ಕಾಂಗ್ರೆಸ್ನಿಂದ ಸ್ಪರ್ಧಿಸಬೇಕೆಂದು ಸಿದ್ದರಾಮಯ್ಯ ಬಯಸಿದರೆ ಅದು ಅವರ ದೊಡ್ಡ ಗುಣ: ಯೋಗೇಶ್ವರ್
ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಾನು ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದನ್ನು ಬಯಸಿದ್ದರೆ ಅದು ಅವರ ದೊಡ್ಡ ಗುಣ, ತನಗೆ ಕಾಂಗ್ರೆಸ್ ಪಕ್ಷ ಹೊಸದೇನೂ ಅಲ್ಲ, ಹಿಂದೆ ಆ ಪಕ್ಷದಲ್ಲಿದ್ದವನು, ಅಲ್ಲಿಂದ ಆಫರ್ ಬಂದರೆ ಏನು ಮಾಡುವುದು ಅಂತಲೂ ಯೋಚಿಸಿಲ್ಲ, ನೋಡೋಣ ಎಂದು ಯೋಗೇಶ್ವರ್ ಹೇಳಿದರು.
ಬೆಂಗಳೂರು: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತಾಡಿದ ಹಿರಿಯ ಬಿಜೆಪಿ ನಾಯಕ ಸಿಪಿ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಬೇಕೋ, ಬಿಜೆಪಿ ಬಂಡಾಯ ಅಭ್ಯರ್ಥಿ, ಅಥವಾ ಕಾಂಗ್ರೆಸ್ ಪಕ್ಷ ಸೇರಿ ಆ ಪಕ್ಷದ ಟಿಕೆಟ್ನಿಂದ ಸ್ಪರ್ಧಿಸಬೇಕೋ ಅನ್ನೋದನ್ನು ನಿರ್ಧರಿಸಿಲ್ಲ, ತಿರುಪತಿ ಹೋಗಿ ಬಂದ ಬಳಿಕ ತಮ್ಮ ಬೆಂಬಲಿಗರ ಜೊತೆ ಸಭೆ ನಡೆಸಿ ಅವರ ಆಶಯದಂತೆ ಒಂದು ತೀರ್ಮಾನಕ್ಕೆ ಬರೋದಾಗಿ ಹೇಳಿದರು. ನಿನ್ನೆ ಅವರು ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿದರು ಮತ್ತು ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ನೀಡಿದ ಆಫರ್ ಅನ್ನು ತಿರಸ್ಕರಿಸಿದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಚನ್ನಪಟ್ಟಣ ಉಪ ಚುನಾವಣೆ: ಕಾಂಗ್ರೆಸ್ನಿಂದ ಟಿಕೆಟ್ ಆಫರ್ ಬಗ್ಗೆ ಯೋಗೇಶ್ವರ್ ಸ್ಫೋಟಕ ಹೇಳಿಕೆ
Published on: Oct 22, 2024 12:37 PM
Latest Videos