AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನ್ನಡ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸಿದ ಸಮಸ್ಯೆಗಳೇನು?

ಅಜಯ್ ರಾವ್ ಅವರು ಸಿನಿಮಾ ಯಶಸ್ಸು ಮತ್ತು ವಿಫಲತೆಯ ಹಿಂದಿನ ನಿಜವಾದ ಚಿತ್ರಣವನ್ನು ಬಹಿರಂಗಪಡಿಸಿದ್ದಾರೆ. ಸಿನಿಮಾ ಹಿಟ್ ಆದರೆ ಇಡೀ ತಂಡಕ್ಕೆ ಹೊಗಳಿಕೆ, ಸೋತರೆ ನಟನಿಗೆ ಮಾತ್ರ ದೂಷಣೆ ಎಂಬ ಸಮಸ್ಯೆಯನ್ನು ಅವರು ಎತ್ತಿ ತೋರಿಸಿದ್ದಾರೆ. ಬರಹಗಾರರು ಮತ್ತು ತಾಂತ್ರಿಕ ವರ್ಗದ ಪಾತ್ರವನ್ನು ಅವರು ಒತ್ತಿಹೇಳಿದ್ದಾರೆ ಮತ್ತು ತಮ್ಮ ದೊಡ್ಡ ಸಾಲದ ಬಗ್ಗೆಯೂ ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದ ಕರಾಳ ಮುಖ ತೆರೆದಿಟ್ಟ ಅಜಯ್ ರಾವ್; ಎದುರಿಸಿದ ಸಮಸ್ಯೆಗಳೇನು?
ಅಜಯ್ ರಾವ್
Follow us
ರಾಜೇಶ್ ದುಗ್ಗುಮನೆ
|

Updated on: Mar 31, 2025 | 7:35 AM

ಸಿನಿಮಾ ಹಿಟ್ ಆದಾಗ ಇಡೀ ತಂಡವನ್ನು ಹೊಗಳಲಾಗುತ್ತದೆ. ಅದೇ ಸಿನಿಮಾ ಸೋತಾಗ ಹೀರೋನ ಬಯ್ಯಲಾಗುತ್ತದೆ ಎಂಬ ಮಾತಿದೆ. ಅನೇಕರು ಇದನ್ನು ಒಪ್ಪಿಕೊಳ್ಳುತ್ತಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆಯುತ್ತಾರೆ. ಈ ಬಗ್ಗೆ ಕನ್ನಡದ ನಟ ಅಜಯ್ ರಾವ್ (Ajay Rao) ಅವರು ಮಾತನಾಡಿದ್ದಾರೆ. ರ‍್ಯಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಅವರು ಈ ಬಗ್ಗೆ ಹೇಳಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಕರಾಳ ಮುಖವನ್ನು ಅವರು ತೆರೆದಿಟ್ಟಿದ್ದಾರೆ. ಅವರ ಹೇಳಿಕೆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತಿವೆ.

‘ಆರ್ಟಿಸ್ಟ್​​ಗಳ ದುರಂತ ಏನಿರುತ್ತದೆ ಎಂದರೆ ನಾವು ಏನಾದರೂ ಕೇಳಿದರೆ ಎಲ್ಲದರಲ್ಲೂ ಮಧ್ಯೆ ಮೂಗು ತೂರಿಸುತ್ತಾನೆ ಎಂದು ಭಾವಿಸುತ್ತಾರೆ. ನಟ ಏನು ಸಫರ್ ಮಾಡುತ್ತಾ ಇರುತ್ತಾನೆ ಎಂಬುದು ಆತನಿಗೆ ಮಾತ್ರ ಗೊತ್ತಿರುತ್ತದೆ. ಸಿನಿಮಾ ಸೋತಾಗ ಫ್ಲಾಪ್ ಹೀರೋ. ಸಿನಿಮಾ ಹಿಟ್ ಆದಾಗ ಅದಕ್ಕೆ ಸುಮಾರು ಜನ ತಂದೆ ತಾಯಿಯರು ಸಿಗುತ್ತಾರೆ. ಬರಹಗಾರ ಹಾಗೂ ತಾಂತ್ರಿಕ ವರ್ಗದವರ ಮೇಲೆ ಸಿನಿಮಾ ನಿಂತಿದೆ’ ಎಂದಿದ್ದಾರೆ ಅಜಯ್ ರಾವ್.

ಇದನ್ನೂ ಓದಿ
Image
ಗಳಿಕೆಯಲ್ಲಿ ಮೊದಲ ದಿನವೇ ಮಕಾಡೆ ಮಲಗಿದ ‘ಸಿಕಂದರ್’
Image
ಮೊದಲ ದಿನವೇ ಸಿಕಂದರ್ ಸಿನಿಮಾ ಲೀಕ್; ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಶಾಕ್
Image
‘ಸಿಖಂಧರ್’ ಸಿನಿಮಾ ನೋಡಿದ ಪ್ರೇಕ್ಷಕರು ನೀಡಿದ ತೀರ್ಪೇನು?
Image
ಐಶಾರಾಮಿ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ, ಬೆಲೆ ಎಷ್ಟು ಕೋಟಿ?

