AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಸ್ಪರ್ಧಿ ಜಗದೀಶ್​ ವಿರುದ್ಧ ಹಲವು ವಕೀಲರು ತಿರುಗಿ ಬಿದ್ದಿದ್ದಾರೆ. ಜಗದೀಶ್​ ಅವರನ್ನು ವಕೀಲರು ಅಂತ ಕರೆಯಬಾರದು ಎಂದು ಬೆಂಗಳೂರು ವಕೀಲರ ಸಂಘ ತಾಕೀತು ಮಾಡಿದೆ. ಈ ಬಗ್ಗೆ ಬಿಗ್​ ಬಾಸ್​ ಆಯೋಜಕರಾದ ‘ಕಲರ್ಸ್​ ಕನ್ನಡ’ ವಾಹಿನಿಗೆ ಸಂಘದಿಂದ ಪತ್ರ ಬರೆಯಲಾಗಿದ್ದು, ಮುಂದಿನ ಕ್ರಮದ ಬಗ್ಗೆ ಎಚ್ಚರಿಕೆ ನೀಡಿಲಾಗಿದೆ.

ಜಗದೀಶ್ ವಿರುದ್ಧ ಬೆಂಗಳೂರು ವಕೀಲರ ಸಂಘ ಗರಂ; ಕಲರ್ಸ್ ವಾಹಿನಿಗೆ ಬರೆದ ಪತ್ರದಲ್ಲಿ ಏನಿದೆ?
ಜಗದೀಶ್​
ಮದನ್​ ಕುಮಾರ್​
|

Updated on: Oct 06, 2024 | 4:06 PM

Share

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋ ಸ್ಪರ್ಧಿ ಆಗಿರುವ ಜಗದೀಶ್​ ಅವರು ನಿಜಕ್ಕೂ ಲಾಯರ್​ ಹೌದೋ ಅಲ್ಲವೋ ಎಂಬ ಬಗ್ಗೆ ಅನುಮಾನಗಳು ಹುಟ್ಟಿಕೊಂಡಿವೆ. ಅದಕ್ಕೆ ಸಂಬಂಧಿಸಿದಂತೆ ‘ವಕೀಲರ ಸಂಘ, ಬೆಂಗಳೂರು’ ವತಿಯಿಂದ ಕಲರ್ಸ್​ ಕನ್ನಡ ವಾಹಿನಿಗೆ ಒಂದು ಪತ್ರ ಬರೆಯಲಾಗಿದೆ. ಈ ಪತ್ರದಲ್ಲಿ ಕೆಲವು ಮುಖ್ಯ ವಿಚಾರಗಳನ್ನು ಗಮನಕ್ಕೆ ತರಲಾಗಿದೆ. ಕೆ.ಎನ್​. ಜಗದೀಶ್​ ಅವರನ್ನು ಲಾಯರ್​ ಎಂದು ಕರೆಯಬಾರದು ಎಂದು ವಕೀಲರ ಸಂಘವು ತಾಕೀತು ಮಾಡಿದೆ. ಪತ್ರದಲ್ಲಿನ ವಿವರ ಇಲ್ಲಿದೆ..

‘ಬೆಂಗಳೂರು ವಕೀಲರ ಸಂಘವು ಏಷ್ಯಾದಲ್ಲಿಯೇ ಅತಿ ದೊಡ್ಡ ಸಂಘವಾಗಿದ್ದು, ಅದರ ಘನತ ಮತ್ತು ಗೌರವವನ್ನು ಸಮಾಜದಲ್ಲಿ ಕಾಪಾಡಿಕೊಂಡು ಬಂದಿದೆ. ನಮ್ಮ ಸಂಘವು ಸುಮಾರು 25 ಸಾವಿರಕ್ಕೂ ಹೆಚ್ಚು ವಕೀಲ ಸದಸ್ಯರನ್ನು ಹೊಂದಿದೆ. ವಕೀಲರ ಸಮುದಾಯವು ದಿನನಿತ್ಯದ ನ್ಯಾಯಾಲಯ ಕಲಾಪಗಳಲ್ಲಿ ಭಾಗವಹಿಸಿ ಸಮಾಜದಲ್ಲಿ ಅತ್ಯಂತ ಗೌರವಪೂರ್ವಕವಾಗಿ ವೃತ್ತಿಯನ್ನು ನಡೆಸಿಕೊಂಡು ಬರುತ್ತಿದ್ದು, ಸಮಾಜಕ್ಕೆ ಮಾದರಿಯಾಗಿದೆ. ಇಂತಹ ಸಂಸ್ಥೆಗೆ ಯಾವುದೇ ವ್ಯಕ್ತಿಗಳು ಮಸಿ ಬಳಿಯಲು ಪ್ರಯತ್ನಪಟ್ಟರೆ ಅದನ್ನು ಸಹಿಸಲು ಆಗುವುದಿಲ್ಲ’.

