AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ; Tv9-Polstrat ಸಮೀಕ್ಷೆ

Tamil Nadu Exit Poll Result 2021: Tv9 ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಶಗಳ ಪ್ರಕಾರ ಡಿಎಂಕೆ ಪಕ್ಷ 143ರ ರಿಂದ 153ಸೀಟುಗಳನ್ನು ಗಳಿಸುವ ಸಾಧ್ಯತೆ ಇದೆ. ಅದೇ ವೇಳೆ ಎಐಎಡಿಎಂಕೆ 75-80, ಇತರೆ ಪಕ್ಷಗಳು 20-12 ಸೀಟುಗಳಿಸುವ ಸಾಧ್ಯತೆ ಇದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 243 ಸೀಟುಗಳಿವೆ.

Exit Poll Results 2021: ತಮಿಳುನಾಡಿನಲ್ಲಿ ಎಐಎಡಿಎಂಕೆಗೆ ಹಿನ್ನಡೆ, ಡಿಎಂಕೆ ಗದ್ದುಗೇರುವ ಸಾಧ್ಯತೆ;  Tv9-Polstrat ಸಮೀಕ್ಷೆ
ತಮಿಳುನಾಡು ಚುನಾವಣೆ
Follow us
ರಶ್ಮಿ ಕಲ್ಲಕಟ್ಟ
|

Updated on: Apr 29, 2021 | 8:09 PM

ಚೆನ್ನೈ: ತಮಿಳುನಾಡಿನಲ್ಲಿ ಡಿಎಂಕೆ- ಎಐಎಡಿಎಂಕೆ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇಂದು ನಿನ್ನೆಯದಲ್ಲ. ಒಂದು ಬಾರಿ ಡಿಎಂಕೆ ಮತ್ತೊಮ್ಮೆ ಎಐಎಡಿಎಂಕೆ ಎಂಬ ರೀತಿಯಲ್ಲಿ ಅಧಿಕಾರ ನಡೆಸಿದ ಪ್ರಮುಖ ಪಕ್ಷಗಳಿವು.  ಈ ಬಾರಿ ಎಐಎಡಿಎಂಕೆ – ಬಿಜೆಪಿ ಮೈತ್ರಿಕೂಟವು ಗದ್ದುಗೇರಲು ಶತಾಯಗತಾಯ ಪ್ರಯತ್ನ ಪಡುತ್ತಿದೆ. Tv9-Polstrat ಸಮೀಕ್ಷೆಯ ಪ್ರಕಾರ ಡಿಎಂಕೆ ಪರ ತಮಿಳುನಾಡಿನ ಜನ ಹೆಚ್ಚಿನ  ಒಲವು ತೋರಿಸಿದ್ದಾರೆ. Tv9 ಮತಗಟ್ಟೆ ಸಮೀಕ್ಷೆಗಳಲ್ಲಿ (ಎಕ್ಸಿಟ್ ಪೋಲ್) ಸಂಗ್ರಹಿಸಿದ ಅಭಿಪ್ರಾಯ ಮತ್ತು ಅಂಶಗಳ ಪ್ರಕಾರ ಡಿಎಂಕೆ ಪಕ್ಷ 143ರ ರಿಂದ 153ಸೀಟುಗಳನ್ನು ಗಳಿಸುವ ಸಾಧ್ಯತೆ ಇದೆ. ಅದೇ ವೇಳೆ ಎಐಎಡಿಎಂಕೆ 75-80, ಇತರೆ ಪಕ್ಷಗಳು 20-12 ಸೀಟುಗಳಿಸುವ ಸಾಧ್ಯತೆ ಇದೆ. ತಮಿಳುನಾಡು ವಿಧಾನಸಭೆಯಲ್ಲಿ ಒಟ್ಟು 243 ಸೀಟುಗಳಿವೆ.

ಮತದಾರರು ಯಾವ ಪಕ್ಷಗಳು ಅಧಿಕಾರಕ್ಕೇರಲಿವೆ ಎಂಬುದರ ಬಗ್ಗೆ ಭವಿಷ್ಯ ನುಡಿದಿದ್ದು, ಈ ಪೈಕಿ ಪುರುಷರಲ್ಲಿ ಶೇ 45.10 ಮಂದಿ ಡಿಎಂಕೆ, ಶೇ 36.70 ಮಂದಿ ಎಐಎಡಿಎಂಕೆ, ಶೇ 18.20 ಇತರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಮಹಿಳೆಯರಲ್ಲಿ ಶೇ44.90 ಮಂದಿ ಡಿಎಂಕೆ, ಶೇ36.80 ಮಂದಿ ಎಐಎಡಿಎಂಕೆ, ಶೇ 18.30 ಇತರೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮತದಾರರ ಲಿಂಗ ಪ್ರಕಾರ ಡಿಎಂಕೆ ಪರ  ಶೇ 44.90, ಎಐಎಡಿಎಂಕೆ ಪರ ಶೇ 36.80,ಇತರೆ ಶೇ 18.30 ಒಲವು ತೋರಿದ್ದಾರೆ.

