Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್ಡಿಎಫ್ Tv9-Polstrat ಸಮೀಕ್ಷೆ
Kerala Exit Poll Result 2021: ಕೇರಳದ 14 ಜಿಲ್ಲೆಗಳಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ (Exitpoll)ಸಂಗ್ರಹಿಸಿದ ಜನಾಭಿಪ್ರಾಯ ಮತ್ತು ಅಂಕಿ ಅಂಶಗಳ ಪ್ರಕಾರ ಎರಡನೇ ಬಾರಿ ಎಲ್ಡಿಎಫ್ ಕೇರಳದಲ್ಲಿ ಗದ್ದುಗೇರಲಿದೆ ಎಂಬುದನ್ನು ಸೂಚಿಸುತ್ತದೆ.
ದೆಹಲಿ: ಕೇರಳದಲ್ಲಿ ಮತೊಮ್ಮೆ ಎಲ್ಡಿಎಫ್ ಸರ್ಕಾರವೇ ಅಧಿಕಾರಕ್ಕೇರಲಿದೆ ಎಂಬ ಅಭಿಪ್ರಾಯ Tv9-Polstrat ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ. ಕೇರಳದ 14 ಜಿಲ್ಲೆಗಳಲ್ಲಿ ನಡೆಸಿದ ಮತಗಟ್ಟೆ ಸಮೀಕ್ಷೆಯಲ್ಲಿ (Exitpoll)ಸಂಗ್ರಹಿಸಿದ ಜನಾಭಿಪ್ರಾಯ ಮತ್ತು ಅಂಕಿ ಅಂಶಗಳ ಪ್ರಕಾರ ಎರಡನೇ ಬಾರಿ ಎಲ್ಡಿಎಫ್ ಕೇರಳದಲ್ಲಿ ಗದ್ದುಗೇರಲಿದೆ ಎಂಬುದನ್ನು ಸೂಚಿಸುತ್ತದೆ.
ಟಿವಿ9 ಮತಗಟ್ಟೆ ಸಮೀಕ್ಷೆ ಪ್ರಕಾರ ಯಾವ ಪಕ್ಷಕ್ಕೆ ನೀವು ಮತದಾನ ಮಾಡಿದ್ದೀರಿ ಎಂಬ ಪ್ರಶ್ನೆಗೆ ಶೇ 42.70 ಮಂದಿ ಎಲ್ಡಿಎಫ್ ಎಂದು ಉತ್ತರಿಸಿದ್ದಾರೆ. ಅದೇ ವೇಳೆ ಶೇ 40.10 ಮಂದಿ ಯುಡಿಎಫ್, ಶೇ 15.40 ಎನ್ಡಿಎ, ಶೇ, 1.80 ಇತರೆ ಎಂದು ಉತ್ತರಿಸಿದ್ದಾರೆ.
ಕಣದಲ್ಲಿರುವ ಪ್ರಮುಖ ಪಕ್ಷಗಳು ಎಷ್ಟು ಸೀಟು ಗೆಲ್ಲಲಿವೆ ಎಂಬ ಪ್ರಶ್ನೆಗೆ 70-80 ಎಲ್ಡಿಎಫ್, 59 – 69 ಯುಡಿಎಫ್, ಎನ್ ಡಿಎ 0-2 , ಇತರೆ- 0 ಎಂದು ಜನಾಭಿಪ್ರಾಯ ಸಿಕ್ಕಿದೆ.
ಕೇರಳದಲ್ಲಿ 140 ವಿಧಾನಸಭಾ ಕ್ಷೇತ್ರಗಳಿವೆ. 2016ರ ಚುನಾವಣೆಯಲ್ಲಿ ಎಲ್ಡಿಎಫ್- 91 ,ಯುಡಿಎಫ್-47 ,ಎನ್ ಡಿಎ-1 ಇತರೆ -1 ಸೀಟು ಗಳಿಸಿಕೊಂಡಿತ್ತು.
ಇದನ್ನೂ ಓದಿ: Kerala Assembly Elections 2021: ಕೇರಳದಲ್ಲಿ ಬಿಜೆಪಿ ಕಿಂಗ್ ಮೇಕರ್ ಆಗಲಿದೆ: ಇ.ಶ್ರೀಧರನ್