ಬಿಗ್​ಬಾಸ್ ಕನ್ನಡ: ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?

Bigg Boss Kannada: ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರವಾಗಿದೆ. ಮೊದಲ ವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಬೇಕಿದೆ. ಮೊದಲ ವಾರ ಈ ಇಬ್ಬರಲ್ಲಿ ಒಬ್ಬರು ಎಲಿಮಿನೇಟ್ ಆಗುವುದು ಪಕ್ಕಾ ಎನ್ನಲಾಗುತ್ತಿದೆ.

ಬಿಗ್​ಬಾಸ್ ಕನ್ನಡ: ಮೊದಲ ವಾರ ಎಲಿಮಿನೇಟ್ ಆಗಿದ್ದು ಇವರೇನಾ?
ಬಿಗ್ ಬಾಸ್
Follow us
ಮಂಜುನಾಥ ಸಿ.
|

Updated on: Oct 06, 2024 | 11:48 AM

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾಗಿ ಒಂದು ವಾರ ಆಗಿದೆ. ಸಾಮಾನ್ಯವಾಗಿ ಮೊದಲ ವಾರ ಬಿಗ್​ಬಾಸ್​ನಲ್ಲಿ ಖುಷಿಯ ವಾತಾವರಣ ಇರುತ್ತದೆ, ಪರಸ್ಪರರು ಪರಿಚಯಗೊಳ್ಳುತ್ತಾರೆ ಆದರೆ ಈ ಸೀಸನ್​ ಎಲ್ಲಾ ಉಲ್ಟಾ ಆಗಿದೆ. ಬಿಗ್​ಬಾಸ್ ಪ್ರಾರಂಭವಾದ ಎರಡನೇ ದಿನದಿಂದಲೇ ಮನೆಯಲ್ಲಿ ಜಗಳ, ಕಿತ್ತಾಟ, ಆರೋಪ ಪ್ರತ್ಯಾರೋಪಗಳು ಪ್ರಾರಂಭವಾಗಿದೆ. ಹಾಗೋ ಹೀಗೋ ಜಗಳ, ಮುನಿಸು ದ್ವೇಷದಲ್ಲಿಯೇ ಮೊದಲ ವಾರ ಕಳೆದು ವಾರದ ಪಂಚಾಯಿತಿಗೆ ಬಂದಿದೆ. ಪ್ರತಿ ವಾರ ಬಿಗ್​ಬಾಸ್ ಮನೆಯಿಂದ ಒಬ್ಬರು ಎಲಿಮಿನೇಟ್ ಆಗುವುದು ಕಾಮನ್. ಅಂತೆಯೇ ಈ ವಾರ ಯಾರು ಆಗಲಿದ್ದಾರೆ?

ಈ ಸೀಸನ್​ನ ಮೊದಲ ನಾಮಿನೇಷನ್​ನಲ್ಲಿ ನಟಿ ಗೌತಮಿ, ಶಿಶಿರ್, ಯಮುನಾ ಶ್ರೀನಿಧಿ, ಹಂಸಾ, ಭವ್ಯಾ ಗೌಡ, ಲಾಯರ್ ಜಗದೀಶ್, ಮಾನಸಾ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ ಅವರುಗಳು ನಾಮಿನೇಟ್ ಆಗಿದ್ದರು. ಶನಿವಾರ ನಡೆದ ವಾರದ ಪಂಚಾಯಿತಿಯಲ್ಲಿ ಸುದೀಪ್ ಅವರು ಮೂವರು ಸ್ಪರ್ಧಿಗಳನ್ನು ಎಲಿಮಿನೇಷನ್​ನಿಂದ ಪಾರು ಮಾಡಿದರು. ಮಾನಸಾ, ಗೌತಮಿ ಮತ್ತು ಭವ್ಯಾ ಅವರುಗಳನ್ನು ಸೇಫ್ ಮಾಡಲಾಯ್ತು. ಶಿಶಿರ್, ಯಮುನಾ ಶ್ರೀನಿಧಿ, ಹಂಸಾ, ಲಾಯರ್ ಜಗದೀಶ್, ಚೈತ್ರಾ ಕುಂದಾಪುರ, ಮೋಕ್ಷಿತಾ ಪೈ ಅವರುಗಳು ಉಳಿದುಕೊಂಡಿದ್ದಾರೆ. ಇದರಲ್ಲಿ ಯಾರು ಎಲಿಮಿನೇಟ್ ಆಗಲಿದ್ದಾರೆ?

ಇದನ್ನೂ ಓದಿ:‘ಬಿಗ್​ಬಾಸ್ ಏನು ಅಂಗಡಿಯಲ್ಲಿ ಸಿಗುವ ಒಳ ಉಡುಪಾ ಖರೀದಿ ಮಾಡೋಕೆ’

