AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯ ಮೊದಲ ಕ್ಯಾಪ್ಟನ್ ಹಂಸಾಗೆ ಕಿಚ್ಚನ ಕ್ಲಾಸ್

ಬಿಗ್​ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಪಂಚಾಯಿತಿ ಶನಿವಾರ ನಡೆದಿದ್ದು, ಸುದೀಪ್ ಪ್ರತಿಬಾರಿಯಂತೆ ಈ ಬಾರಿಯೂ ಸ್ಪರ್ಧಿಗಳಿಗೆ ತಮ್ಮದೇ ರೀತಿಯಲ್ಲಿ ಎಚ್ಚರಿಕೆಗಳನ್ನು ನೀಡಿದರು. ಈ ಸೀಸನ್​ನ ಮೊದಲ ಕ್ಯಾಪ್ಟನ್ ಹಂಸಾ ತಮ್ಮ ಜವಾಬ್ದಾರಿ ಮರೆತಿದ್ದರಿಂದ ಟೀಕೆಗೆ ಗುರಿಯಾದರು.

ಮನೆಯ ಮೊದಲ ಕ್ಯಾಪ್ಟನ್ ಹಂಸಾಗೆ ಕಿಚ್ಚನ ಕ್ಲಾಸ್
ಮಂಜುನಾಥ ಸಿ.
|

Updated on:Oct 05, 2024 | 11:34 PM

Share

ಬಿಗ್​ಬಾಸ್ ಕನ್ನಡ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿದ್ದಾರೆ ಸ್ವರ್ಗವಾಸಿ ಹಂಸ. ಕ್ಯಾಪ್ಟನ್ ಆಗಲು ಸಾಕಷ್ಟು ರಾಜಕೀಯವನ್ನು ಹಂಸ ಮಾಡಿದ್ದರು. ವಿಶೇಷವಾಗಿ ನರಕವಾಸಿಗಳ ಜೊತೆಗೆ ಒಳ ಒಪ್ಪಂದ ಸಹ ಮಾಡಿಕೊಂಡಿದ್ದರು. ಏನಾದರೂ ಆಗಲಿ ಕ್ಯಾಪ್ಟನ್ ಆಗಲೇ ಬೇಕು ಎಂದು ನಿರ್ಣಯಿಸಿ ಆಟ ಆಡಿದ್ದ ಹಂಸ ಕೊನೆಗೆ ತಮ್ಮ ರಾಜಕೀಯದಿಂದಲೇ ಕ್ಯಾಪ್ಟನ್ ಆದರು. ಒಂದು ವಾರದ ಇಮ್ಯೂನಿಟಿ ಪಡೆವ ಜೊತೆಗೆ ಕ್ಯಾಪ್ಟನ್ ರೂಂ ಸಹ ಪಡೆದುಕೊಂಡರು.

ಆದರೆ ಕ್ಯಾಪ್ಟನ್ ಆದ ಖುಷಿ ಹಂಸಗೆ ಹೆಚ್ಚು ಸಮಯ ಉಳಿಯಲಿಲ್ಲ. ಶನಿವಾರ ನಡೆದ ಈ ಸೀಸನ್​ನ ಮೊದಲ ವಾರದ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್, ಹಂಸಾರ ರಾಜಕೀಯವನ್ನು, ಕ್ಯಾಪ್ಟನ್ ಆದ ಮೇಲೆ ಅವರು ಜವಾಬ್ದಾರಿ ಮರೆತು ವರ್ತಿಸಿದ ರೀತಿಯನ್ನು ಕಟುವಾಗಿ ಟೀಕೆ ಮಾಡಿದರು. ಮಾತ್ರವಲ್ಲದೆ ಅವರು ಮಾಡಿಕೊಂಡಿದ್ದ ಒಳ ಒಪ್ಪಂದವನ್ನು ಇತರೆ ಸ್ಪರ್ಧಿಗಳ ಎದುರು ಬಯಲು ಮಾಡಿದರು.

