ತುಂಬ ಸಾಲ ಮಾಡಿದ್ದೇನೆ, ಎಲ್ಲವನ್ನೂ ಅಡ ಇಟ್ಟಿದ್ದೇನೆ: ಪರಿಸ್ಥಿತಿ ತಿಳಿಸಿದ ಅಜಯ್ ರಾವ್
‘ಯುದ್ಧಕಾಂಡ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಅಜಯ್ ರಾವ್ ಅವರು ನಟಿಸಿ, ನಿರ್ಮಾಣವನ್ನೂ ಮಾಡಿದ್ದಾರೆ. ಸಿನಿಮಾಗಾಗಿ ಅವರು ಸಾಲ ಮಾಡಿದ್ದಾರೆ. ಆ ಕುರಿತು ಟಿವಿ9 ಜೊತೆ ಮಾತನಾಡಿದ್ದಾರೆ. ‘ಇಂದಿಗೂ ರಿಲೀಸ್ ಹಾಗೂ ಪ್ರಚಾರಕ್ಕಾಗಿ ಕೈ ಚಾಚುತ್ತಿದ್ದೇನೆ. ಅದು ಇನ್ನೂ ಮುಗಿದಿಲ್ಲ’ ಎಂದು ಅಜಯ್ ರಾವ್ ಹೇಳಿದ್ದಾರೆ.
ನಟ ಅಜಯ್ ರಾವ್ ಅವರು ‘ಯುದ್ಧಕಾಂಡ’ (Yuddhakaanda) ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಈ ಸಿನಿಮಾಗೆ ಅವರು ಬಂಡವಾಳ ಕೂಡ ಹೂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದಾರೆ. ಆ ಬಗ್ಗೆ ಅಜಯ್ ರಾವ್ (Ajay Rao) ಮಾತನಾಡಿದ್ದಾರೆ. ‘ಸಾಲ ಮಾಡಿ ಸಿನಿಮಾಗೆ ಹಾಕಿದ್ದೇನೆ. ಇದು ಬಿಟ್ಟರೆ ನಾನು ಏನನ್ನೂ ಪ್ರೀತಿಸಿಲ್ಲ. ರವಿಚಂದ್ರನ್ ಅವರು ನನಗೆ ಸ್ಫೂರ್ತಿ. ನಾನು ಕೆಟ್ಟ ಉದ್ದೇಶಕ್ಕೆ ಹಣ ಹಾಳು ಮಾಡಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬ ಒಳ್ಳೆಯ ಉದ್ದೇಶದಿಂದ ಖರ್ಚು ಮಾಡಿದ್ದೇನೆ. ತುಂಬ ಸಾಲ ಮಾಡಿದ್ದೇನೆ. ಎಲ್ಲವನ್ನೂ ಅಡ ಇಟ್ಟಿದ್ದೇನೆ’ ಎಂದಿದ್ದಾರೆ ಅಜಯ್ ರಾವ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Latest Videos
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
