‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​

‘ಬಿಗ್​ ಬಾಸ್​ ಕನ್ನಡ ಸೀಸನ್​ 11’ ಕಾರ್ಯಕ್ರಮದ ಬಗ್ಗೆ ಲಾಯರ್​ ಜಗದೀಶ್​ ಅವರು ಈಗಾಗಲೇ ಹಗುರವಾಗಿ ಮಾತನಾಡಿದ್ದಾರೆ. ಈಗ ಮತ್ತೊಂದು ಬಾಂಬ್​ ಸಿಡಿಸಿದ್ದಾರೆ. ಇತ್ತೀಚೆಗೆ ಟಾಸ್ಕ್​ ಮಾಡುವಾಗ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ಕಳಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆಸ್ಪತ್ರೆಗೆ ಹೋಗಿದ್ದೆಲ್ಲ ನಾಟಕ ಎಂದು ಜಗದೀಶ್ ಹೇಳಿದ್ದಾರೆ.

‘ಪೆಟ್ಟಾಯ್ತು ಅಂತ ಆಸ್ಪತ್ರೆಗೆ ಹೋಗಿ ಬಂದಿದ್ದು ನಾಟಕ’: ಮತ್ತೊಂದು ಬಾಂಬ್ ಹಾಕಿದ ಜಗದೀಶ್​
ಲಾಯರ್​ ಜಗದೀಶ್​
Follow us
ಮದನ್​ ಕುಮಾರ್​
|

Updated on: Oct 04, 2024 | 10:08 PM

ಸ್ವರ್ಗ ವಾಸಿಗಳು ಮತ್ತು ನರಕವಾಸಿಗಳು ಎಂದು ಎರಡು ತಂಡಗಳಾಗಿ ಬಿಗ್​ ಬಾಸ್​ ಮನೆ ಭಾಗ ಆಗಿದೆ. ಸ್ವರ್ಗದಲ್ಲಿ ಕೆಲವು ಸವಲತ್ತುಗಳು ಇವೆ. ಆದರೆ ನರಕದಲ್ಲಿ ಇರುವವರಿಗೆ ಬೇಸಿಕ್​ ಸೌಕರ್ಯಗಳು ಮಾತ್ರ ಇವೆ. ಹಾಗಾಗಿ ನರಕದಲ್ಲಿ ಇರುವವರು ಸ್ವರ್ಗಕ್ಕೆ ಬರಲು ಪ್ರಯತ್ನಿಸುತ್ತಿದ್ದಾರೆ. ಟಾಸ್ಕ್​ ಆಡುವಾಗ ಸಿಕ್ಕಾಪಟ್ಟೆ ಆಗ್ರೆಸಿವ್​ ಆಗಿ ಸ್ಪರ್ಧಿಗಳು ನಡೆದುಕೊಳ್ಳುತ್ತಿದ್ದಾರೆ. ಇತ್ತೀಚೆಗಿನ ಟಾಸ್ಕ್​ನಲ್ಲಿ ನಟ ತ್ರಿವಿಕ್ರಮ್ ಅವರಿಗೆ ಪೆಟ್ಟಾಗಿದ್ದರಿಂದ ಅವರನ್ನು ವೈದ್ಯರ ಬಳಿ ಕಳಿಸಿ ಚಿಕಿತ್ಸೆ ಕೊಡಿಸುವುದು ಅನಿವಾರ್ಯ ಆಯಿತು. ಆದರೆ ತ್ರಿವಿಕ್ರಮ್ ಮಾಡಿದ್ದೆಲ್ಲ ನಾಟಕ ಎಂದು ಲಾಯರ್​ ಜಗದೀಶ್​ ಹೇಳಿದ್ದು, ಕಿಡಿ ಹೊತ್ತಿಸಿದ್ದಾರೆ.

ಲಾಯರ್​ ಜಗದೀಶ್​ ಅವರು ಸ್ವರ್ಗದಲ್ಲಿ ಇದ್ದಾರೆ. 5ನೇ ದಿನ ಬೆಳ್ಳಂಬೆಳಗ್ಗೆ ನರಕದ ಬಳಿ ಬಂದ ಅವರು ಗೋಲ್ಡ್​ ಸುರೇಶ್​ ಎದುರು ನಿಂತು ಈ ಮಾತುಗಳನ್ನು ಹೇಳಿದ್ದಾರೆ. ‘ತ್ರಿವಿಕ್ರಮ್​ ಆಸ್ಪತ್ರೆಗೆ ಹೋಗಿದ್ದು ನಾಟಕ. ಅವನಿಗೆ ಪೆಟ್ಟಾಗಿದೆ ಎಂಬುದು ನಿಜ. ಆದರೆ ಆಸ್ಪತ್ರೆಗೆ ಹೋಗುವ ಮಟ್ಟಕ್ಕೆ ಏನೂ ಆಗಿಲ್ಲ. ಇದೆಲ್ಲ ಅವನ ನಾಟಕ’ ಎಂದು ಲಾಯರ್​ ಜಗದೀಶ್​ ಹೇಳಿದ್ದಾರೆ. ಈ ಮಾತು ಕೇಳಿದ ಬಳಿಕ ಏನು ಉತ್ತರ ನೀಡಬೇಕು ಎಂಬುದು ತಿಳಿಯದೇ ಗೋಲ್ಡ್​ ಸುರೇಶ್​ ಅವರು ನಕ್ಕು ಸುಮ್ಮನಾಗಿದ್ದಾರೆ.