ಇದನ್ನೂ ಓದಿ:ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ನಮಗೆ ಬೆಂಬಲ ನೀಡಿದರೆ ನೀವು ಹೇಳಿದಂತೆಯೇ ಕೇಳುತ್ತೇನೆ ಎಂದು ನರಕವಾಸಿಗಳಿಗೆ ಮಾತು ಕೊಟ್ಟಿದ್ದರಂತೆ. ಇನ್ನು ಸ್ವರ್ಗವಾಸಿಗಳಲ್ಲಿಯೂ ಕೆಲವರಿಗೆ ಕೆಲವು ಭರವಸೆಗಳನ್ನು ನೀಡಿದ್ದಾರೆ. ಕ್ಯಾಪ್ಟನ್ ಆದ ಬಳಿಕವೂ ಸಹ ನಿಯಮ ಮೀರಿ ನರಕವಾಸಿಗಳಿಗೆ ಕೆಲವು ರಿಯಾಯಿತಿಗಳನ್ನು ಕೊಟ್ಟಿದ್ದನ್ನು ಸುದೀಪ್ ಟೀಕೆ ಮಾಡಿದರು. ನಿಯಮದ ಪ್ರಕಾರ ನರಕವಾಸಿಗಳು ಮೇಕಪ್ ರೂಂನಿಂದ ಹೊರಗೆ ಬರುವಂತಿರಲಿಲ್ಲ ಆದರೆ ಶನಿವಾರದ ಎಪಿಸೋಡ್​ಗೆ ಮೇಕಪ್​ ರೂಂಗೆ ಬಂದು ಮೇಕಪ್ ಮಾಡಿಕೊಂಡಿದ್ದರು ನರಕವಾಸಿಗಳು ಇದರ ಬಗ್ಗೆಯೂ ಸುದೀಪ್ ಆಕ್ಷೇಪ ಎತ್ತಿದರು.

ಬಿಗ್​ಬಾಸ್ ಮನೆಯಲ್ಲಿ ಕ್ಯಾಪ್ಟನ್ ಸ್ಥಾನಕ್ಕೆ ವಿಶೇಷ ಗೌರವ, ಜವಾಬ್ದಾರಿ ಇದೆ ಈ ಬಾರಿಯೂ ಕ್ಯಾಪ್ಟನ್​ಗೆ ಕೆಲ ವಿಶೇಷ ಶಕ್ತಿಗಳು ಸಹ ಇವೆ. ಒಬ್ಬ ನರಕವಾಸಿಯನ್ನು ಸ್ವರ್ಗಕ್ಕೆ ಕರೆದುಕೊಳ್ಳುವ ಶಕ್ತಿ ಇದೆ. ಹೀಗಿರುವಾಗ ನೀವು ಹೀಗೆ ನಿಯಮ ಮೀರಿ ನಡೆದುಕೊಳ್ಳುವುದು ಸೂಕ್ತವಲ್ಲ ಎಂದು ಸುದೀಪ್ ತಮ್ಮದೇ ರೀತಿಯಲ್ಲಿ ವಿನಯದಿಂದಲೇ ಅರ್ಥ ಮಾಡಿಸಿದರು. ಆರಂಭದಲ್ಲಿ ಖುಷಿಯಾಗಿದ್ದ ಹಂಸಾ ಆ ಬಳಿಕ ಸುದೀಪ್​ ಹೇಳಿದ ಮಾತುಗಳನ್ನು ಅರ್ಥ ಮಾಡಿಕೊಂಡು ಇನ್ನು ಮುಂದೆ ಸರಿಯಾಗಿ ಇರುವುದಾಗಿಯೂ, ನಿಯಮಗಳನ್ನು ಸರಿಯಾಗಿ ಫಾಲೋ ಮಾಡುವುದಾಗಿಯೂ ಇತರರನ್ನು ನಿಯಂತ್ರಣದಲ್ಲಿ ಇಡುವುದಾಗಿ ಭರವಸೆ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 pm, Sat, 5 October 24

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್