ಮನೆಯವರಿಂದ ಮೋಸ ಆಗಿದೆ ಎಂದ ಜಗದೀಶ್; ಅವರ ವಿರುದ್ಧವೇ ತೀರ್ಪು ಕೊಟ್ಟ ಬಿಗ್ ಬಾಸ್
ಲಾಯರ್ ಜಗದೀಶ್ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ. ಅವರು ಎಲ್ಲರಿಗೂ ಠಕ್ಕರ್ ಕೊಡುವ ಕೆಲಸ ಮಾಡುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಸುಖಾ ಸುಮ್ಮನೆ ಕಾಲ್ಕೆರೆದುಕೊಂಡು ಹೋಗಿ ಜಗಳ ಮಾಡುತ್ತಿದ್ದಾರೆ. ಅವರ ವಿರುದ್ಧವೇ ಬಿಗ್ ಬಾಸ್ ಆದೇಶ ನೀಡಿದೆ. ಇದರಿಂದ ಅವರಿಗೆ ನಿರಾಸೆ ಆಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಭಯದ ವಾತಾವರಣವನ್ನು ಲಾಯರ್ ಜಗದೀಶ್ ಅವರು ಸೃಷ್ಟಿ ಮಾಡಿದ್ದಾರೆ. ಅವರು ಎಲ್ಲರ ವಿರುದ್ಧವೂ ತಿರುಗಿ ಬೀಳುತ್ತಿದ್ದಾರೆ. ಅವರಿಗೆ ಮನೆಯ ಯಾವ ಸದಸ್ಯರನ್ನು ಕಂಡರೂ ಆಗುವುದಿಲ್ಲ. ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಮನೆಯಲ್ಲಿ ಮೋಸ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಬಿಗ್ ಬಾಸ್ ತೀರ್ಪು ಕೊಟ್ಟರು. ಇದರಿಂದ ಸಿಟ್ಟಾದ ಜಗದೀಶ್ ಅವರು ಮನೆಯಿಂದ ಹೊರ ಹೋಗೋ ನಿರ್ಧಾರ ತೆಗೆದುಕೊಂಡಿದ್ದಾರೆ. ಆ ಬಳಿಕ ಜಗದೀಶ್ ಅವರನ್ನು ಸಮಾಧಾನ ಮಾಡುವ ಕೆಲಸ ಮಾಡಿದರು.
ಬಿಗ್ ಬಾಸ್ನಲ್ಲಿ ಕ್ಯಾಪ್ಟನ್ಸಿ ಆಯ್ಕೆಗೆ ಸ್ವರ್ಗ ನಿವಾಸಿಗಳನ್ನು ಆಯ್ಕೆ ಮಾಡಿದರು. 10 ಮಂದಿ ಸ್ವರ್ಗ ನಿವಾಸಿಗಳ ಪೈಕಿ ಆರು ಮಂದಿಯನ್ನು ಕ್ಯಾಪ್ಟನ್ಸಿಗೆ ಆಯ್ಕೆ ಮಾಡಲು ಅವಕಾಶ ಇತ್ತು. ಇದು ಸ್ಪರ್ಧಿಗಳ ಆಯ್ಕೆ ಎಂದು ಬಿಗ್ ಬಾಸ್ ಹೇಳಿದರು. ಆಗ ಜಗದೀಶ್ ಅವರು ನಾಮಿನೇಟ್ ಆದವರನ್ನು ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಮಾಡೋಣ ಎಂದು ಅಭಿಪ್ರಾಯ ಹೊರಹಾಕಿದರು. ಇದಕ್ಕೆ ಮನೆ ಮಂದಿ ಒಪ್ಪಿಲ್ಲ.
ವೋಟಿಂಗ್ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡೋಣ ಎನ್ನುವ ನಿರ್ಧಾರಕ್ಕೆ ಉಳಿದವರು ಬಂದರು. ಆದರೆ, ಇದನ್ನು ಜಗದೀಶ್ ವಿರೋಧ ಮಾಡಿದರು. ನನ್ನ ವಿರುದ್ಧವೇ ಎಲ್ಲರೂ ವೋಟ್ ಹಾಕುತ್ತಾರೆ ಎನ್ನುವ ಅಭಿಪ್ರಾಯವನ್ನು ಅವರು ಹೊರಹಾಕಿದರು. ಜೊತೆಗೆ ಇದು ನಿಯಮಗಳಿಗೆ ವಿರುದ್ಧವಾಗಿದೆ, ಇದು ಮೋಸ ಎಂದೆಲ್ಲ ಕೂಗಿದರು.
ಇದನ್ನೂ ಓದಿ: ಮಹಿಳೆಯರ ಒಳ ಉಡುಪಿನ ಬಗ್ಗೆ ಮಾತನಾಡಿ ವಿವಾದ ಮಾಡಿಕೊಂಡ ಲಾಯರ್ ಜಗದೀಶ್
ಆದರೆ, ಬಿಗ್ ಬಾಸ್ ಇದನ್ನು ಒಪ್ಪಿಲ್ಲ. ‘ಸ್ಪರ್ಧಿಗಳು ಒಮ್ಮತದಿಂದ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದುವೇ ಅಂತಿಮ’ ಎಂದರು. ಇದರಿಂದ ಜಗದೀಶ್ ಅವರಿಗೆ ಕೋಪ-ನಿರಾಸೆ ಎಲ್ಲವೂ ಒಟ್ಟೊಟ್ಟಿಗೆ ಬಂತು. ಅವರು ಬಿಗ್ ಬಾಸ್ ತೊರೆಯುವ ಘೋಷಣೆ ಮಾಡಿದರು. ಆ ಬಳಿಕ ಬಿಗ್ ಬಾಸ್ ಅವರೇ ಮಧ್ಯಸ್ಥಿಕೆ ವಹಿಸಿ ಜಗದೀಶ್ ಅವರನ್ನು ಸಮಾಧಾನ ಮಾಡಿದರು. ಹಂಸ ಅವರು ಈ ವಾರದ ಕ್ಯಾಪ್ಟನ್ ಆಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.