AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ: ಕಿಚ್ಚನ ಖಡಕ್ ಡೈಲಾಗ್

ಮಂಜುನಾಥ ಸಿ.
|

Updated on:Oct 05, 2024 | 7:02 PM

Share

Bigg Boss Kannada Season 11: ಬಿಗ್​ಬಾಸ್ ಅನ್ನು ಮುಚ್ಚಿಸುವುದಾಗಿ, ಬಿಗ್​ಬಾಸ್ ಅನ್ನು ಎಕ್ಸ್​ಪೋಸ್ ಮಾಡುವುದಾಗಿ, ಬಿಗ್​ಬಾಸ್​ನ ಬಾಗಿಲು ಒಡೆಸುವುದಾಗಿ ಹೇಳಿದ್ದ ವಕೀಲ ಜಗದೀಶ್​ಗೆ ಕಿಚ್ಚ ಸುದೀಪ್ ಸರಿಯಾಗಿಯೇ ಮಾತಿನ ಛಾಟಿ ಬೀಸಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 11 ಪ್ರಾರಂಭವಾದಾಗಿನಿಂದಲೂ ಮನೆಯ ಒಳಗೆ ಜಗಳಗಳೇ ನಡೆಯುತ್ತಿವೆ. ಬಿಗ್​ಬಾಸ್ ಆರಂಭವಾದ ಕೆಲವೇ ದಿನಗಳಲ್ಲಿ ಲಾಯರ್ ಜಗದೀಶ್ ಬಿಗ್​ಬಾಸ್ ಮೇಲೆ ಆವಾಜ್ ಹೊಡೆದರು. ‘ಬಿಗ್​ ಬಾಸ್ ಅನ್ನು ಎಕ್ಸ್​ಪೋಸ್ ಮಾಡ್ತೀನಿ’, ‘ನಮ್ಮನ್ನು ಎದುರು ಹಾಕಿಕೊಂಡು ಕರ್ನಾಟಕದಲ್ಲಿ ಬಿಗ್​ಬಾಸ್ ಹೇಗೆ ನಡೆಸ್ತೀರ ನೋಡ್ತೀನಿ’ ಎಂದೆಲ್ಲ ಆವಾಜ್ ಹೊಡೆದಿದ್ದರು. ಇದು ಭಾರಿ ಸುದ್ದಿಯಾಗಿತ್ತು. ಇಂದು ಈ ಸೀಸನ್​ನ ಮೊದಲ ವಾರದ ಪಂಚಾಯ್ತಿ ನಡೆದಿದ್ದು, ಸುದೀಪ್, ಲಾಯರ್ ಜಗದೀಶ್​ಗೆ ಖಡಕ್​ ಆಗಿ ಪ್ರತ್ಯುತ್ತರ ನೀಡಿದ್ದಾರೆ. ನಿಮ್ಮಪ್ಪನಾಣೆ ಬಿಗ್​ಬಾಸ್ ಅನ್ನು ಹಾಳುಮಾಡಲಾರಿರಿ ಎಂದಿದ್ದಾರೆ ಸುದೀಪ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Oct 05, 2024 07:02 PM

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More