ಗುಜರಾತ್‌ನ ಜಾಮ್‌ನಗರದ ಬಳಿ ವಾಯುಪಡೆಯ ಯುದ್ಧ ವಿಮಾನ ಪತನವಾದ ಕ್ಷಣ ಸಿಸಿಟಿವಿಯಲ್ಲಿ ಸೆರೆ
ಅಪಘಾತದ ಸ್ಥಳವು ಬೆಂಕಿಯಲ್ಲಿ ಮುಳುಗುತ್ತಿದ್ದಂತೆ, ಜಾಮ್‌ನಗರ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದವು. ತಾಂತ್ರಿಕ ದೋಷವನ್ನು ಅನುಭವಿಸಿದ ನಂತರ ಯುದ್ಧ ವಿಮಾನ ರಾತ್ರಿ 9.30ರ ಸುಮಾರಿಗೆ ತೆರೆದ ಮೈದಾನದಲ್ಲಿ ಪತನಗೊಂಡಿತು. ಈ ಕ್ಷಣಗಳನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ.
ಜಾಮ್‌ನಗರ, ಏಪ್ರಿಲ್ 3: ಗುಜರಾತ್‌ನ (Gujarat) ಜಾಮ್‌ನಗರದಲ್ಲಿ ಬುಧವಾರ ಭಾರತೀಯ ವಾಯುಪಡೆಯ (Indian Air Force) ಯುದ್ಧ ವಿಮಾನ ಪತನಗೊಂಡಿತ್ತು. ಈ ಕ್ಷಣಗಳನ್ನು ತೋರಿಸುವ ಸಿಸಿಟಿವಿ ದೃಶ್ಯಾವಳಿಗಳು ಇದೀಗ ವೈರಲ್ ಆಗಿವೆ. ಈ ದೃಶ್ಯಾವಳಿಗಳು ಫೈಟರ್ ಜೆಟ್‌ನ ಡೈವ್ ಮತ್ತು ನಂತರ ದೂರದಿಂದ ಭಾರಿ ಸ್ಫೋಟದ ದೃಶ್ಯವನ್ನು ತೋರಿಸುತ್ತವೆ. ಈ ವೀಡಿಯೊವು ಯುದ್ಧ ವಿಮಾನ ಕೆಲವು ಸೆಕೆಂಡುಗಳ ಕಾಲ ಸ್ಥಿರವಾಗಿ ಹಾರುವುದನ್ನು ಮತ್ತು ನಂತರ ಕೆಳಗೆ ಧುಮುಕುವುದನ್ನು ನೋಡಬಹುದು. ಅದಾದ ಕೆಲವೇ ಸೆಕೆಂಡುಗಳಲ್ಲಿ ಯುದ್ಧ ವಿಮಾನ ನೆಲಕ್ಕೆ ಬಿದ್ದು ಬೆಂಕಿ ಹೊತ್ತಿಕೊಂಡಿತು.
ಅಪಘಾತದ ಸ್ಥಳವು ಬೆಂಕಿಯಲ್ಲಿ ಮುಳುಗುತ್ತಿದ್ದಂತೆ, ಜಾಮ್‌ನಗರ ಅಗ್ನಿಶಾಮಕ ದಳ ಮತ್ತು ಪೊಲೀಸ್ ತಂಡಗಳು ಸೇರಿದಂತೆ ತುರ್ತು ಸೇವೆಗಳು ಸ್ಥಳಕ್ಕೆ ಧಾವಿಸಿದವು. ತಾಂತ್ರಿಕ ದೋಷವನ್ನು ಅನುಭವಿಸಿದ ನಂತರ ಯುದ್ಧ ವಿಮಾನ ರಾತ್ರಿ 9.30ರ ಸುಮಾರಿಗೆ ತೆರೆದ ಮೈದಾನದಲ್ಲಿ ಪತನಗೊಂಡಿತು. ಜೆಟ್‌ನಲ್ಲಿದ್ದ ಇಬ್ಬರು ಪೈಲಟ್‌ಗಳಲ್ಲಿ, ತರಬೇತಿ ಕಾರ್ಯಾಚರಣೆಯಲ್ಲಿದ್ದ ಒಬ್ಬರು ಸುರಕ್ಷಿತವಾಗಿ ಹೊರಹೋಗಿದ್ದರು. ಆದರೆ ಇನ್ನೊಬ್ಬ ಪೈಲಟ್ ಸಕಾಲದಲ್ಲಿ ಫೈಟರ್ ಜೆಟ್‌ನಿಂದ ಹೊರಬರಲು ಸಾಧ್ಯವಾಗದ ಕಾರಣ ಸಾವನ್ನಪ್ಪಿದರು. ಅಪಘಾತದ ಕಾರಣವನ್ನು ತನಿಖೆ ಮಾಡಲು ಮತ್ತು ತಾಂತ್ರಿಕ ವೈಫಲ್ಯಕ್ಕೆ ಕಾರಣವಾದ ಸಂದರ್ಭಗಳನ್ನು ನಿರ್ಧರಿಸಲು IAF ತನಿಖಾ ನ್ಯಾಯಾಲಯಕ್ಕೆ ಆದೇಶಿಸಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