AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭಯದ ವಾತಾವರಣವನ್ನು ಲಾಯರ್ ಜಗದೀಶ್ ಅವರು ಸೃಷ್ಟಿ ಮಾಡಿದ್ದಾರೆ. ಅವರು ಎಲ್ಲರ ವಿರುದ್ಧವೂ ತಿರುಗಿ ಬೀಳುತ್ತಿದ್ದಾರೆ. ಅವರಿಗೆ ಮನೆಯ ಯಾವ ಸದಸ್ಯರನ್ನು ಕಂಡರೂ ಆಗುವುದಿಲ್ಲ. ಅವರ ವಿರುದ್ಧ ಮನೆ ಮಂದಿ ಛೀಮಾರಿ ಹಾಕಿದ್ದಾರೆ.

‘ಬಿಗ್ ಬಾಸ್ ಅನ್ನ ತಿಂದವನಿಗೆ ಆ ಶೋ ಬಗ್ಗೆ ನಿಯತ್ತಿಲ್ಲ’; ಜಗದೀಶ್ ವಿರುದ್ಧ ಛೀಮಾರಿ
ಲಾಯರ್​ ಜಗದೀಶ್​
ರಾಜೇಶ್ ದುಗ್ಗುಮನೆ
|

Updated on: Oct 05, 2024 | 7:37 AM

Share

ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಅವರು ಎಲ್ಲರ ವಿರುದ್ಧ ಹರಿಹಾಯುತ್ತಿದ್ದಾರೆ. ಸ್ಪರ್ಧಿಗಳ ವಿರುದ್ಧ ಅವರಿಗೆ ಕೋಪ ಇದೆ. ಈ ಕೋಪವನ್ನು ಅವರು ನಾನಾ ರೀತಿಯಲ್ಲಿ ಹೊರಹಾಕುತ್ತಿದ್ದಾರೆ. ಇದರ ಜೊತೆಗೆ ಅವರು ಬಿಗ್ ಬಾಸ್ ವಿರುದ್ಧವೂ ಅಪಸ್ವರ ತೆಗೆದಿದ್ದಾರೆ. ಅವರ ವಿರುದ್ಧ ಮನೆ ಮಂದಿ ಛೀಮಾರಿ ಹಾಕಿದ್ದಾರೆ. ಬಿಗ್ ಬಾಸ್​ನ ಅನ್ನ ತಿಂದು ಅದಕ್ಕೆ ಅವರು ಗೌರವ ನೀಡುತ್ತಿಲ್ಲ ಎಂದು ಉಗ್ರಂ ಮಂಜು ಅಭಿಪ್ರಾಯಪಟ್ಟಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ ಜಗದೀಶ್. ನೆಗಟಿವ್ ಆಗಲಿ ಅಥವಾ ಪೊಸಿಟಿವ್ ಆಗಲಿ ತಾವು ಚರ್ಚೆ ಆಗಬೇಕು ಎಂಬುದು ಅವರ ಉದ್ದೇಶ. ಇದಕ್ಕಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸುದೀಪ್ ಅವರು ಈ ವಿಚಾರದಲ್ಲಿ ಕ್ಲಾಸ್ ತೆಗೆದುಕೊಳ್ಳಲಿ ಎಂದು ಎಲ್ಲರೂ ಆಶಿಸುತ್ತಿದ್ದಾರೆ.

ಇದನ್ನೂ ಓದಿ: ಮನೆಯವರಿಂದ ಮೋಸ ಆಗಿದೆ ಎಂದ ಜಗದೀಶ್; ಅವರ ವಿರುದ್ಧವೇ ತೀರ್ಪು ಕೊಟ್ಟ ಬಿಗ್ ಬಾಸ್

ಬಿಗ್ ಬಾಸ್​ನ ಕಿತ್ತೋಗಿರೋ ಆಟ ಎಂದು ಅವರು ಟೀಕೆ ಮಾಡಿದ್ದಾರೆ. ಇಷ್ಟಕ್ಕೆ ನಿಂತಿಲ್ಲ, ‘ಬಿಗ್ ಬಾಸ್​​’ನಲ್ಲಿ ಮಾಫಿಯಾ ಇದೆ ಎಂದಿದ್ದಾರೆ. ‘ನಮ್ಮನ್ನು ಎದುರು ಹಾಕಿಕೊಂಡು ಬಿಗ್ ಬಾಸ್​ನ ಹೇಗೆ ನಡೆಸುತ್ತೀರಿ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್​ನ ಖರೀದಿ ಮಾಡುವ ಮಾತೂ ಜಗದೀಶ್ ಬಾಯಿಂದ ಬಂದಿದೆ. ಇದನ್ನು ನೋಡಿದ ಮನೆ ಮಂದಿ ಕೋಪಗೊಂಡಿದ್ದಾರೆ.

ಇದನ್ನೂ ಓದಿ: ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡ ಲಾಯರ್ ಜಗದೀಶ್

ಉಗ್ರಂ ಮಂಜು ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಜಗದೀಶ್. ಹೆಣ್ಣು ಮಕ್ಕಳ ಒಳ ಉಡುಪಿನ ಬಗ್ಗೆಯೂ ಮಾತನಾಡಿದ್ದಾರೆ. ಇದೆಲ್ಲವನ್ನು ಮಂಜು ಅವರು ಖಂಡಿಸಿದ್ದಾರೆ. ‘ಅವರು ಏನೇನೋ ಮಾತನಾಡುತ್ತಾರೆ. ಅಟೆನ್ಷನ್ ಸೀಕಿಂಗ್ ಅಭ್ಯಾಸ ಅವರಿಗೆ ಇದೆ. ಬಿಗ್ ಬಾಸ್ ಮನೆಯ ಅನ್ನ ತಿಂದು ಈ ಶೋಗೆ ನಿಯತ್ತು ತೋರಿಸಿಲ್ಲ ಎಂದರೆ ಹೇಗೆ’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.