಣ ಭಾಗದಲ್ಲಿ ಜನರಿಗೆ ಇವತ್ತು ಬಿಸಿಲಿನಿಂದ ತಾತ್ಕಾಲಿಕ ಮುಕ್ತಿ (temporary relief) ಸಿಕ್ಕಿದೆ. ನಿನ್ನೆ ವರದಿಯಾಗಿರುವಂತೆ ಬೆಂಗಳೂರು ಮತ್ತು ಹಲವು ಜಿಲ್ಲೆಗಳಲ್ಲಿ ಇವತ್ತು ಮಳೆಯಾಗಿದೆ, ಮಳೆಯಾಗುತ್ತಿದೆ. ಚಿತ್ರದುರ್ಗ ನಗರದ ದೃಶ್ಯವನ್ನು ವಿಡಿಯೋದಲ್ಲಿ ನೋಡಬಹುದು. ಕೋಟೆನಾಡು ಅಂತಲೂ ಕರೆಸಿಕೊಳ್ಳುವ ದುರ್ಗದಲ್ಲಿ ಬೇಸಿಗೆಯಲ್ಲಿ ತಾಪಮಾನ ಅಧಿಕವಾಗಿರುತ್ತದೆ ಅಂತ ಹೇಳಲಾಗದು, ಅಲ್ಲಿಂದ ಮೇಲ್ಭಾಗಕ್ಕೆ ಹೋದರೆ ಬಿಸಿಲಿನ ಝಳ ಹೆಚ್ಚುತ್ತಾ ಹೋಗುತ್ತದೆ. ಅದೇನೇ ಇರಲಿ ದುರ್ಗದಲ್ಲೂ ಇವತ್ತು ಮಳೆ ಮತ್ತು ಜನ ಅದನ್ನು ಸ್ವಾಗತಿಸಿದರು.
ಇದನ್ನೂ ಓದಿ: ಕೇವಲ ಅರ್ಧಗಂಟೆ ಸುರಿದ ಮಳೆಗೆ ಬೆಂಗಳೂರು ನಗರದ ರಸ್ತೆಗಳು ಅಧ್ವಾನ, ಪರದಾಡಿದ ವಾಹನ ಸವಾರರು
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos