AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bigg Boss Elimination: ಬಿಗ್​ ಬಾಸ್​ ಮನೆಯಿಂದ ಮೊದಲ ವಾರ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ರಿಯಾಲಿಟಿ ಶೋನಲ್ಲಿ ಮೊದಲ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆದಿದೆ. ಯಮುನಾ ಶ್ರೀನಿಧಿ ಅವರು ಒಂದೇ ವಾರದಲ್ಲಿ ಆಟ ಮುಗಿಸಿದ್ದಾರೆ. ಫಸ್ಟ್​ ವೀಕ್​ನಲ್ಲಿಯೇ ಅವರು ಎಲಿಮಿನೇಟ್​ ಆಗುತ್ತಾರೆ ಎಂದು ಅವರ ಅಭಿಮಾನಿಗಳು ಊಹಿಸಿರಲಿಲ್ಲ. ಟ್ರೋಫಿ ಗೆಲ್ಲಬೇಕು ಎಂಬ ಆಸೆ ಇಟ್ಟುಕೊಂಡು ಬಂದಿದ್ದ ಯಮುನಾ ಶ್ರೀನಿಧಿ ಅವರಿಗೆ ನಿರಾಸೆ ಆಗಿದೆ.

Bigg Boss Elimination: ಬಿಗ್​ ಬಾಸ್​ ಮನೆಯಿಂದ ಮೊದಲ ವಾರ ಎಲಿಮಿನೇಟ್ ಆದ ಯಮುನಾ ಶ್ರೀನಿಧಿ
ಯಮುನಾ ಶ್ರೀನಿಧಿ
ಮದನ್​ ಕುಮಾರ್​
|

Updated on: Oct 06, 2024 | 11:15 PM

Share

ನೋಡನೋಡುತ್ತಿದ್ದಂತೆಯೇ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಆಟದಲ್ಲಿ ಒಂದು ವಾರ ಕಳೆದಿದೆ. 7 ದಿನಗಳ ಕಾಲ ವಿವಿಧ ಟಾಸ್ಕ್​ನಲ್ಲಿ ಗುದ್ದಾಡಿ ಎಲಿಮಿನೇಷನ್​ನಿಂದ ಬಚಾವ್​ ಆಗಲು ಎಲ್ಲರೂ ಪ್ರಯತ್ನಿಸಿದ್ದರು. ಜಗದೀಶ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ, ಗೌತಮಿ, ಚೈತ್ರಾ ಕುಂದಾಪುರ, ಶಿಶಿರ್​, ಮಾನಸಾ ಮತ್ತು ಮೋಕ್ಷಿತಾ ಅವರು ಈ ವಾರ ನಾಮಿನೇಟ್​ ಆಗಿದ್ದರು. ಅಂತಿಮವಾಗಿ ಯಮುನಾ ಶ್ರೀನಿಧಿ ಅವರು ಎಲಿಮಿನೇಟ್​ ಆಗಿದ್ದಾರೆ. ಇದರಿಂದ ಅವರಿಗೆ ಶಾಕ್​ ಆಗಿದೆ. ಅವರು ಮೊದಲ ವಾರ ಹೆಚ್ಚು ಆ್ಯಕ್ಟೀವ್​ ಆಗಿದ್ದರೂ ಕೂಡ ಎಲಿಮಿನೇಷನ್​ ಆಗುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ.