ಮತದಾರರಲ್ಲಿ ಜಾತಿ/ಸಮುದಾಯವಾರು ನೋಡಿದರೆ ಎಸ್​ಸಿ ,ಎಸ್​ಟಿಯವರಲ್ಲಿ ಶೇ46.70, ಮುಸ್ಲಿಮರಲ್ಲಿ ಶೇ59.20 ಮತ್ತು ಇತರೆ ಜಾತಿಯ ಶೇ40.30 ಮಂದಿ ಡಿಎಂಕೆ ಅಧಿಕಾರಕ್ಕೇರಲಿದೆ ಎಂದುಹೇಳಿದ್ದಾರೆ. ಎಐಎಡಿಎಂಕೆ ಅಧಿಕಾರಕ್ಕೇರಲಿದೆ ಎಂದು ಎಸ್​ಸಿ ,ಎಸ್​ಟಿಯವರಲ್ಲಿ ಶೇ 36.40, ಮುಸ್ಲಿಮರಲ್ಲಿ ಶೇ 59.20 ,ಇತರೆ ಶೇ 40.30 ಮಂದಿ ಹೇಳಿದ್ದಾರೆ. ಇವೆರಡೂ ಪಕ್ಷಗಳಲ್ಲದೆ ಇತರ ಪಕ್ಷಗಳು ಗದ್ದುಗೇಯೇರಲಿದೆ ಎಂದು ಎಸ್​ಸಿ ,ಎಸ್​ಟಿಯವರಲ್ಲಿ ಶೇ 16.9, ಮುಸ್ಲಿಮರಲ್ಲಿ ಶೇ24.60 ಮತ್ತು ಇತರ ಪಕ್ಷಗಳ ಶೇ 20.80 ಮಂದಿ ಒಲವು ವ್ಯಕ್ತ ಪಡಿಸಿದ್ದಾರೆ.

ಡಿಎಂಕೆ ಪಕ್ಷಕ್ಕೆ ಶೇ 44.90, ಎಐಎಡಿಎಂಕೆ ಪಕ್ಷಕ್ಕೆ ಶೇ 36. 80, ಇತರ ಪಕ್ಷಗಳ ಪರ ಶೇ 18.30 ಮತ ಸಿಗಬಹುದೆಂದು ತಮಿಳುನಾಡಿನ ಮತದಾರರು ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಐಎಡಿಎಂಕೆ ಪಕ್ಷ 133 ಸೀಟುಗಳನ್ನು ಗೆದ್ದು ಅಧಿಕಾರಕ್ಕೇರಿತ್ತು. ಡಿಎಂಕೆ 99 ಸೀಟುಗಳನ್ನು ಗಳಿಸಿದ್ದು ಡಿಎಂಡಿಕೆ ಮತ್ತು ಇತರ ಪಕ್ಷಗಳು ಖಾತೆ ತೆರೆಯಲಿಲ್ಲ.

ಇದನ್ನೂ ಓದಿ: Exit Poll Results 2021: ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ಹ್ಯಾಟ್ರಿಕ್ ಸಾಧ್ಯತೆ; Tv9-Polstrat ಸಮೀಕ್ಷೆ

Exit Poll Result 2021: ಕೇರಳದಲ್ಲಿ ಮತ್ತೊಮ್ಮೆ ಎಲ್​ಡಿಎಫ್ Tv9-Polstrat ಸಮೀಕ್ಷೆ

(tv9 bharatvarsh exit poll results 2021 polstrat Tamilnadu assembly elections exit poll updates in Kannada)

Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Devotional: ಅಕ್ಷತೆ ಇಲ್ಲದ ಮನೆಯಲ್ಲಿ ಐಶ್ವರ್ಯ ಇರೋದಿಲ್ಲ ಯಾಕೆ?
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
Daily Horoscope: ಈ ರಾಶಿಯವರ ವೈವಾಹಿಕ ಜೀವನದಲ್ಲಿ ಏರಿಳಿತ ಸಾಧ್ಯತೆ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಡಿಫರೆಂಟ್ ಹೇಗೆ? ವಿವರಿಸಿದ ದಿಗಂತ್
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ಊಟಕ್ಕೆ ಕುಳಿತ ವೈದ್ಯಕೀಯ ವಿದ್ಯಾರ್ಥಿಗಳ ಪ್ರಾಣವನ್ನೇ ಬಲಿ ಪಡೆದ ವಿಮಾನ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ತಕ್ಷಣ ಆಸ್ಪತ್ರೆಗೆ ಕರೆದುಕೊಂಡ ಹೋದ್ರೂ ಕಾಂತಾರ ಸಿನಿಮಾದ ನಟ ಬದುಕಲಿಲ್ಲ
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ವಿಮಾನ ಅಪಘಾತದಲ್ಲಿ ಪವಾಡದಂತೆ ಬದುಕುಳಿದ ಒಬ್ಬ ವ್ಯಕ್ತಿ!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಕೊಡುಗೆಯೇನು ಅಂದಾಗ ಶೆಟ್ಟರ್ ಅವಕ್ಕಾದರು!
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಹಮದಾಬಾದ್​ನಲ್ಲಿ ವಿಮಾನ ಅಪಘಾತದ ಸ್ಥಳಕ್ಕೆ ಭೇಟಿ ನೀಡಿದ ಅಮಿತ್ ಶಾ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