ನಟಿ ಯಮುನಾ ಶ್ರೀನಿಧಿ ಹಾಗೂ ಚೈತ್ರಾ ಕುಂದಾಪುರ ಇಬ್ಬರಲ್ಲಿ ಒಬ್ಬರು ಮನೆಯಿಂದ ಮೊದಲ ವಾರ ಎಲಿಮಿನೇಟ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಯಮುನಾ ಶ್ರೀನಿಧಿ ಅವರದ್ದೇ ಮೊದಲ ಎಲಿಮಿನೇಷನ್ ಎಂದು ಹೇಳಲಾಗುತ್ತಿದೆ. ಯಮುನಾ ಶ್ರೀನಿಧಿ ಅವರು ಭಾರಿ ಉತ್ಸಾಹದಿಂದ ಬಿಗ್​ಬಾಸ್ ಮನೆ ಪ್ರವೇಶ ಮಾಡಿದ್ದರು. ಮೊದಲ ವಾರ ಸಾಕಷ್ಟು ಉತ್ಸಾಹದಿಂದಲೇ ಇದ್ದರು. ಆದರೆ ಅವರ ವ್ಯಕ್ತಿತ್ವ ಬಿಗ್​ಬಾಸ್ ಮನೆಯ ಕೆಲವರಿಗೆ ಇಷ್ಟವಾಗಲಿಲ್ಲ. ಕೆಲವರೊಟ್ಟಿಗೆ ಅವರು ಜಗಳ ಸಹ ಮಾಡಿಕೊಂಡರು. ಅವರ ಜೋರು ಧನಿ, ಹಾವ ಭಾವ, ವ್ಯಕ್ತಿತ್ವ ಬಹುಷಃ ಜನರಿಗೆ ಇಷ್ಟವಾಗಲಿಲ್ಲವೆಂದು ತೋರುತ್ತದೆ.

ಇನ್ನು ಚೈತ್ರಾ ಕುಂದಾಪುರ ಹೆಸರು ಸಹ ಕೇಳಿ ಬರುತ್ತಿದೆ. ಚೈತ್ರಾ ಕುಂದಾಪುರ ಮೊದಲಲ್ಲಿ ಗಮನ ಸೆಳೆದರಾದರೂ ವಾರದ ಮಧ್ಯ ಭಾಗದಿಂದ ಈಚೆಗೆ ಯಾಕೋ ತುಸು ಮಂಕಾದರು. ಹಾಗಾಗಿ ಅವರಿಗೆ ಪ್ರೇಕ್ಷಕರು ಮತ ಹಾಕಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ನಿನ್ನೆ ಸುದೀಪ್​ ನಡೆಸಿದ ವಾರದ ಪಂಚಾಯಿತಿಯಲ್ಲಿ ಸಹ ಚೈತ್ರಾ ಕುಂದಾಪುರ ಬಹುತೇಕ ಮೌನವಾಗಿಯೇ ಇದ್ದರು. ಚೈತ್ರಾ ಕುಂದಾಪುರ ನಿರೀಕ್ಷಿತ ಮಟ್ಟದಲ್ಲಿ ಮನೆಯ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುತ್ತಿಲ್ಲ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಚೈತ್ರಾ ಎಲಿಮಿನೇಟ್ ಆಗಬಹುದು ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ವಾಣಿವಿಲಾಸ ಸಾಗರ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಸಿಎಂ ಸಿದ್ದರಾಮಯ್ಯ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಕ್ಲಾಸ್​ ನಡೆಯುವಾಗಲೇ 3ನೇ ಮಹಡಿಯಿಂದ ಹಾರಿದ ಕಾಲೇಜು ವಿದ್ಯಾರ್ಥಿ
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ಶ್ರೀರಾಮುಲು ಕಾಂಗ್ರೆಸ್ ಸೇರ್ತಾರಾ? ರಾಜಕೀಯ ಗುಟ್ಟು ಬಿಚ್ಚಿಟ್ಟ ಹಳೇ ಕುಚಿಕು
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ವ್ಯಕ್ತಿತ್ವದಲ್ಲಿ ಉತ್ತಮ ಈ ತ್ರಿವಿಕ್ರಮ: ಗೆಲುವಿನ ಸೂಚನೆ ಕೊಟ್ಟ ಬಿಗ್ ಬಾಸ್
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
ಶ್ರೀರಾಮುಲು ಕಾಂಗ್ರೆಸ್​ಗೆ ಕಳುಹಿಸಲು ಅವರೇ ಪ್ರಯತ್ನಿಸ್ತಿರಬಹುದು: ಡಿಕೆಶಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
9 ವಿಕೆಟ್ ಕಬಳಿಸಿ ದಾಖಲೆ ಬರೆದ ಸಿದ್ಧಾರ್ಥ್ ದೇಸಾಯಿ
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ಮುಡಾ ಹಗರಣದಲ್ಲಿ ಕ್ಲೀನ್​ಚಿಟ್; ಸಿಎಂ ರಿಯಾಕ್ಷನ್ ಇದು
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ರಥೋತ್ಸವದ ವೇಳೆ ವಿಟ್ಲದಲ್ಲಿ ದೇವರ ಮೂರ್ತಿ, ಅರ್ಚಕರಿಗೆ ಬಡಿದ ಡ್ರೋನ್​
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಜಿಂಕೆಯ ವೇಗ, ಹದ್ದಿನ ಕಣ್ಣು... ನಿತೀಶ್ ಕುಮಾರ್ ರೆಡ್ಡಿ ಸೂಪರ್ ಕ್ಯಾಚ್
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು
ಬಿಗ್ ಬಾಸ್ ಮನೆಗೆ ನುಗ್ಗಿದ ಅಭಿಮಾನಿಗಳು; ಭಯಬಿದ್ದ ಸ್ಪರ್ಧಿಗಳು