ಬೆಂಗಳೂರಿನ ರಾಜಾಜಿನಗರದಲ್ಲಿ ಬೃಹತ್ ಮರ ಉರುಳಿ ಐದಾರು ವಾಹನಗಳು ಜಖಂ, ಅದೃಷ್ಟವಶಾತ್ ಪ್ರಾಣಾಪಾಯವಿಲ್ಲ
ನಗರದಲ್ಲಿರುವ ಮರಗಿಡಗಳ ಸಮೀಕ್ಷೆ ನಡೆಸುವುದು ಅತ್ಯಂತ ಅವಶ್ಯಕವೆನಿಸುತ್ತದೆ. ಪ್ರತಿ ಮಳೆಗಾಲದಲ್ಲಿ ಮರಗಳು ಉರುಳುವುದು ಅತ್ಯಂತ ಸಾಮಾನ್ಯ ಸಂಗತಿಯಾಗಿದೆ. ಸರ್ವೇ ಮಾಡಿಸುವಾಗ ಉರುಳಬಹುದಾದ ಮರಗಳು ಗಮನಕ್ಕೆ ಬಂದೇ ಬರುತ್ತವೆ, ಅಂಥ ಮರಗಳನ್ನು ಕಡಿಸಿಬಿಟ್ಟರೆ ಅವು ಉರುಳಿ ವಾಹನಗಳು ಜಖಂಗೊಳ್ಳೋದು, ಪ್ರಾಣಾಪಾಯ, ಗಂಭೀರ ಸ್ವರೂಪದ ಗಾಯ ಮೊದಲಾದವುಗಳನ್ನು ತಪ್ಪಿಸಿದಂತಾಗುತ್ತದೆ.
ಬೆಂಗಳೂರು, ಏಪ್ರಿಲ್ 3: ಬೆಂಗಳೂರಲ್ಲಿ ಮಳೆಯಾದರೆ ಸೃಷ್ಟಿಯಾಗುವ ಅವಾಂತರಗಳು ಒಂದೆರಡಲ್ಲ. ಇಲ್ನೋಡಿ ರಾಜಾಜಿನಗರದಲ್ಲಿ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದು ದೃಶ್ಯಗಳಲ್ಲಿ ಕಾಣುತ್ತಿರುವ ಕಾರು, ಮತ್ತೆರಡು ಕಾರು, ಎರಡು ಟೂ ವ್ಹೀಲರ್ಗಳಿ ಮತ್ತೊಂದು ಗೂಡ್ಸ್ ಕ್ಯಾರಿಯರ್ ಆಟೋ ಜಖಂಗೊಂಡಿವೆ. ಸಮಾಧಾನಕರ ಸಂಗತಿಯೆಂದರೆ ಯಾವುದೇ ಪ್ರಾಣಾಪಾಯ ಸಂಭವಿಸದಿರೋದು. ಉರುಳಿರುವ ಮರ ಬಹಳ ಹಳೆಯ ಕಾಲದ್ದು ಅದನ್ನು ತೆಗೆಸಿಬಿಡಿ ಅಂತ ಸ್ಥಳೀಯರು ಬಿಬಿಎಂಪಿ ಅಧಿಕಾರಿಗಳಿಗೆ ಹೇಳಿದರೂ ಅವರಿಂದ ಕ್ರಮ ಜರುಗಿಲ್ಲ.
ಇದನ್ನೂ ಓದಿ: ಬಿರುಗಾಳಿ ಮಳೆಗೆ ಉರುಳಿಬಿದ್ದ 150 ವರ್ಷದ ಹಳೆಯ ಅಶ್ವತ್ಥ ಮರ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
Latest Videos