ಯಾರಾಗ್ತಾರೆ ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್​? ನರಕದವರಿಗೆ ಮತ್ತೆ ನಿರಾಸೆ

ನರಕವಾಸಿಗಳಿಗೆ ನರಕ ದರ್ಶನ ಮುಂದುವರಿಯಲಿದೆ. ಯಾಕೆಂದರೆ ಅವರಿಗೆ ಕ್ಯಾಪ್ಟನ್​ ಆಗುವ ಅವಕಾಶವೇ ಸಿಕ್ಕಿಲ್ಲ. ಕೇವಲ ಸ್ವರ್ಗದಲ್ಲಿ ಇರುವವರಿಗೆ ಮಾತ್ರ ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಭಾಗವಹಿಸುವ ಅವಕಾಶ ನೀಡಲಾಗಿದೆ. ಹಂಸಾ, ಭವ್ಯ, ತ್ರಿವಿಕ್ರಮ್, ಉಗ್ರಂ ಮಂಜು, ಐಶ್ವರ್ಯಾ, ಯಮುನಾ ಶ್ರೀನಿಧಿ ಅವರು ಕ್ಯಾಪ್ಟನ್​ ಆಗಲು ಪೈಪೋಟಿ ನಡೆಸಲಿದ್ದಾರೆ.

ಯಾರಾಗ್ತಾರೆ ಬಿಗ್​ ಬಾಸ್​ ಮನೆಯ ಮೊದಲ ಕ್ಯಾಪ್ಟನ್​? ನರಕದವರಿಗೆ ಮತ್ತೆ ನಿರಾಸೆ
ಬಿಗ್​ ಬಾಸ್​ ಕನ್ನಡ ಸೀಸನ್​ 11
Follow us
ಮದನ್​ ಕುಮಾರ್​
|

Updated on: Oct 04, 2024 | 10:53 PM

ಬಿಗ್​ ಬಾಸ್​ ಮನೆಯಲ್ಲಿ ಒಂದು ವಾರ ಕಳೆಯುತ್ತಿದೆ. ಎರಡನೇ ವಾರಕ್ಕೆ ಕ್ಯಾಪ್ಟನ್​ ಆಯ್ಕೆ ಆಗಬೇಕಿದೆ. ಈ ಸೀಸನ್​ನ ಮೊದಲ ಕ್ಯಾಪ್ಟನ್​ ಯಾರು ಆಗುತ್ತಾರೆ ಎಂಬ ಕೌತುಕ ಮೂಡಿದೆ. ಕ್ಯಾಪ್ಟನ್​ ಆಗುವವರಿಗೆ ಒಂದು ವಾರದ ಇಮ್ಯುನಿಟಿ ಸಿಗುತ್ತದೆ. ಅಲ್ಲದೇ ಕೆಲವು ವಿಶೇಷ ಅಧಿಕಾರಗಳು ಸಿಗುತ್ತವೆ. ಹಾಗಾಗಿ ಕ್ಯಾಪ್ಟನ್​ ಆಗಲು ಎಲ್ಲರೂ ಸಖತ್ ಪೈಪೋಟಿ ನೀಡುತ್ತಾರೆ. ಕ್ಯಾಪ್ಟನ್​ ಆಗುವ ಅವಕಾಶ ಎಲ್ಲರಿಗೂ ಸಿಗುತ್ತಿಲ್ಲ. ನರಕವಾಸಿಗಳು ಈ ಟಾಸ್ಕ್​ನಲ್ಲಿ ಭಾಗವಹಿಸುವಂತಿಲ್ಲ ಎಂದು ಬಿಗ್​ ಬಾಸ್​ ಕಡೆಯಿಂದ ಆದೇಶ ಬಂದಿದೆ. ಹಾಗಾಗಿ ನರಕದ ಮಂದಿಗೆ ನಿರಾಸೆ ಆಗಿದೆ.

ಕೇವಲ ಸ್ವರ್ಗದಲ್ಲಿ ಇರುವವರು ಮಾತ್ರ ಕ್ಯಾಪ್ಟನ್​ ಆಗುವ ಅರ್ಹತೆ ಪಡೆದಿದ್ದಾರೆ. ಸ್ವರ್ಗದಲ್ಲಿ 10 ಜನ ಇದ್ದಾರೆ. ಅವರಲ್ಲಿ 6 ಜನರು ಕ್ಯಾಪ್ಟೆನ್ಸಿ ಟಾಸ್ಕ್​ ಆಡಲು ಆಯ್ಕೆ ಆಗಿದ್ದಾರೆ. ಭವ್ಯ, ಹಂಸಾ, ತ್ರಿವಿಕ್ರಮ್, ಉಗ್ರಂ ಮಂಜು, ಯಮುನಾ ಶ್ರೀನಿಧಿ, ಐಶ್ವರ್ಯಾ ಅವರು ಕ್ಯಾಪ್ಟೆನ್ಸಿ ಟಾಸ್ಕ್​ನಲ್ಲಿ ಭಾಗಿ ಆಗಲಿದ್ದಾರೆ. ಆದರೆ ಈ 6 ಜನರನ್ನು ಆಯ್ಕೆ ಮಾಡಿದ್ದು ಜಗದೀಶ್ ಅವರಿಗೆ ಸರಿ ಎನಿಸಿಲ್ಲ.