‘ತಮ್ಮ ಚಾನಲ್‌ನಲ್ಲಿ ಇತ್ತೀಚಿಗೆ ಪ್ರಸಾರವಾಗುತ್ತಿರುವ ಬಿಗ್​ ಬಾಸ್​ ಕನ್ನಡ ಸೀಸನ್ 11ರಲ್ಲಿ ಭಾಗವಹಿಸಿರುವ ಕೆ.ಎನ್. ಜಗದೀಶ್‌ ಅವರು ವಕೀಲರಲ್ಲದಿದ್ದರೂ ಸಹ ಬಿಗ್ ಬಾಸ್-11ರ ಪ್ರಸಾರ ಕಾರ್ಯಕ್ರಮದಲ್ಲಿ ಅವರನ್ನು ವಕೀಲರು ಮತ್ತು ವಕೀಲ್ ಸಾಹೇಬ್ ಎಂದು ಬಿಂಬಿಸುತ್ತಿರುವುದು ನಮ್ಮ ವಕೀಲರ ಸಂಘದ ಸದಸ್ಯರಿಗೆ ನೋವುಂಟು ಮಾಡಿರುತ್ತದೆ ಮತ್ತು ಅನೇಕ ವಕೀಲರು ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ’.

ಬೆಂಗಳೂರು ವಕೀಲರ ಸಂಘ ಬರೆದ ಪತ್ರ

‘ಕೆ.ಎನ್. ಜಗದೀಶ್‌ ಅವರಿಗೆ ಸುಮಾರು ದಿನಗಳ ಹಿಂದೆ ಕರ್ನಾಟಕ ರಾಜ್ಯದ ವಕೀಲರ ಪರಿಷತ್ತು ಕರ್ನಾಟಕ ರಾಜ್ಯದಲ್ಲಿ ಕಾನೂನು ವೃತ್ತಿ ನಡೆಸದಂತೆ ಆದೇಶ ಹೊರಡಿಸಿರುತ್ತದೆ. ದೆಹಲಿ ಬಾರ್ ಕೌನ್ಸಿಲ್‌ರವರು ಕೆ.ಎನ್‌. ಜಗದೀಶ್‌ ಅವರು ದೆಹಲಿ ಕೌನ್ಸಿಲ್‌ನಲ್ಲಿ ನೋಂದಣಿಯಾಗಿರುವ ದಾಖಲಾತಿಗಳನ್ನು ಪರಿಶೀಲಿಸಿ, ದಾಖಲೆಗಳು ನಕಲಿ ಎಂದು ದೃಢಪಟ್ಟ ನಂತರ ಅವರ ನೋಂದಣಿಯನ್ನು ರದ್ದುಗೊಳಿಸಿ ಎಲ್ಲಾ ಪ್ರಮಾಣ ಪತ್ರಗಳನ್ನು ಹಿಂತಿರುಗಿಸುವಂತೆ ಆದೇಶ ಹೊರಡಿಸಿದೆ’.