ಯಮುನಾ ಶ್ರೀನಿಧಿ ಅವರು ಮೊದಲ ದಿನದಿಂದಲೂ ಆ್ಯಕ್ಟೀವ್​ ಆಗಿದ್ದರು. ಬಿಗ್​ ಬಾಸ್​ ಮನೆಗೆ ಕಾಲಿಟ್ಟ ಕೆಲವೇ ಕ್ಷಣಗಳ ಬಳಿಕ ಅವರು ಗೋಲ್ಡ್​ ಸುರೇಶ್​ ಬಳಿ ವಾದಕ್ಕೆ ಇಳಿದಿದ್ದರು. ಎಲ್ಲದೇ ಜಗದೀಶ್​ ಅವರು ಹಲವು ಬಾರಿ ನಿಯಮಗಳನ್ನು ಮುರಿದಾಗ ನೇರವಾಗಿ ವಿರೋಧಿಸಿದ್ದರು. ಇಷ್ಟೆಲ್ಲ ಆ್ಯಕ್ಟೀವ್​ ಆಗಿದ್ದರೂ ಸಹ ಅವರ ಆಟ ಒಂದೇ ವಾರದಲ್ಲಿ ಅಂತ್ಯವಾಗಿದೆ.

ಯಮುನಾ ಶ್ರೀನಿಧಿ ಅವರು ಬಿಗ್​ ಬಾಸ್​ ಮನೆಯಿಂದ ಹೊರಗೆ ಹೋಗುವಾಗ ಐಶ್ವರ್ಯಾ ಭಾವುಕವಾಗಿ ಕಣ್ಣೀರು ಹಾಕಿದರು. ಬಳಿಕ ವೇದಿಕೆಗೆ ಬಂದ ಯಮುನಾ ಅವರು ಸುದೀಪ್​ ಜತೆ ಎಲಿಮಿನೇಷನ್​ ಬಗ್ಗೆ ಮಾತನಾಡಿದರು. ‘ಇದನ್ನು ನಾನು ನಿರೀಕ್ಷಿಸಿರಲ್ಲ, ಇನ್ನಷ್ಟು ದಿನ ಇರುವಷ್ಟು ಸಾಮರ್ಥ್ಯ ನನ್ನಲ್ಲಿ ಇತ್ತು ಅನಿಸುತ್ತೆ. ಶಿಶಿರ್, ಧರ್ಮ, ತ್ರಿವಿಕ್ರಮ್ ಅವರು ಟಾಪ್​ 3 ಸ್ಪರ್ಧಿಗಳಾಗಿರುತ್ತಾರೆ’ ಎಂದು ಹೇಳಿ ಬಿಗ್ ಬಾಸ್​ ಆಟಕ್ಕೆ ಯಮುನಾ ವಿದಾಯ ಹೇಳಿದರು.

ಇದನ್ನೂ ಓದಿ: ‘ಸುದೀಪ್​ ಮಾತಿಗೆ ಬೆಲೆ ಕೊಡ್ತೀನಿ, ಇನ್ಮೇಲೆ ಬದಲಾಗ್ತೀನಿ’: ಬಿಗ್​ ಬಾಸ್​ನಲ್ಲಿ ಜಗದೀಶ್ ನಿರ್ಧಾರ

ಒಂದೇ ವಾರಕ್ಕೆ ಬಿಗ್​ ಬಾಸ್​ ಆಟ ಅಂತ್ಯಗೊಳಿಸಿದ ಯಮುನಾ ಶ್ರೀನಿಧಿ ಅವರಿಗೆ 1 ಲಕ್ಷ ರೂಪಾಯಿ ಚೆಕ್​ ನೀಡಲಾಯಿತು. ಮೊದಲ ವಾರದ ಎಲಿಮಿನೇಷನ್​ ಬಳಿಕ ‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಶೋನಲ್ಲಿ ಪೈಪೋಟಿ ಹೆಚ್ಚಾಗಿದೆ. ನರಕದಲ್ಲಿ ಇದ್ದ ರಂಜಿತ್​ ಅವರಿಗೆ ಸ್ವರ್ಗಕ್ಕೆ ಎಂಟ್ರಿ ಸಿಕ್ಕಿದೆ. ಇಷ್ಟು ದಿನ ಸ್ವರ್ಗದಲ್ಲಿ ಹಾರಾಡುತ್ತಿದ್ದ ಜಗದೀಶ್ ಅವರನ್ನು ನರಕಕ್ಕೆ ಕಳಿಸಲಾಗಿದೆ. ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್ ಆಗಿ ಹಂಸಾ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?