‘ಆಯ್ಕೆನಲ್ಲಿ ಮೋಸ ಆಗಿದೆ. ಇವರೆಲ್ಲ ಸಿಂಡಿಕೇಟ್​ ಮಾಡಿಕೊಂಡು ಶೋ ನಡೆಸುತ್ತಿದ್ದಾರೆ. ಇದು ಅನ್ಯಾಯ ಅಂತ ನನಗೆ ಅನಿಸುತ್ತಿದೆ. ಈ ಆರು ಜನರು ನೆಟ್ಟಗೆ ಮಾತು ಕೂಡ ಆಡುವುದಿಲ್ಲ. ನನ್ನ ಅನಿಸಿಕೆ ನಾನು ಹೇಳಿದ್ದೇನೆ. ಅದನ್ನು ಪರಿಗಣಿಸುವುದು ಬಿಡುವುದು ಬಿಗ್​ ಬಾಸ್​ಗೆ ಬಿಟ್ಟಿದ್ದು’ ಎಂದು ಜಗದೀಶ್​ ಹೇಳಿದ್ದಾರೆ. ಅವರ ವಾದವನ್ನು ಬಿಗ್​ ಬಾಸ್​ ಒಪ್ಪಿಕೊಂಡಿಲ್ಲ. ಹಾಗಾಗಿ ತಾವು ಈ ಶೋನಿಂದಲೇ ಹೊರಗೆ ಹೋಗುವುದಾಗಿ ಜಗದೀಶ್ ಹೇಳಿದ್ದಾರೆ. ಆದರೆ ದುಡುಕುವುದು ಬೇಡ ಎಂದು ಜಗದೀಶ್​ಗೆ ಬಿಗ್​ ಬಾಸ್​ ಬುದ್ಧಿ ಹೇಳಿದ್ದಾರೆ.

ಇದನ್ನೂ ಓದಿ: ಐಶ್ವರ್ಯಾ, ಧರ್ಮ, ಅನುಷಾ: ಬಿಗ್​ ಬಾಸ್​ ಮನೆಯಲ್ಲಿ ಶುರುವಾಯ್ತಾ ತ್ರಿಕೋನ ಪ್ರೇಮ?

ಗೋಲ್ಡ್​ ಸುರೇಶ್​, ಮೋಕ್ಷಿತಾ ಪೈ, ಶಿಶಿರ್, ರಂಜಿತ್, ಚೈತ್ರಾ ಕುಂದಾಪುರ, ಅನುಷಾ ರೈ, ಮಾನಸಾ ಅವರು ನರಕದಲ್ಲಿ ಇದ್ದಾರೆ. ಇನ್ನುಳಿದ ಸ್ಪರ್ಧಿಗಳಿಗೆ ಸ್ವರ್ಗದಲ್ಲಿ ಸ್ಥಾನ ಸಿಕ್ಕಿದೆ. ಮೊದಲ ಕ್ಯಾಪ್ಟನ್ ಆಗುವವರು ಸ್ವರ್ಗ ಮತ್ತು ನರಕ ನಿವಾಸಿಗಳನ್ನು ಅದಲು ಬದಲು ಮಾಡುವ ಅಧಿಕಾರ ಪಡೆಯಲಿದ್ದಾರೆ. ಹಾಗಾಗಿ ಈ ಬಾರಿ ಕ್ಯಾಪ್ಟನ್​ ಯಾರಾಗುತ್ತಾರೆ ಎಂಬುದು ಬಹಳ ಮುಖ್ಯವಾಗಲಿದೆ. ಮೊದಲ ವಾರದ ಪಂಚಾಯಿತಿಯಲ್ಲಿ ಹಲವು ವಿಚಾರಗಳು ಚರ್ಚೆಗೆ ಬರಲಿವೆ. ಲಾಯರ್​ ಜಗದೀಶ್ ತೋರಿದ ಅತಿರೇಖಗಳ ಬಗ್ಗೆಯೂ ಚರ್ಚೆ ನಡೆಯಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.