ಇದನ್ನೂ ಓದಿ: ‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​

‘ಇಂಥ ಸಂದರ್ಭದಲ್ಲಿ ತಾವು ವಕೀಲರಲ್ಲದ ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸದೆ ತಮ್ಮ ಟಿವಿ ಚಾನಲ್‌ನಲ್ಲಿ ಅವರನ್ನು ವಕೀಲರೆಂದು ಬಿಂಬಿಸುತ್ತಿರುವುದು ನಮ್ಮ ವಕೀಲ ವೃಂದಕ್ಕೆ ಬಹಳ ನೋವುಂಟು ಮಾಡಿರುತ್ತದೆ ಹಾಗೂ ಇದು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟುಮಾಡುತ್ತದೆ. ಆದ ಕಾರಣ ನೀವು ಇನ್ನು ಮುಂದೆ ಕೆ.ಎನ್. ಜಗದೀಶ್ ಅವರನ್ನು ತಮ್ಮ ಚಾನಲ್‌ನಲ್ಲಿ ಪ್ರಸಾರವಾಗುವ ಬಿಗ್‌ಬಾಸ್-11ರ ಕಾರ್ಯಕ್ರಮದಲ್ಲಿ ವಕೀಲರೆಂದು ಬಿಂಬಿಸಬಾರದಾಗಿ ಮನವಿ ಮಾಡುತ್ತೇವೆ ಹಾಗೂ ಈ ವಿಷಯ ಕುರಿತಂತೆ ತಮ್ಮ ವಾಹಿನಿಯಲ್ಲಿ ಬಿಗ್ ಬಾಸ್ ಸೀಸನ್ 11ರಲ್ಲಿ ಭಾಗವಹಿಸಿರುವವರಿಗೂ ಸೂಕ್ತ ರೀತಿಯ ತಿಳುವಳಿಕೆ ನೀಡಬೇಕೆಂದು ಹಾಗೂ ಇದನ್ನು ಸರಿಪಡಿಸದೆ ಇದ್ದ ಪಕ್ಷದಲ್ಲಿ ನೊಂದ ವಕೀಲರ ಪರವಾಗಿ, ಬೆಂಗಳೂರು ವಕೀಲರ ಸಂಘವು ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಲು ಮುಂದಾಗುತ್ತದೆ ಎಂದು ಈ ಮೂಲಕ ತಿಳಿಯಪಡಿಸಿದೆ’ ಎಂದು ಪತ್ರ ಬರೆದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ಉತ್ತರ ಪ್ರದೇಶದ ಕಲ್ಲು ಗಣಿಗಾರಿಕೆ ವೇಳೆ ಭೂಕುಸಿತವಾಗಿ ಓರ್ವ ಸಾವು
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ನಾಯಕತ್ವ ಬದಲಾವಣೆ ಬಗ್ಗೆ ನಂಗೇನೂ ಗೊತ್ತಿಲ್ಲ, ಸಿಎಂ ಹತ್ರನೇ ಕೇಳಿ; ಡಿಕೆಶಿ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ರಾಹುಲ್ ಗಾಂಧಿಗೆ ಧೈರ್ಯ ತುಂಬಿದ್ದೇನೆ; ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
‘ಗತವೈಭವ’ಕ್ಕಾಗಿ ಒಂದು ಕೋಟಿ ಮೌಲ್ಯದ ಆಭರಣ ಧರಿಸಿದ್ದ ಆಶಿಕಾ: ವಿಡಿಯೋ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಸುದೀಪ್​ ಅವರನ್ನೇ ಮ್ಯಾನ್ಯುಪಲೇಷನ್ ಮಾಡಲು ಹೋದ ಜಾನ್ವಿ
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಬೆಳಗಾವಿ: 28 ಕೃಷ್ಣಮೃಗಗಳ ಸಾವು; ತನಿಖೆ ಬಗ್ಗೆ ಸಚಿವ ಈಶ್ವರ್ ಖಂಡ್ರೆ ಮಾತು
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
ಗುಜರಾತ್​​ನಲ್ಲಿ ಮೋದಿ ರೋಡ್ ಶೋ; ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತ
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
Cabinet Reshuffle: ಸಂಪುಟ ಪುನಾರಚನೆಗೆ ಹೈಕಮಾಂಡ್​ ಗ್ರೀನ್ ​ಸಿಗ್ನಲ್
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ನೆತ್ತಿಗೇರಿತು ಕಿಚ್ಚನ ಸಿಟ್ಟು, ರಕ್ಷಿತಾ-ಗಿಲ್ಲಿಗೆ ಕಾದಿದೆ ಹಬ್ಬ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ
ರಾಹುಲ್ ಗಾಂಧಿಯದು ಐರನ್ ಲೆಗ್ ಎಂಬುದು ಮತ್ತೆ ಸಾಬೀತಾಗಿದೆ; ಬಿವೈ ವಿಜಯೇಂದ್ರ