‘ಮಾರ್ಟಿನ್’ ವಿವಾದ; ನಿರ್ದೇಶಕ ಎಪಿ ಅರ್ಜುನ್​ಗೆ ಗೆಲುವು

ಎ.ಪಿ.ಅರ್ಜುನ್‌ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ‘ಸಿನಿಮಾ ಬಿಡುಗಡೆಗೂ ಮುನ್ನ ಸಂಭಾವನೆ ಪಾವತಿ ಮಾಡಬೇಕು, ಪೋಸ್ಟರ್ ಹಾಗೂ ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಉಲ್ಲೇಖಿಸುವಂತೆ ನಿರ್ಮಾಪಕರಿಗೆ ಸೂಚಿಸಿ’ ಎಂದು ಅರ್ಜುನ್ ಪರ ವಕೀಲರು ಕೋರಿದ್ದರು.

‘ಮಾರ್ಟಿನ್’ ವಿವಾದ; ನಿರ್ದೇಶಕ ಎಪಿ ಅರ್ಜುನ್​ಗೆ ಗೆಲುವು
ಧ್ರುವ-ಅರ್ಜುನ್
Follow us
ರಾಜೇಶ್ ದುಗ್ಗುಮನೆ
|

Updated on: Oct 05, 2024 | 12:24 PM

ನಿರ್ದೇಶಕ ಎಪಿ ಅರ್ಜುನ್ ಹಾಗೂ ‘ಮಾರ್ಟಿನ್’ ಸಿನಿಮಾ ನಿರ್ಮಾಪಕ ಉದಯ್ ಮೆಹ್ತಾ ಮಧ್ಯೆ ಮನಸ್ತಾಪ ಇದೆ ಎಂಬ ವಿಚಾರ ಆಗಾಗ ಚರ್ಚೆಗೆ ಬರುತ್ತಲೇ ಇದೆ. ಆದರೆ, ಇದನ್ನು ತಂಡ ನೇರವಾಗಿ ಒಪ್ಪಿಕೊಂಡಿಲ್ಲ. ಆದರೆ, ಪ್ರಕರಣಕ್ಕೆ ಸಂಬಂಧಿಸಿ ತಂಡದವರು ಕೋರ್ಟ್ ಮೆಟ್ಟಿಲನ್ನು ಹತ್ತುತ್ತಲೇ ಇದ್ದಾರೆ. ತಮ್ಮ ಹೆಸರನ್ನು ತಂಡ ಕೈಬಿಟ್ಟಿದೆ ಎಂದು ನಿರ್ದೇಶಕ ಎಪಿ ಅರ್ಜುನ್ ಆರೋಪಿಸಿದ್ದರು. ಈಗ ಅವರ ಪರವಾಗಿ ಕೋರ್ಟ್ ಆದೇಶ ನೀಡಿದೆ. ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಅವರ ಹೆಸರನ್ನು ಸೇರಿಸಬೇಕು ಎಂದು ಆದೇಶ ನೀಡಿದೆ.

ಎಪಿ ಅರ್ಜುನ್ ಕಡೆಯಿಂದ ನಿರ್ಮಾಪಕರಿಗೆ ವಂಚನೆ ಆಗಿರೋ ಆರೋಪ ಈ ಮೊದಲು ಕೇಳಿ ಬಂದಿತ್ತು. ವಿಎಫ್​ಎಕ್ಸ್​ ಕೆಲಸಕ್ಕೆ ಕಂಪನಿಯೊಂದಕ್ಕೆ ಡೀಲ್ ಕೊಡಲಾಗಿತ್ತು. ಈ ಡೀಲ್​ನಲ್ಲಿ ಅರ್ಜುನ್ ಕಮಿಷನ್ ಪಡೆದಿದ್ದಾರೆ ಎಂಬ ಆರೋಪ ಕೇಳಿ ಬಂತು. ಈ ಆರೋಪದ ಬೆನ್ನಲ್ಲೇ ನಿರ್ದೇಶಕರು ಹಾಗೂ ನಿರ್ಮಾಪಕರ ಮಧ್ಯೆ ಮನಸ್ತಾಪ ಉಂಟಾಯಿತು ಎನ್ನಲಾಗಿದೆ. ಪ್ರಚಾರದ ವೇಳೆ ಉದಯ್ ಮೆಹ್ತಾ ಅವರು ಎಪಿ ಅರ್ಜುನ್ ಹೆಸರನ್ನು ಕೈಬಿಟ್ಟ ಆರೋಪ ಕೇಳಿ ಬಂತು.

ಈ ಬೆನ್ನಲ್ಲೇ ಎ.ಪಿ.ಅರ್ಜುನ್‌ ಕರ್ನಾಟಕ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ‘ಸಿನಿಮಾ ಬಿಡುಗಡೆಗೂ ಮುನ್ನ ಸಂಭಾವನೆ ಪಾವತಿ ಮಾಡಬೇಕು, ಪೋಸ್ಟರ್ ಹಾಗೂ ಪ್ರಚಾರ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಉಲ್ಲೇಖಿಸುವಂತೆ ನಿರ್ಮಾಪಕರಿಗೆ ಸೂಚಿಸಿ’ ಎಂದು ಅರ್ಜುನ್ ಪರ ವಕೀಲರು ಕೋರಿದ್ದರು. ಈ ಅರ್ಜಿಯನ್ನು ಹೈಕೋರ್ಟ್​ನ ರಜಾಕಾಲದ ವಿಭಾಗೀಯ ನ್ಯಾಯಪೀಠದ ನ್ಯಾಯಮೂರ್ತಿ ಎಸ್‌.ಆರ್‌.ಕೃಷ್ಣ ಕುಮಾರ್‌ ಮತ್ತು ಎಂ.ಜಿ.ಉಮಾ ವಿಚಾರಣೆ ನಡೆಸಿ, ಅರ್ಜುನ್ ಪರವಾಗಿ ಆದೇಶ ನೀಡಿದೆ.

‘ಮುಂದೆ ಪ್ರಿಂಟ್ ಮಾಡುವ ದಾಖಲೆಗಳಲ್ಲಿ ಎಪಿ ಅರ್ಜುನ್ ಹೆಸರನ್ನು ಸೇರಿಸಿ. ಪ್ರಮೋಷನ್​ನಲ್ಲಿ ಭಾಗಿ ಆಗಲು ಅವಕಾಶ ನೀಡಿ. ಅರ್ಜುನ್ ಅವರು ತಂಡದ ಬಗ್ಗೆ ಯಾವುದೇ ಕೆಟ್ಟ ಅಭಿಪ್ರಾಯ ವ್ಯಕ್ತಪಡಿಸಬಾರದು’ ಎಂದು ಆದೇಶ ನೀಡಿತು.

ಇದನ್ನೂ ಓದಿ: ತಮ್ಮದೇ ‘ಮಾರ್ಟಿನ್‘ ಸಿನಿಮಾ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ನಿರ್ದೇಶಕ ಎಪಿ ಅರ್ಜುನ್

ಅಕ್ಟೋಬರ್ 11ರಂದು ‘ಮಾರ್ಟಿನ್’ ಸಿನಿಮಾ ರಿಲೀಸ್ ಆಗುತ್ತಿದೆ. ಧ್ರುವ ಸರ್ಜಾ ಅವರ ಲುಕ್ ಗಮನ ಸೆಳೆದಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.