‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಮುಲಾಜಿಲ್ಲದೆ ಹೊರಹಾಕಿದ್ದ ಸಲ್ಲು; ಕನ್ನಡದಲ್ಲೂ ಮರುಕಳಿಸಲಿದೆ ಘಟನೆ?
‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿರೋ ಜಗದೀಶ್ ಅವರು ಸಾಕಷ್ಟು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಬಿಗ್ ಬಾಸ್ನೇ ಎಕ್ಸ್ಪೋಸ್ ಮಾಡ್ತೀನಿ ಎಂದಿದ್ದ ಅವರು, ಈಗ ಬಿಗ್ ಬಾಸ್ನೇ ಖರೀದಿ ಮಾಡೋ ಮಾತನಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭರ್ಜರಿ ಚರ್ಚೆಗಳು ನಡೆಯುತ್ತಿವೆ.
ಬಿಗ್ ಬಾಸ್ನಲ್ಲಿ ಯಾವುದಾದರೂ ಸ್ಪರ್ಧಿ ಮೇಲೆ ಸಲ್ಮಾನ್ ಖಾನ್ ಕೋಪಗೊಂಡರೆ ಅವರ ಕಥೆ ಮುಗಿದಂತೆ. ಆ ಸ್ಪರ್ಧಿಯನ್ನು ತಕ್ಷಣಕ್ಕೆ ಮನೆಯಿಂದ ಹೊರಹಾಕಲೂ ಅವರು ಹಿಂಜರಿಯುವುದಿಲ್ಲ. ‘ಬಿಗ್ ಬಾಸ್’ಗೆ ಅವಮಾನ ಮಾಡಿದ್ದ ಸ್ಪರ್ಧಿಯನ್ನು ಸಲ್ಮಾನ್ ಖಾನ್ ಹೊರಹಾಕಿದ್ದರು. ಈಗ ಕನ್ನಡದಲ್ಲೂ ಅದೇ ರೀತಿಯ ಘಟನೆ ಮರುಕಳಿಸಲಿದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡಿದೆ. ವೀಕೆಂಡ್ ಎಪಿಸೋಡ್ಗಾಗಿ ಫ್ಯಾನ್ಸ್ ಕಾದಿದ್ದಾರೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ಕ್ಕೆ 17 ಸ್ಪರ್ಧಿಗಳು ಬಂದಿದ್ದಾರೆ. ಆ ಪೈಕಿ ಲಾಯರ್ ಜಗದೀಶ್ ಅವರು ಮಿತಿಮೀರಿ ವರ್ತಿಸುತ್ತಿದ್ದಾರೆ. ಬಿಗ್ ಬಾಸ್ಗೆ ಅವಾಜ್ ಹಾಕಿದ್ದಾರೆ. ಬಿಗ್ ಬಾಸ್ ಶೋಗೆ ಅವಮಾನ ಮಾಡಿದ್ದಾರೆ. ಇದನ್ನು ಸುದೀಪ್ ಅವರು ಖಂಡಿಸುತ್ತಾರಾ ಎನ್ನುವ ಕುತೂಹಲ ಮೂಡಿದೆ. ಹಿಂದಿ ಬಿಗ್ ಬಾಸ್ ರೀತಿಯೇ ಇಲ್ಲಿಯೂ ಮಾಡಲಿ ಎಂದು ಕೋರಿಕೊಳ್ಳಲಾಗುತ್ತಿದೆ.
ಹಿಂದಿ ಬಿಗ್ ಬಾಸ್ನ 10ನೇ ಸೀಸನ್ನಲ್ಲಿ ಪ್ರಿಯಾಂಕಾ ಜಗ್ಗಾ ಎಂಬುವವರು ದರ್ಪ ತೋರಿದ್ದರು. ‘ಬಿಗ್ ಬಾಸ್ ಶೋ ನನ್ನ ಲೆವೆಲ್ಗೆ ಅಲ್ಲವೇ ಅಲ್ಲ’ ಎಂದಿದ್ದರು. ವೀಕೆಂಡ್ನಲ್ಲಿ ಸಲ್ಮಾನ್ ಖಾನ್ ಅವರು ನೇರವಾಗಿ ಹೊರಹೋಗುವಂತೆ ಹೇಳಿದ್ದರು. ಜೊತೆಗೆ ಕಲರ್ಸ್ ವಾಹಿನಿಯ ಜೊತೆ ಅವರು ಕೆಲಸ ಮಾಡಿದರೆ ನಾನು ಕಲರ್ಸ್ ಜೊತೆಗಿನ ಸಂಬಂಧ ಕಡಿದುಕೊಳ್ಳುತ್ತೇನೆ ಎಂದು ಹೇಳಿದ್ದರು ಸಲ್ಲು. ತಕ್ಷಣವೇ ಪ್ರಿಯಾಂಕಾನ ಹೊರಹಾಕಲಾಯಿತು.
ಇದನ್ನೂ ಓದಿ: ‘ನಂಗೆ ಬಿಗ್ ಬಾಸ್ನೇ ಖರೀದಿಸೋ ತಾಕತ್ತಿದೆ, ಆಗ ಕಪ್ ನಂದೇ’; ಬಡಾಯಿ ಕೊಚ್ಚಿಕೊಂಡ ಜಗದೀಶ್
ಕನ್ನಡದಲ್ಲೂ ಬಿಗ್ ಬಾಸ್ಗೆ ಅವಮಾನ ಮಾಡುವ ರೀತಿಯ ಘಟನೆ ನಡೆದಿದೆ. ಜಗದೀಶ್ ಅವರು ‘ಬಿಗ್ ಬಾಸ್ ಕಿತ್ತೋಗಿರೋ ಪ್ರೋಗ್ರಾಂ’, ‘ಬಿಗ್ ಬಾಸ್ನೇ ಖರೀದಿ ಮಾಡುತ್ತೇನೆ’, ‘ನನ್ನ ಎದುರಾಕ್ಕೊಂಡು ಬಿಗ್ ಬಾಸ್ ನಡೆಸ್ತೀರಾ’ ಎಂದೆಲ್ಲ ಪ್ರಶ್ನೆ ಮಾಡಿದ್ದರು. ಮನೆಯಲ್ಲಿದ್ದುಕೊಂಡೇ ಸ್ಪರ್ಧಿ ಹೇಳುವ ಮಾತು ಇದಲ್ಲ. ಹೀಗಾಗಿ, ಜಗದೀಶ್ ಅವರನ್ನು ಸುದೀಪ್ ನೇರವಾಗಿ ಹೊರಕ್ಕೆ ಹಾಕಲಿ ಎಂದು ಅನೇಕರು ಬಯಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:54 am, Fri, 4 October 24