ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡ ಲಾಯರ್ ಜಗದೀಶ್
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ 17 ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಲಾಯರ್ ಜಗದೀಶ್ ಅವರು ಮಿತಿಮೀರಿ ವರ್ತಿಸುತ್ತಿದ್ದಾರೆ. ಬಿಗ್ ಬಾಸ್ಗೆ ಅವಾಜ್ ಹಾಕಿದ್ದಾರೆ. ಬಿಗ್ ಬಾಸ್ ಶೋಗೆ ಅವಮಾನ ಮಾಡಿದ್ದಾರೆ. ಈಗ ಅವರು ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದಾರೆ.
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಎಲ್ಲರಿಗೂ ಠಕ್ಕರ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸುಖಾ ಸುಮ್ಮನೆ ಕಾಲ್ಕೆರೆದುಕೊಂಡು ಹೋಗಿ ಜಗಳ ಮಾಡುತ್ತಿದ್ದಾರೆ. ಇದರಿಂದ ವಿವಾದಗಳು ಆಗುತ್ತಿವೆ. ಈಗ ಅವರು ಮಹಿಳೆಯರ ಒಳಉಡುಪಿನ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದಾರೆ. ಈ ವಿಚಾರದ ಬಗ್ಗೆ ಸಖತ್ ಚರ್ಚೆ ಆಗುತ್ತಿದೆ. ಅವರು ಈ ರೀತಿಯ ಮಾತನ್ನು ಆಡಬಾರದಿತ್ತು ಎಂದು ಮನೆ ಮಂದಿ ಮಾತನಾಡಿಕೊಂಡಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್ಗೆ ಅವಕಾಶ ನೀಡಲಾಗಿತ್ತು. ಇದರಲ್ಲಿ ಸ್ವರ್ಗ ನಿವಾಸಿಗಳು ಮಾತ್ರ ಭಾಗಿ ಆಗಲು ಅವಕಾಶ ಇತ್ತು. 10 ಮಂದಿಯಲ್ಲಿ ಆರು ಜನರು ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಇರಬಹುದು ಎಂದು ಬಿಗ್ ಬಾಸ್ ಆದೇಶ ಕೊಟ್ಟರು. ಇಷ್ಟೇ ಅಲ್ಲ, ಆರು ಮಂದಿಯನ್ನು ಸ್ವರ್ಗ ನಿವಾಸಿಗಳ ಒಮ್ಮತದ ನಿರ್ಧಾರದಿಂದ ಆಯ್ಕೆ ಮಾಡಬೇಕು ಎಂದು ಬಿಗ್ ಬಾಸ್ ಆದೇಶ ನೀಡಿದರು.
ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಎಲ್ಲರೂ ಬಂದರು. ಇದು ಜಗದೀಶ್ ಅವರ ಕೋಪಕ್ಕೆ ಕಾರಣ ಆಯಿತು. ಅವರು ನೇರವಾಗಿ ಸ್ಪರ್ಧಿಗಳ ವಿರುದ್ಧ ಹರಿಹಾಯ್ದರು. ಅದರಲ್ಲೂ ಈ ಐಡಿಯಾ ನೀಡಿದ ಉಗ್ರಂ ಮಂಜು ವಿರುದ್ಧ ಸಿಡಿದೆದ್ದರು. ಮಾತು ಮಿತಿ ಮೀರುತ್ತಿತ್ತು. ‘ನೀನು ಸಿನಿಮಾದಲ್ಲಿ ಮಾತ್ರ ಉಗ್ರಂ. ನಿಜ ಜೀವನದಲ್ಲಿ ನಾನು ನಿನಗೆ ಉಗ್ರಂ ತೋರಿಸುತ್ತೇನೆ’ ಎಂದು ಜಗದೀಶ್ ಹೇಳಲು ಆರಂಭಿಸಿದರು.
ಇದನ್ನೂ ಓದಿ: ‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಮುಲಾಜಿಲ್ಲದೆ ಹೊರಹಾಕಿದ್ದ ಸಲ್ಲು; ಕನ್ನಡದಲ್ಲೂ ಮರುಕಳಿಸಲಿದೆ ಘಟನೆ?
ಇದಕ್ಕೆ ಮಂಜು ಹೆಚ್ಚಿನ ಉತ್ತರ ಕೊಡೋಕೆ ಹೋಗಿಲ್ಲ. ‘ಬ್ರೋ..’ ‘ಬ್ರೋ..’ ಎಂದಷ್ಟೇ ಹೇಳಿದರು. ‘ಬ್ರೋ ಪ್ಯಾಂಟೀಸ್ ಎಲ್ಲ ನೋಡಿದೀನಿ. ನನ್ನ ಹೆಂಡತಿ ಹಾಕೋದು ಇದನ್ನೇ’ ಎಂದರು ಜಗದೀಶ್. ಇದು ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ. ‘ನಿಜವಗಾಲೂ ಇನ್ಸೆಕ್ಯೂರ್ ಫೀಲ್ ಆಗ್ತಿದೆ. ಹುಡುಗಿಯರ ವೈಯಕ್ತಿಕ ವಿಚಾರಕ್ಕೆ ಬರುತ್ತಿದ್ದಾರೆ. ನೀವು ಏನಾದರೂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ’ ಎಂದರು ಭವ್ಯಾ ಗೌಡ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:50 am, Sat, 5 October 24