ವಿಚಿತ್ರ ವರ್ತನೆಗಳಿಂದ ಲಾಯರ್​ ಜಗದೀಶ್​ ಗುರುತಿಸಿಕೊಂಡಿದ್ದಾರೆ. ಕಳೆದ ಸಂಚಿಕೆಯಲ್ಲಿ ಅವರು ಬಿಗ್​ ಬಾಸ್​ ಶೋ ವಿರುದ್ಧವೇ ತಿರುಗಿ ಬಿದ್ದಿದ್ದರು. ‘ನಾನು ಈ ಕಾರ್ಯವನ್ನು ನಿಲ್ಲಿಸುತ್ತೇನೆ. ಇಲ್ಲಿನ ಮಾಫಿಯಾ ಎಕ್ಸ್​ಪೋಸ್​ ಮಾಡುತ್ತೇನೆ’ ಎಂದೆಲ್ಲ ಅವರು ಆರ್ಭಟಿಸಿದ್ದರು. ಕೆಲವೇ ಸಮಯದ ಬಳಿಕ ಕ್ಷಮೆ ಕೇಳಿದರು. ಹಾಗಂತ ಅವರು ಆಡಿದ ಮಾತುಗಳನ್ನು ಸುಮ್ಮನೆ ಬಿಡಲು ಸಾಧ್ಯವಿಲ್ಲ. ವೀಕೆಂಡ್​ನಲ್ಲಿ ಖಂಡಿತವಾಗಿಯೂ ಈ ಬಗ್ಗೆ ಸುದೀಪ್​ ಅವರು ಕ್ಲಾಸ್​ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಇದನ್ನೂ ಓದಿ: ‘ಕಿತ್ತೋಗಿರೋ ಪ್ರೋಗ್ರಾಂ’: ಬಿಗ್ ಬಾಸ್​ಗೆ ಅವಮಾನ ಮಾಡಿದ ಲಾಯರ್ ಜಗದೀಶ್​; ಕಾದಿದೆ ಗ್ರಹಚಾರ

ಬಿಗ್​ ಬಾಸ್​ ಕಾರ್ಯಕ್ರಮ ಈ ಬಾರಿ ಹೊಸ ಸ್ವರೂಪದಲ್ಲಿ ಜನರ ಎದುರು ಬಂದಿದೆ. ಇದು 11ನೇ ಸೀಸನ್​ ಆದ್ದರಿಂದ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗಿದೆ. ಸ್ವರ್ಗ ಮತ್ತು ನರಕ ಎಂಬುದು ‘ಬಿಗ್​ ಬಾಸ್ ಕನ್ನಡ’ ಕಾರ್ಯಕ್ರಮದಲ್ಲಿ ಹೊಸ ಕಾನ್ಸೆಪ್ಟ್​. ಇದರಿಂದಾಗಿ ಆಟದ ರೀತಿ-ನೀತಿ ಬಯಲಾಗಿದೆ. 7 ಸ್ಪರ್ಧಿಗಳು ನರಕದಲ್ಲಿ ಇದ್ದಾರೆ. 10 ಜನರು ಸ್ವರ್ಗದಲ್ಲಿ ಇದ್ದಾರೆ. ಉಗ್ರಂ ಮಂಜು, ಲಾಯರ್​ ಜಗದೀಶ್​, ಧನರಾಜ್​, ಧರ್ಮ ಕೀರ್ತಿರಾಜ್​, ಶಿಶಿರ್​, ತ್ರಿವಿಕ್ರಮ್​, ಗೋಲ್ಡ್​ ಸುರೇಶ್​, ಯಮುನಾ ಶ್ರೀನಿಧಿ, ಹಂಸಾ, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಐಶ್ವರ್ಯಾ, ಭವ್ಯಾ ಗೌಡ, ಅನುಷಾ ರೈ, ರಂಜಿತ್, ಗೌತಮಿ ಜಾಧವ್, ಮಾನಸಾ ಅವರು ಸ್ಪರ್ಧಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.