ಬೆಂಗಳೂರಲ್ಲಿ ಮಳೆ ಸೃಷ್ಟಿಸುತ್ತಿರುವ ಅನಾಹುತಗಳ ಮೇಲೆ ಬೆಳಕು ಚೆಲ್ಲಿದ ಖ್ಯಾತ ವಕೀಲ ಜಗದೀಶ್
ಕೊಡಿಗೇಹಳ್ಳಿಯ ಕೆರೆಯನ್ನು ಶೇಕಡಾ 40ರಷ್ಟು ಒತ್ತುವರಿ ಮಾಡಿಕೊಳ್ಳಲಾಗಿದೆ, ಪ್ರದೇಶದ ರಾಜಾಕಾಲುವೆಗಳ ಮೇಲೆ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗಿದೆ, ಕೆಂಪೇಗೌಡ ಅವರ ಕಾಲದಲ್ಲಿ ಅಪಾರ ಸಂಖ್ಯೆಯಲ್ಲಿದ್ದ ಕೆರೆಗಳು ಈಗ ಬೆರಳೆಣಿಕೆಯಷ್ಟು ಮಾತ್ರ ಉಳಿದಿವೆ ಎಂದು ಜಗದೀಶ್ ಹೇಳುತ್ತಾರೆ.
ಬೆಂಗಳೂರು: ಬಾಯಿ ಭದ್ರವಿಲ್ಲದ ಕಾರಣ ಬಿಗ್ಬಾಸ್ ಕನ್ನಡ ಕಾರ್ಯಕ್ರಮದಿಂದ ಹೊರಬಿದ್ದಿರುವ ಬೆಂಗಳೂರಿನ ಖ್ಯಾತ ವಕೀಲ ಕೆಎನ್ ಜಗದೀಶ್ ನಗರದಲ್ಲಿ ಮಳೆ ಸೃಷ್ಟಿಸುತ್ತಿರುವ ಅವಾಂತರಗಳ ಬಗ್ಗೆ ಧ್ವನಿಯೆತ್ತಿದ್ದಾರೆ. ಪ್ರತಿಷ್ಠಿತ ಏರಿಯಾಗಳೆನಿಸಿರುವ ಭದ್ರಪ್ಪ ಲೇಔಟ್, ಕೊಡಿಗೇಹಳ್ಳಿ ಮತ್ತು ಟಾಟಾ ನಗರಗಳಲ್ಲಿ ಅಕ್ರಮವಾಗಿ ಅಪಾರ್ಟ್ಮೆಂಟ್ ಗಳನ್ನು ಕಟ್ಟಿರುವುದರಿಂದ ಮಳೆನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗುತ್ತಿದೆ ಎಂದು ಜಗದೀಶ್ ಹೇಳುತ್ತಾರೆ. ಈ ಪ್ರದೇಶಗಳಲ್ಲಿನ ಭೂ ಮಾಫಿಯಾ ಜೊತೆ ಬಿಬಿಎಂಪಿ ಅಧಿಕಾರಿಗಳು ಕೈಜೋಡಿಸಿರುವರೆಂದು ಖ್ಯಾತ ಲಾಯರ್ ಹೇಳುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?
Published on: Oct 22, 2024 11:38 AM
Latest Videos