ಕೇವಲ ಅರ್ಧಗಂಟೆ ಸುರಿದ ಮಳೆಗೆ ಬೆಂಗಳೂರು ನಗರದ ರಸ್ತೆಗಳು ಅಧ್ವಾನ, ಪರದಾಡಿದ ವಾಹನ ಸವಾರರು
ನೀವು ಗಮನಿಸಿರಬಹುದು, ಮಳೆಗಾಲ ಇನ್ನೇನು ಶುರುವಾಗುತ್ತದೆ ಅನ್ನುವಾಗ ಜನಪ್ರತಿನಿಧಿಗಳು ಸಿಟಿ ರೌಂಡ್ಸ್ಗೆ ಹೋಗುತ್ತಾರೆ. ಅವರನ್ನು ಹಿಂಬಾಲಿಸುವ ಮಾಧ್ಯಮದವರಿಗೆ ರೈನೀ ಸೀಸನ್ನಲ್ಲಿ ಸಿಟಿ ಹೇಗಿರಲಿದೆ ಅಂತ ರೋಸಿ ಪಿಕ್ಚರ್ ನೀಡುತ್ತಾರೆ! ಆಧುನಿಕತೆಯನ್ನು ಬಿಂಬಿಸುವ ಕಟ್ಟಡಗಳು ನಗರದಲ್ಲಿ ತಲೆಯೆತ್ತಿದರೆ ಮಾತ್ರ ಅಭಿವೃದ್ಧಿಯೇ ಅಂತ ಪ್ರಜ್ಞಾವಂತ ಬೆಂಗಳೂರಿಗರು ಮಳೆ ಸುರಿದಾಗೆಲ್ಲ ಕೇಳುತ್ತಾರೆ. ಉತ್ತರ ಯಾವಾಗ ಸಿಗುತ್ತದೆ ಅಂತ ಯಾರಿಗೂ ಗೊತ್ತಿಲ್ಲ.
ಬೆಂಗಳೂರು, ಏಪ್ರಿಲ್ 3: ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಸರ್ಕಾರಗಳೆಲ್ಲ ರಾಜಧಾನಿ ಬೆಂಗಳೂರು ಬಗ್ಗೆ ವಿಪರೀತ ಕಾಳಜಿ ತೋರಿ ನಗರವನ್ನು ಹಾಗೆ ಮಾಡುತ್ತೇವೆ ಹೀಗೆ ಮಾಡುತ್ತೇವೆ ಅನ್ನುತ್ತವೆ, ಅದರೆ ಬೆಂಗಳೂರು ಮಾತ್ರ ದಶಕಗಳ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದೆ! ಒಂದು ಸರ್ಕಾರ ನಗರವನ್ನು ಸಿಂಗಪೂರ್ ಮಾದರಿಯಲ್ಲಿ (Singapore model) ಬೆಳೆಸುತ್ತೇವೆ ಅನ್ನುತ್ತದೆ, ಮತ್ತೊಂದು ಸರ್ಕಾರ ಬ್ರ್ಯಾಂಡ್ ಬೆಂಗಳೂರು, ಗ್ರೇಟರ್ ಬೆಂಗಳೂರು ಮಾಡ್ತಿವಿ ಅನ್ನುತ್ತದೆ. ಆದರೆ ವಸ್ತು ಸ್ಥಿತಿ ಏನಿದೆ ಅಂತ ನೀವು ನೋಡಿ. ಕೇವಲ ಅರ್ಧ ಗಂಟೆಯ ಅಕಾಲಿಕ ಮಳೆಗೆ ನಗರದ ಸ್ಥಿತಿ ಹೀಗಿದೆ, ಇನ್ನು ಮಳೆಗಾಲದಲ್ಲಿ ಏನಾಗಬೇಡ?
ಇದನ್ನೂ ಓದಿ: Bangalore Rains: ಮಳೆಯಿಂದಾಗಿ ಬೆಂಗಳೂರಿನ ಹಲವೆಡೆ ವಾಹನ ಸಂಚಾರಕ್ಕೆ ಅಡ್ಡಿ: ಎಲ್ಲೆಲ್ಲಿ ಟ್ರಾಫಿಕ್ ಜಾಮ್, ಇಲ್ಲಿದೆ ವಿವರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