ಹಿಂದಿ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಸಂಬಂಧಿ

Mahesh Babu: ಟಾಲಿವುಡ್ ಸ್ಟಾರ್ ನಟ ಮಹೇಶ್ ಬಾಬು, ಸಿನಿಮಾಗಳ ಹೊರತಾಗಿ ಯಾವುದೇ ಟಿವಿ ಸಂದರ್ಶನ, ರಿಯಾಲಿಟಿ ಶೋ ಇನ್ನಿತರೆಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆದರೆ ಅವರ ಹತ್ತಿರದ ಸಂಬಂಧಿಯೊಬ್ಬರು ಇದೀಗ ಬಿಗ್​ಬಾಸ್​ಗೆ ಎಂಟ್ರಿ ಕೊಟ್ಟಿದ್ದಾರೆ.

ಹಿಂದಿ ಬಿಗ್ ಬಾಸ್​ಗೆ ಎಂಟ್ರಿ ಕೊಟ್ಟ ಮಹೇಶ್ ಬಾಬು ಸಂಬಂಧಿ
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Oct 04, 2024 | 6:59 PM

‘ಬಿಗ್ ಬಾಸ್’ ಕನ್ನಡ, ತೆಲುಗಿನಲ್ಲಿ ಆರಂಭ ಆಗಿದೆ. ಕನ್ನಡದಲ್ಲಿ ಈಗಾಗಲೇ ಬಿಗ್ ಬಾಸ್ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿದೆ. ಅದೇ ರೀತಿ ಹಿಂದಿಯಲ್ಲೂ ಬಿಗ್ ಬಾಸ್ ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಅಕ್ಟೋಬರ್ 6ರಂದು ‘ಬಿಗ್ ಬಾಸ್ ಹಿಂದಿ ಸೀಸನ್ 16’ಕ್ಕೆ ಗ್ರ್ಯಾಂಡ್ ಎಂಟ್ರಿ ಸಿಗಲಿದೆ. ಈ ಸೀಸನ್ಗೆ ಮಹೇಶ್ ಬಾಬು ಅವರ ಸಂಬಂಧಿ ಒಬ್ಬರು ಬರುತ್ತಿದ್ದಾರೆ. ಯಾರವರು? ಅವರ ಹಿನ್ನೆಲೆ ಏನು? ಮುಂದೆ ಓದಿ.

ಶಿಲ್ಪಾ ಶಿರೋಡ್ಕರ್ ಅವರು ‘ಬಿಗ್ ಬಾಸ್’ಗೆ ಬರುತ್ತಿದ್ದಾರೆ. ಇವರು ಬೇರೆ ಯಾರೂ ಅಲ್ಲ ಮಹೇಶ್ ಬಾಬು ಅವರ ಪತ್ನಿ ನಮ್ರತಾ ಶಿರೋಡ್ಕರ್ ಅವರ ಸೋದರಿ. ಮಹೇಶ್ ಬಾಬುಗೆ ಇವರು ಅತ್ತಿಗೆ ಆಗಬೇಕು. ಶಿಲ್ಪಾ ಹಿಂದಿ ಚಿತ್ರರಂಗದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದರು. ಶಾರುಖ್ ಖಾನ್, ಗೋವಿಂದ, ಅಮಿತಾಭ್ ಬಚ್ಚನ್ ಜೊತೆ ತೆರೆಹಂಚಿಕೊಂಡಿದ್ದಾರೆ.

‘ನಾನು 90ರ ದಶಕದ ಸೆನ್ಸೇಷನಲ್ ಕ್ವೀನ್. ನಾನು ಅಮಿತಾಭ್ ಬಚ್ಚನ್, ಮಿಥುನ್ ಚಕ್ರವರ್ತಿ, ಗೋವಿಂದ, ಅಕ್ಷಯ್ ಕುಮಾರ್, ಶಾರುಖ್ ಖಾನ್ ಜೊತೆ ಕೆಲಸ ಮಾಡಿದ್ದೇನೆ. ನನಗೆ ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಬೇಕು ಎಂದಿತ್ತು. ಅದು ಈಗ ನಿಜವಾಗುತ್ತಿದೆ’ ಎಂದಿದ್ದಾರೆ ಅವರು. ‘ಬಿಗ್ ಬಾಸ್’ನ ಸಲ್ಮಾನ್ ಖಾನ್ ನಡೆಸಿಕೊಡುತ್ತಿದ್ದಾರೆ. ಹೀಗಾಗಿ, ಅವರ ಜೊತೆ ವೇದಿಕೆ ಹಂಚಿಕೊಳ್ಳುವ ಅವಕಾಶ ಶಿಲ್ಪಾಗೆ ಸಿಗುತ್ತಿದೆ.

ಇದನ್ನೂ ಓದಿ:ಬಿಗ್​ಬಾಸ್​ ಮನೆಯಲ್ಲಿ ‘ಮುಂಗಾರು ಮಳೆ’ ಧನರಾಜ್​ ಡೈಲಾಗ್​ಗೆ ಚಪ್ಪಾಳೆ

ಬಿಗ್ ಬಾಸ್ ಕಡೆಯಿಂದಲೇ ಶಿಲ್ಪಾ ಎಂಟ್ರಿ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿದೆ. ಹಿಂದಿ ಕಲರ್ಸ್ನಲ್ಲಿ ಬಿಗ್ ಬಾಸ್ ಪ್ರಸಾರ ಕಾಣುತ್ತಿದೆ. ಸಖತ್ ಅದ್ದೂರಿಯಾಗಿ ಬಿಗ್ ಬಾಸ್ ಆಯೋಜನೆ ಗೊಳಿಸಲು ಸಿದ್ಧತೆ ನಡೆದಿದೆ.

ಶಿಲ್ಪಾ ಹಾಗೂ ನಮ್ರತಾ ಸಹೋದರಿಯರು. ಈ ಕಾರಣಕ್ಕೆ ದಕ್ಷಿಣದಲ್ಲಿ ಅವರಿಗೆ ಫ್ಯಾನ್ಸ್ ಹೆಚ್ಚೋ ನಿರೀಕ್ಷೆ ಇದೆ. ಒಂದೊಮ್ಮೆ ಈ ಬಗ್ಗೆ ಮಹೇಶ್ ಬಾಬು ಅಥವಾ ನಮ್ರತಾ ಟ್ವೀಟ್ ಮಾಡಿದರೆ ಶಿಲ್ಪಾಗೆ ಬೀಳೋ ವೋಟ್ ಸಂಖ್ಯೆ ಹೆಚ್ಚಲಿದೆ. ನಮ್ರತಾ ಶಿರೋಡ್ಕರ್ ಕೂಡ ಚಿತ್ರರಂದಲ್ಲಿ ಆ್ಯಕ್ಟೀವ್ ಆಗಿದ್ದರು. ಅವರು ನಂತರ ಬಣ್ಣದ ಲೋಕ ತೊರೆದರು. ಈಗ ಕುಟುಂಬದ ಆರೈಕೆಯಲ್ಲಿ ಅವರು ಬ್ಯುಸಿ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