‘ನಿಂದು ಒಂದೇ ವರ್ಷಕ್ಕೆ ಡಿವೋರ್ಸ್ ಕಣೋ’; ವಿವಾಹದ ಬಳಿಕ ಅಜಯ್ ರಾವ್ ಕೇಳಿದ ಮಾತಿದು
ಅಜಯ್ ರಾವ್ ಅವರು ತಮ್ಮ ಯಶಸ್ವಿ ಮತ್ತು ವೈಫಲ್ಯದ ಪ್ರಯಾಣದ ಕುರಿತು ಮಾತನಾಡಿದ್ದಾರೆ. ಮುಹೂರ್ತದ ನಂಬಿಕೆಗಳ ಬಗ್ಗೆ ಅವರ ದೃಷ್ಟಿಕೋನದ ಬಗ್ಗೆಯೂ ಹೇಳಿದ್ದಾರೆ. ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಅನುಭವಿಸಿದ ಏರಿಳಿತಗಳನ್ನು ಹೇಗೆ ನಿಭಾಯಿಸಿದೆ ಎಂಬುದನ್ನು ಅಜಯ್ ರಾವ್ ಅವರು ವಿವರಿಸಿದ್ದಾರೆ.

ಅಜಯ್ ರಾವ್ (Ajay Rao) ಅವರಿಗೆ ಒಂದು ಕಾಲದಲ್ಲಿ ದೊಡ್ಡ ಯಶಸ್ಸು ಸಿಕ್ಕಿತ್ತು. ಆದರೆ, ನಂತರ ಅವರು ಸಾಲು ಸಾಲು ಸೋಲು ಕಂಡರು. ಗೆಲುವು ಕಂಡಗಾ ಅದನ್ನಯ ತಲೆಗೆ ಏರಿಸಿಕೊಂಡಿದ್ದ ಅವರು ನಂತರ ಸೋಲಿನ ಪೆಟ್ಟು ಬಿದ್ದ ಮೇಲೆ ಕಲಿತರು. ತಮ್ಮನ್ನು ತಾವು ತಿದ್ದುಕೊಂಡರು. ಈಗ ಅವರು ಸೋಲು-ಗೆಲುವನ್ನು ಸರಿಯಾಗಿ ಸ್ವೀಕರಿಸುತ್ತಿದ್ದಾರೆ. ಅಜಯ್ ರಾವ್ ಅವರು ಕೆಟ್ಟ ಮುಹೂರ್ತ ಎಂಬುದನ್ನು ನೋಡುವುದಿಲ್ಲ. ಅವರು ಆರಂಭದಲ್ಲಿ ಸಾಕಷ್ಟು ಕೆಟ್ಟ ಮಾತುಗಳನ್ನು ಕೂಡ ಕೇಳಿದ್ದರು. ಈ ಬಗ್ಗೆ ರ‍್ಯಾಪಿಡ್ ರಶ್ಮಿ ಮಾತನಾಡಿದ್ದಾರೆ.
‘ನಾನು ಶಾಸ್ತ್ರಗಳನ್ನು ನಂಬುತ್ತೇನೆ. ಆದರೆ, ಫಾಲೋ ಮಾಡಲ್ಲ. ಇದು ಕೆಟ್ಟ ಮುಹೂರ್ತ ಹೋಗಬೇಡ ಎಂದು ತಾಯಿ ಹೇಳಿದರೆ ನಾನು ಹೋಗಲ್ಲ. ಯಾರ ಮುಖಾಂತರವಾದರೂ ಗೊತ್ತಾದರೆ ನಾನು ಪಾಲಿಸುತ್ತೇನೆ. ನಾನಾಗಿಯೇ ಹುಡುಕಿಕೊಂಡು ಹೋಗಿ ಮಾಡುವವನಲ್ಲ’ ಎಂದು ಅಜಯ್ ರಾವ್ ಅವರು ವಿವರಿಸಿದ್ದಾರೆ.
‘ನಾನು ಮದುವೆ ಆಗಿದ್ದು, ನನ್ನ ಪ್ರೊಡಕ್ಷನ್ ಮೂಲಕ ಬಂದ ಕೃಷ್ಣಲೀಲಾ ಮಾಡಿದ್ದು ತಪ್ಪಾದ ಮುಹೂರ್ತದಲ್ಲಿ. ನನ್ನ ಯುದ್ಧಕಾಂಡ ಸಿನಿಮಾ ಮಾಡಿದ್ದು ಯಾವ ಮುಹೂರ್ತ ಅನ್ನೋದು ಗೊತ್ತಿಲ್ಲ. ಸಿನಿಮಾ ಡಿಸಾಸ್ಟರ್ ಕಣೋ ಅಂದಿದ್ರು. ತಪ್ಪಾದ ಮುಹೂರ್ತದಲ್ಲಿ ವಿವಾಹ ಆಗಿದ್ದೀಯಾ ಹೀಗಾಗಿ, ನಿನ್ನ ಮದುವೆ ಒಂದು ವರ್ಷವೂ ಇರಲ್ಲ, ಡಿವೋರ್ಸ್ ಆಗುತ್ತದೆ ಎಂದಿದ್ದರು. ನಾನು ಯಾವ ಮುಹೂರ್ತವನ್ನೂ ನೋಡಿಲ್ಲ. ನನಗೆ ಆಸ್ಟ್ರಾಲಜಿ ಬರುತ್ತದೆ. ಕೆಲಸ ಮಾಡಿದ ಬಳಿಕ ನೋಡಿದಾಗ ಅದು ತಪ್ಪಾದ ಮುಹೂರ್ತ ಅಂತ ಗೊತ್ತಾಯ್ತು. ಕೃಷ್ಣಾರ್ಪಣಮಸ್ತು ಅಂದೆ ಅಷ್ಟೇ. ಅವನೇ ಮಾಡಿಸ್ತಾ ಇದಾನೆ’ ಎಂದಿದ್ದಾರೆ ಕೃಷ್ಣ ರಾವ್.
2014ರಲ್ಲಿ ಅಜಯ್ ರಾವ್ ಅವರು ಸಪ್ನಾ ಅವರನ್ನು ವಿವಾಹ ಆದರು. ಇವರು ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇವರದ್ದು ಪ್ರೇಮ ವಿವಾಹ. ಈ ದಂಪತಿಗೆ ಚೆರಿಷ್ಮಾ ಹೆಸರಿನ ಹೆಣ್ಣು ಮಗು ಇದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸಿದ ಸಮಸ್ಯೆಗಳೇನು?
ಅಜಯ್ ರಾವ್ ಅವರು ‘ಯುದ್ಧಕಾಂಡ’ ಹೆಸರಿನ ಸಿನಿಮಾ ಮಾಡಿದ್ದಾರೆ. ಇದಕ್ಕೆ ಪವನ್ ಭಟ್ ಅವರ ನಿರ್ದೇಶನ ಇದೆ. ಇದೇ ತಿಂಗಳು ಸಿನಿಮಾ ರಿಲೀಸ್ ಆಗಲಿದೆ. ಈ ಚಿತ್ರದ ಮೂಲಕ ಅವರು ಎರಡನೇ ಇನ್ನಿಂಗ್ಸ್ ಆರಂಭಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.