ಇದನ್ನೂ ಓದಿ: ಒಂದು ಕಾಲದಲ್ಲಿ ಬೇಡಿಕೆಯ ಹೀರೋ ಆಗಿದ್ದ ಅಜಯ್​ ರಾವ್​ಗೆ ಈಗ ಕೋಟಿ ಕೋಟಿ ರೂಪಾಯಿ ಸಾಲ

‘ಸಿನಿಮಾ ಗೆದ್ದಿದೆ ಎಂದರೆ ಆ ಕ್ರೆಡಿಟ್​ನ ನಾನು ಬರಹಗಾರ ಹಾಗೂ ನಿರ್ದೇಶಕನಿಗೆ ಕೊಡುತ್ತೇನೆ. ಏಕೆಂದರೆ ನಾನು ಫ್ಲಾಪ್ ಸಿನಿಮಾಗೂ ಅಷ್ಟೇ ಎಫರ್ಟ್ ಹಾಕಿರುತ್ತೇನೆ, ಗೆದ್ದ ಸಿನಿಮಾಗೂ ಅಷ್ಟೇ ಎಫರ್ಟ್ ಹಾಕಿರುತ್ತೇನೆ. ಅವನ ಬರವಣಿಗೆ, ನಿರ್ದೇಶಕನ ಎಫರ್ಟ್​, ನಿರ್ಮಾಪಕ ಹಣ ಹಾಕಿದ್ದರಿಂದ ಸಿನಿಮಾ ಗೆದ್ದಿದೆ. ನನ್ನ ಎಫರ್ಟ್ ಸಿನಿಮಾದಲ್ಲಿ ಒಂದೇ ರೀತಿ ಇರುತ್ತದೆ. ಕಥೆನ, ಬರಹಗಾರನ ನಂಬಬೇಕು’ ಎಂದು ಅವರು ಹೇಳಿದ್ದಾರೆ.

ಅಜಯ್ ರಾವ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಈಗ ಅವರು ಅಷ್ಟು ಅಗ್ರೆಸ್ಸಿವ್ ಆಗಿ ಸಿನಿಮಾಗಳನ್ನು ಮಾಡುತ್ತಿಲ್ಲ. ಅದಕ್ಕೆ ಕಾರಣವನ್ನು ಅವರು ವಿವರಿಸಿಲ್ಲ. ಇನ್ನು ಅಜಯ್ ರಾವ್ ಅವರು ತಮಗೆ ಕೋಟಿ ಕೋಟಿ ರೂಪಾಯಿ ಸಾಲ ಇದೆ ಎಂದು ಹೇಳಿಕೊಂಡಿದ್ದಾರೆ. ಈ ಸಾಲ ಹೇಗಾಯಿತು, ಏಕಾಯಿತು ಎಂಬುದನ್ನು ಅವರು ವಿವರಿಸಿಲ್ಲ. ಅಜಯ್ ರಾವ್ ಅವರು ಸದ್ಯ ‘ಯುದ್ಧಕಾಂಡ’ ಹೆಸರಿನ ಸಿನಿಮಾ ಮಾಡಿದ್ದಾರೆ. ಪವನ್ ಭಟ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಖರ್ಗೆ ಕುಟುಂಬ ನನ್ನ ವಿರುದ್ಧ ನಡೆಸುತ್ತಿರುವ ಪಿತೂರಿ ಗೊತ್ತಿದೆ: ಚಲವಾದಿ
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮದ್ವೆಯಲ್ಲಿ ಡಾನ್ಸ್ ಮಾಡುತ್ತಿರುವಾಗಲೇ ಕುಸಿದುಬಿದ್ದು ಯುವಕ ಸಾವು
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಮುಡಾವನ್ನು ಎಂಡಿಎ ಆಗಿ ಪರಿವರ್ತಿಸಿದ್ದಕ್ಕೆ ಸಿಂಎಂರನ್ನು ಶ್ವಾಘಿಸಿದ ಜಿಟಿಡಿ
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
ಸಿಂಧೂ ಜಲ ಒಪ್ಪಂದ ರದ್ದತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪಾಕಿಸ್ತಾನಿ ರೈತರು
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
16 ವರ್ಷದ ಬಳಿಕ ವಾಡಿಕೆಗಿಂತ ಮೊದಲೇ ಮುಂಗಾರು ಮಳೆ..ಏನು ನಿನ್ನ ಲೀಲೆ...!
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ: ಹವಾಮಾನ ಇಲಾಖೆ
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ಸಚಿವ ಡಾ ಎಂಸಿ ಸುಧಾಕರ್ ನನ್ನ ರಾಜಕೀಯ ಗುರು: ಪ್ರದೀಪ್ ಈಶ್ವರ್
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
ನಾವು ಸಂಸ್ಕಾರವಂತರು, ಸಚಿವೆ ಜೊತೆ ಕೆಟ್ಟದ್ದಾಗಿ ವರ್ತಿಸಲ್ಲ: ಕಾರ್ಯಕರ್ತೆ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
KCET Result 2025: ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ, ನೇರ ಪ್ರಸಾರ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ
ಸಿನಿಮಾ ರಿಲೀಸ್ ಎಂದು ಕನಸು ಕಂಡಿದ್ದರು, ಆದರೆ, ಮೊದಲ ದಿನ ಅವರೇ ಇಲ್ಲ